Skip to main content

Posts

Showing posts with the label Hirehal Ibahim Saheb Shivamogga

4105.ಶಿವಮೊಗ್ಗದ_ಹಿರೇಹಾಳ್_ಇಬ್ರಾಹಿಂ_ಸಾಹೇಬರು.ಕನ್ನಡ_ಸಾಹಿತ್ಯ_ಲೋಕದ_ಮಹಾನ್_ಪೋಷಕರು

ಶಿವಮೊಗ್ಗದ_ಹಿರೇಹಾಳ್_ಇಬ್ರಾಹಿಂ_ಸಾಹೇಬರು. ಕನ್ನಡ_ಸಾಹಿತ್ಯ_ಲೋಕದ_ಮಹಾನ್_ಪೋಷಕರು    ಇವರು ಇಸ್ಲಾಂನ ಪ್ರವಚನ ಕನ್ನಡಕ್ಕೆ ಅನುವಾದಿಸಿದವರು ಮತ್ತು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿದ್ದವರರು.     #ಹಿರೇಹಾಳ_ಇಬ್ರಾಹಿಂ ಸಾಹೇಬರಿಗೆ ಮರಣೋತ್ತರ ಡಾಕ್ಟರೇಟ್ ಪದವಿ ವಿಜಯನಗರದ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ 13 ಜುಲೈ 2023 ರಂದು ತನ್ನ 11ನೇ ಘಟಿಕೋತ್ಸವದಲ್ಲಿ ನೀಡಿತು.   ಆದರೆ ಹಿರೇಹಾಳ ಇಬ್ರಾಹಿಂ ಸಾಹೇಬರ ಕರ್ಮಭೂಮಿ ಶಿವಮೊಗ್ಗ ಜಿಲ್ಲೆಯಲ್ಲಿ ಅವರ ಸ್ಮರಿಸುವ ಕಾರ್ಯಕ್ರಮಗಳು ನಡೆಯಲೇ ಇಲ್ಲ.   ಹಿರೇಹಾಳ ಇಬ್ರಾಹಿಂ ಸಾಹೇಬರ ಬಗ್ಗೆ ಕನ್ನಡ ಸಾಹಿತ್ಯ ಲೋಕದಲ್ಲಿನ ಎಲ್ಲಾ ಹಿರಿಯ ಸಾಹಿತಿಗಳಲ್ಲಿ ಅತ್ಯಂತ ಗೌರವಾಭಿಮಾನ ಕಾರಣ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಪೋಷಕ ಸ್ಥಾನ.    ನಾಡಿನ ಸಾಹಿತಿಗಳಿಗೆ ಶಿವಮೊಗ್ಗಕ್ಕೇ ಆಹ್ವಾನಿಸಿ ಆಧರಿಸಿ ಗೌರವಿಸುತ್ತಿದ್ದ ರೀತಿ ಹಿರೇಹಾಳ ಇಬ್ರಾಹಿಂ ಸಾಹೇಬರ ಬಿಟ್ಟರೆ ಇನ್ನೊಬ್ಬರಿಲ್ಲ.   ಆ ಕಾಲದಲ್ಲಿ ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರ #ಹಯವದನ ನಾಟಕ ಪ್ರದರ್ಶನದ ಪ್ರಾಯೋಜಕತ್ವ ಮಾಡುವ ದೈರ್ಯ ಮಾಡಿದ್ದು ಹಿರೇಹಾಳ ಇಬ್ರಾಹಿಂ ಸಾಹೇಬರು, ನಂತರ ಹಯವದನ ನಾಟಕ ಯಶಸ್ವಿಯಾಗಿ ನಡೆಯಿತು.   ಇಬ್ರಾಹಿಂ ಸಾಹೇಬರು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿದ್ದರು, ರಾಜ್ಯ ಸರ್ಕ...