ಗಾಡ್ ಪಾದರ್ ಇಲ್ಲದೆ ಸಾಗರ ತಾಲ್ಲೂಕಿನ ಹೋಬಳಿ ಕೇಂದ್ರ ತಾಳಗುಪ್ಪದಿಂದ ರಾಜ್ಯ ಕಾಂಗ್ರೇಸ್ ನಲ್ಲಿ ಆಯಕಟ್ಟಿನ ಸ್ಥಾನ ಪಡೆದ ಎಂ.ಎ.ಸಲೀ೦ ಮತ್ತ ಉಗ್ರಪ್ಪರ ಪತ್ರಿಕಾಗೋಷ್ಟಿ ಪೂರ್ವದ ಮಾತು ಕಥೆಯ ಬಿರುಗಾಳಿ.
#ಸಾಗರದಿಂದ_ಕೆಪಿಸಿಸಿ_ಸದಸ್ಯರು.
#ಅತ್ಯುತ್ತಮ_ಕ್ರೀಡಾಪಟು_ಮತ್ತು_ಛಾಯಾಚಿತ್ರ_ಗ್ರಾಹಕರು.
ನಾನು ಸಾಗರದಲ್ಲಿ ಡಿಪ್ಲೋಮೋ ಓದುವಾಗ #ಎಂ_ಎ_ಸಲೀ೦ ಸಾಗರದ ಎಲ್.ಬಿ. ಕಾಲೇಜಿನಲ್ಲಿ ಪ್ರಸಿದ್ಧರಾಗಿದ್ದರು ಇವರ ತಮ್ಮ ಸುಲೇಮಾನ್ ನನ್ನ ಸಹಪಾಟಿ.
ಕ್ರೀಡಾಪಟು, ಛಾಯಾಚಿತ್ರ ಗ್ರಾಹಕರೂ ಆಗಿದ್ದ ಸಲೀ೦ಗೆ ಅನೇಕ ಪ್ರಶಸ್ತಿಗಳೂ ಬಂದಿತ್ತು.
ತಾಳಗುಪ್ಪದ ಪೋಲಿಸ್ ಠಾಣೆ ಎದರು ಇವರ ತಂದೆಯ ಕ್ಯಾಂಟೀನ್ ಇತ್ತು, ಕೇರಳ ಮೂಲದ ಕನ್ನಡಿಗರು ಇವರು.
ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಕೃಷಿ ಇಲಾಖೆಯ ಸಾವಿರಾರು ಕೋಟಿ ಬ್ರಷ್ಟಾಚಾರ ಬಯಲಿಗೆಳೆಯಲು ಸಹಕರಿಸಿದ ಮಿತ್ರ ಇವರು.
ಜಾತ್ಯಾತೀತ ಮನೋಭಾವದ, ಕ್ರೀಡಾ ಮನಸ್ಸು ಮತ್ತು ಹುಮ್ಮಸ್ಸಿನ ಸಲೀಂ ಬೆಂಗಳೂರು ಸೇರಿ ಕಾಂಗ್ರೇಸ್ ಪಕ್ಷದ ಗರ್ಭಗುಡಿ ಸೇರಿದ್ದು ಆಶ್ಚರ್ಯವೇ, ನಂತರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಿಂದ ಇವರನ್ನು ಪ್ರದೇಶ ಕಾಂಗ್ರೇಸ್ ಸಮಿತಿ ಸದಸ್ಯರಾದರು ಆಗ ಸ್ಥಳಿಯ ಶಾಸಕರಾಗಿದ್ದ ಕಾಗೋಡು ಪಕ್ಕದ ತಾಲ್ಲುಕ್ ಆಗಿರುವ ಹೊಸನಗರದಿಂದ ಕೆಪಿಸಿಸಿಗೆ ಹೋಗುವಂತ ಪರಿಸ್ಥಿತಿ ಉಂಟಾಯಿತು.
ರಾಜ್ಯದ ಕಾಂಗ್ರೇಸ್ ಪಕ್ಷದ ಘಟಾನುಘಟಿಗಳಿಗೆ ಮತ್ತು ದೆಹಲಿ ಹೈಕಮಾಂಡ್ ನೊಂದಿಗೂ ಸಂಪರ್ಕ ಹೊಂದಿರುವ ಸಲೀ೦ ಡಿ.ಕೆ.ಶಿವಕುಮಾರರಿಗೆ ಅತ್ಯಾಪ್ತರಾಗಿದ್ದರು ಅವರು ವಿದ್ಯುತ್ ಮಂತ್ರಿ ಆಗಿದ್ದಾಗ ಸಲೀ೦ಗೆ 60 ಎಕರೆ ಸೋಲಾರ್ ಪಾರ್ಕ್ ಮಂಜೂರು ಮಾಡಿಸಿ ಅದನ್ನು ಉಡುