#ಕಾಸರಗೋಡು ಮ೦ಗಳೂರು ರಾ.ಹೆ. ಪ್ರವೇಶ ಬಂದ್ ಮಾಡಿದ್ದು ಸರಿಯೇ? ಸುಪ್ರೀo ಕೋಟ್೯ ತೀಪು೯ ಕಾಸರಗೋಡಿನ ಅಂಬೂಲೆನ್ಸ್ ಗೆ ಮಂಗಳೂರಿನ ಆಸ್ಪತ್ರೆಗೆ ಬರಲು ಅವಕಾಶ ನೀಡುವ ಭರವಸೆಗೆ ಕಾಯುತ್ತಿದ್ದಾರೆ#
#ಕೊರಾನಾ ಲಾಕ್ ಡೌನ್ ಡೈರಿ.
#ಲೆಟರ್ ನಂಬರ್- 7
6-ಮಾಚ್೯-2020
#ಕಾಸರಗೋಡು ಜನರ ಸಂಕಷ್ಟ
ಕೇರಳದ ಕಾಸರಗೋಡು ಜಿಲ್ಲೆ ಬಹು ಸಂಖ್ಯಾತ ಕನ್ನಡ ಬಾಷಿಕರ ಜಿಲ್ಲೆ ಇಲ್ಲಿ ವಷ೯ ಪೂತಿ೯ ಕನ್ನಡದ ನೂರಾರು ಕಾಯ೯ಕ್ರಮ ನಡೆಯುತ್ತದೆ ಸುಮಾರು 300 ಕ್ಕಿ೦ತ ಹೆಚ್ಚು ಕನ್ನಡ ಶಾಲೆ ಇದೆ.
ಕಾಸರಗೋಡು ಕನಾ೯ಟಕಕ್ಕೆ ಸೇರಲಿ ಎಂಬ ಅವರ ಬೇಡಿಕೆ ಇನ್ನೂ ಈಡೇರಿಲ್ಲ ಈ ಜಿಲ್ಲೆಯ ಕನ್ನಡ ಪ್ರೇಮ ಮಲೆಯಾಳ ಬಾಷಿಕರಿಗೆ ಯಾವಾಗಲೂ ಇರಸು ಮುರುಸು, ಕನ್ನಡಿಗರಿಗೆ ಬೆಳಗಾಂನ ಮರಾಠಿ ಹೋರಾಟಗಾರರ ಮೇಲಿರುವಂತಹದೇ ಅಸಹನೆ ಕೇರಳದಲ್ಲಿನ ಮಲೆಯಾಳ ಬಾಷಿಕರಿಗೆ ಕಾಸರಗೋಡು ಕನ್ನಡಿಗರ ಮೇಲೆ ಇದೆ.
ಕಳೆದ ತಿಂಗಳಿಂದ ಕೇರಳದಲ್ಲಿ ಕೊರಾನಾ ವೈರಸ್ ಪೀಡಿತರು ಹೆಚ್ಚಾಗಿದ್ದು ಕಾಸರಗೋಡಿನಲ್ಲಿ ಇದರ ಸಂಖ್ಯೆ ಹೆಚ್ಚಾಗಿದೆ ಹೆಚ್ಚು ಸಾವು ನೋವು ವರದಿ ಆಗಿದೆ.
ಮಂಗಳೂರಿಂದ 25 ಕಿಮಿ ನಲ್ಲಿ ಕೇರಳ ಬಾಡ೯ರ್ ಇದೆ, ಕಾಸರಗೋಡಿನಿಂದ ಒಂದು ಗಂಟೆ ಪ್ರಯಾಣ ಮOಗಳೂರಿಗೆ, ಆರೋಗ್ಯ ಸಂಬಂದ ಮoಗಳೂರು ಮತ್ತು ಮಣಿಪಾಲ್ ಆಸ್ಪತ್ರೆಗಳನ್ನೆ ಕಾಸರಗೋಡಿನ ಜನತೆ ಯಾವತ್ತೂ ಅವಲಂಬಿಸಿದ್ದಾರೆ.
