ಗಾಡ್ ಪಾದರ್ ಇಲ್ಲದೆ ಸಾಗರ ತಾಲ್ಲೂಕಿನ ಹೋಬಳಿ ಕೇಂದ್ರ ತಾಳಗುಪ್ಪದಿಂದ ರಾಜ್ಯ ಕಾಂಗ್ರೇಸ್ ನಲ್ಲಿ ಆಯಕಟ್ಟಿನ ಸ್ಥಾನ ಪಡೆದ ಎಂ.ಎ.ಸಲೀ೦ ಮತ್ತ ಉಗ್ರಪ್ಪರ ಪತ್ರಿಕಾಗೋಷ್ಟಿ ಪೂರ್ವದ ಮಾತು ಕಥೆಯ ಬಿರುಗಾಳಿ.
#ಗೆಳೆಯ_ಸಾಗರದ_ಎಂ_ಎ_ಸಲೀಂ_ರಾಜಕಾರಣದಲ್ಲಿ_ಮುಂದುವರಿಯಲಿ. #ಸಾಗರದಿಂದ_ಕೆಪಿಸಿಸಿ_ಸದಸ್ಯರು. #ಅತ್ಯುತ್ತಮ_ಕ್ರೀಡಾಪಟು_ಮತ್ತು_ಛಾಯಾಚಿತ್ರ_ಗ್ರಾಹಕರು. ನಾನು ಸಾಗರದಲ್ಲಿ ಡಿಪ್ಲೋಮೋ ಓದುವಾಗ #ಎಂ_ಎ_ಸಲೀ೦ ಸಾಗರದ ಎಲ್.ಬಿ. ಕಾಲೇಜಿನಲ್ಲಿ ಪ್ರಸಿದ್ಧರಾಗಿದ್ದರು ಇವರ ತಮ್ಮ ಸುಲೇಮಾನ್ ನನ್ನ ಸಹಪಾಟಿ. ಕ್ರೀಡಾಪಟು, ಛಾಯಾಚಿತ್ರ ಗ್ರಾಹಕರೂ ಆಗಿದ್ದ ಸಲೀ೦ಗೆ ಅನೇಕ ಪ್ರಶಸ್ತಿಗಳೂ ಬಂದಿತ್ತು. ತಾಳಗುಪ್ಪದ ಪೋಲಿಸ್ ಠಾಣೆ ಎದರು ಇವರ ತಂದೆಯ ಕ್ಯಾಂಟೀನ್ ಇತ್ತು, ಕೇರಳ ಮೂಲದ ಕನ್ನಡಿಗರು ಇವರು. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಕೃಷಿ ಇಲಾಖೆಯ ಸಾವಿರಾರು ಕೋಟಿ ಬ್ರಷ್ಟಾಚಾರ ಬಯಲಿಗೆಳೆಯಲು ಸಹಕರಿಸಿದ ಮಿತ್ರ ಇವರು. ಜಾತ್ಯಾತೀತ ಮನೋಭಾವದ, ಕ್ರೀಡಾ ಮನಸ್ಸು ಮತ್ತು ಹುಮ್ಮಸ್ಸಿನ ಸಲೀಂ ಬೆಂಗಳೂರು ಸೇರಿ ಕಾಂಗ್ರೇಸ್ ಪಕ್ಷದ ಗರ್ಭಗುಡಿ ಸೇರಿದ್ದು ಆಶ್ಚರ್ಯವೇ, ನಂತರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಿಂದ ಇವರನ್ನು ಪ್ರದೇಶ ಕಾಂಗ್ರೇಸ್ ಸಮಿತಿ ಸದಸ್ಯರಾದರು ಆಗ ಸ್ಥಳಿಯ ಶಾಸಕರಾಗಿದ್ದ ಕಾಗೋಡು ಪಕ್ಕದ ತಾಲ್ಲುಕ್ ಆಗಿರುವ ಹೊಸನಗರದಿಂದ ಕೆಪಿಸಿಸಿಗೆ ಹೋಗುವಂತ ಪರಿಸ್ಥಿತಿ ಉಂಟಾಯಿತು. ರಾಜ್ಯದ ಕಾಂಗ್ರೇಸ್ ಪಕ್ಷದ ಘಟಾನುಘಟಿಗಳಿಗೆ ಮತ್ತು ದೆಹಲಿ ಹೈಕಮಾಂಡ್ ನೊಂದಿಗೂ ಸಂಪರ್ಕ ಹೊಂದಿರುವ ಸಲೀ೦ ಡಿ.ಕೆ.ಶಿವಕುಮಾರರಿಗೆ ಅತ್ಯಾಪ್ತರಾಗಿದ್ದರು ಅವ...