Skip to main content

Posts

Showing posts with the label Memories of Sagar taluk ABHIVRUDDI Horata samithi branch inaugurated by Tumari Ramanna in 1999 December 22.

Blog number 2159. ತುಮರಿಯಲ್ಲಿ 1999 ಡಿಸೆಂಬರ್ 22ರಂದು ತುಮರಿಯ ಸಜ್ಜನ ರಾಮಣ್ಣ ನನ್ನ ಸಾಗರ ತಾಲ್ಲೂಕ್ ಅಭಿವೃದ್ಧಿ ಹೋರಾಟ ಸಮಿತಿ ಶಾಖೆ ಉದ್ಘಾಟನೆ ಮಾಡಿದ್ದರು.

#ಹೊಳೆ_ಆಚೆನವರು #ಅಂತಾನೇ_ಸಾಗರ_ತಾಲ್ಲೂಕಿನ_ಶರಾವತಿ_ನದಿ_ಮುಳುಗಡೆ #ಪ್ರದೇಶದ_ಆಚೆಯ_ಕರೂರು_ಬಾರಂಗಿ_ಹೋಬಳಿಯವರಿಗೆ_ಹೆಸರು #ಸೂರ್ಯಾಸ್ತದ_ನಂತರ_ಲಾಂಚ್_ಸಾಗಾಟ_ಇರುವುದಿಲ್ಲ #ಆದ್ದರಿಂದ_ಆ_ಭಾಗದ_ಜನ_ಒಂದು_ದಿನ_ತಾಲ್ಲೂಕು_ಕೇಂದ್ರದಲ್ಲಿ_ಉಳಿಯಲೇ_ಬೇಕು #ಜನರ_ದೂರು_ದುಮ್ಮಾನಗಳು_ತಾಲ್ಲೂಕಿನ_ಪ್ರಭುಗಳಿಗೆ_ತಲುಪುತ್ತಿರಲಿಲ್ಲ. #ತುಮರಿಯಲ್ಲಿ_1999ರಲ್ಲಿ_ಸಾಗರ_ತಾಲ್ಲೂಕ್_ಅಭಿವೃದ್ಧಿ_ಹೋರಾಟ_ಸಮಿತಿ #ಶಾಖೆ_ಸ್ಥಳೀಯ_ಸಜ್ಜನ_ರಾಮಣ್ಣರಿಂದ_ಉದ್ಘಾಟಿಸಲಾಗಿತ್ತು.     ಕರೂರು -ಬಾರಂಗಿ ಹೋಬಳಿಗಳು ಶರಾವತಿ ನದಿ ಆಣೆಕಟ್ಟಿನಿಂದ ರಸ್ತೆ ಸಂಪರ್ಕ ಕಳೆದುಕೊಂಡು ಲಾಂಚ್ ಸಾಗಾಟ ಅವಲಂಬಿಸಿದೆ ಸಧ್ಯದಲ್ಲೇ ಸೇತುವೆ ಕಾಮಗಾರಿ ಮುಗಿದು ವಾಹನ ಸಂಚಾರ ಪ್ರಾರಂಬದ ಕ್ಷಣಗಣನೆ ಪ್ರಾರಂಭವಾಗಿದೆ.    2004 ರ ನಂತರ ಈ ಭಾಗದಲ್ಲಿ ಹೊಸ ತಲೆಮಾರಿನ  ಜನಪ್ರತಿನಿದಿಗಳ ಆಡಳಿತ ಮತ್ತು ವಿದ್ಯಾವಂತ  ಯುವಕರ ಹೋರಾಟಗಳು ಆರಂಭವಾಗಿ ಅನೇಕ ಬದಲಾವಣೆಗಳು ಆಗುತ್ತಲಿದೆ.    ಇದಕ್ಕೂ ಹಿಂದೆ ಈ ಭಾಗದ ಜನರಿಗೆ ಸರ್ಕಾರದ ಕೆಲಸಗಳು ಸರಾಗವಾಗಿ ಮಾಡಿಸಿಕೊಳ್ಳಲು ಕಷ್ಟವಾಗಿತ್ತು ಮಧ್ಯವರ್ತಿಗಳು ಅನಿವಾಯ೯ವಾಗಿತ್ತು, ತಾಲ್ಲೂಕು ಕೇಂದ್ರದ ಆಡಳಿತ ಪಕ್ಷಗಳ ಮರ್ಜಿ ಅನಿವಾರ್ಯವಾಗಿತ್ತು.   ಸೋತ ಪಕ್ಷದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಕೊಡಬಾರದ ಅಗೋಚರ ಶಿಕ್ಷೆಗಳು ಇರುತ್ತಿತ್ತು.    ಸೂರ...