ಮಾಚ್೯ 24ರಿಂದ ಲಾಕ್ ಡೌನ್ ಪ್ರಾರಂಬವಾದ ಕೂಡಲೆ ಮOಗಳೂರಿಗೆ ಸಂಪಕ೯ ಮಾಡುವ 23 ರಸ್ತೆಗಳನ್ನ ಸ್ಥಳಿಯರು ಬಂದ್ ಮಾಡಿದರು, ತುತು೯ ಚಿಕಿತ್ಸೆಗೆ ಬರುತ್ತಿದ್ದ ಅಂಬೂಲೆನ್ಸ್ ಗೆ ಮಾತ್ರ ಪ್ರಾರಂಭದಲ್ಲಿ ಅವಕಾಶ ನೀಡಿದ್ದು ನಂತರ ಈಗ ಸಂಪೂಣ೯ ಬಂದ್ ಆಗಿದೆ.
ಸುಮಾರು 8 ಜನ ಕನಾ೯ಟಕ ಪ್ರವೇಶ ಮಾಡಲಾಗದೆ ಅಂಬೂಲೆನ್ಸ್ ನಲ್ಲೇ ಜೀವ ಕಳೆದುಕೊಂಡದ್ದು ವಿಷಾದನೀಯ ಘಟನೆ.
ಕೇರಳ ರಾಜ್ಯದ ಮುಖ್ಯಮಂತ್ರಿ ಮಾಡಿದ ಮನವಿಯನ್ನ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಒಪ್ಪದಂತೆ ಮಂಗಳೂರಿನ ಲೋಕಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಬಹಿರಂಗವಾಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ನಂತರ ಕೇರಳ ಹೈಕೋಟ್೯ ರಾ.ಹೆ.ತೆರವು ಮಾಡಲು ಆದೇಶ ಮಾಡಿದ್ದನ್ನ ನಮ್ಮ ರಾಜ್ಯ ಸಕಾ೯ರ ಸುಪ್ರೀಂ ಕೋಟ್೯ಗೆ ಮೇಲ್ಮನವಿ ಮಾಡಿದೆ ಸದ್ಯದಲ್ಲಿ ಸುಪ್ರಿo ಕೋಟ್೯ ನೀಡುವ ತೀಪು೯ಗಾಗಿ ಎರೆಡು ರಾಜ್ಯ ಕಾಯುತ್ತಿದೆ.
ಕನ್ನಡಕ್ಕಾಗಿ, ಕನಾ೯ಟಕ ರಾಜ್ಯಕ್ಕಾಗಿ ಈವರೆಗೆ ಕೇರಳ ರಾಜ್ಯ ಸಕಾ೯ರ ಮತ್ತು ಮಲೆಯಾಳಿ ಬಾಷಿಕರೊ೦ದಿಗೆ ವಿರೋಧ ಕಟ್ಟು ಕೊಂಡಿದ್ದ ಕಾಸರಗೋಡು ಕನ್ನಡಿಗರಿಗೆ ಭ್ರಮನಿರಸನ ನಿರಾಶೆ ಆಗಿದೆ.
ಕಾಸರಗೋಡಿಗೆ ಸಮೀಪವಾಗಿರುವ ಮಂಗಳೂರಿನ ಆಸ್ಪತ್ರೆಗಳಿಗೆ ಅಂಬೂಲೆನ್ಸ್ ಗಳ ಪ್ರವೇಶಕ್ಕೆ ತಡೆಯಬಾರದಾಗಿತ್ತು ಎಂಬ ಮಾನವೀಯ ಮನಸ್ಸುಗಳಿದ್ದರೂ ಯಡೂರಪ್ಪ ಉಭಯ ಸಂಕಟದಲ್ಲಿದ್ದಾರೆ ಇವತ್ತು ನಾಳೆಯಲ್ಲಿ ಬರಲಿರುವ ಸುಪ್ರೀo ಕೋಟ್೯ ತೀಪು೯ ಕಾಸರಗೋಡಿನ ಜನತೆಗೊ೦ದು ಪರಿಹಾರ ನೀಡಲಿ ಎಂದು ಹಾರೈಸೋಣ.
ಲೆ: ಕೆ.ಅರುಣ್ ಪ್ರಸಾದ್.
Comments
Post a Comment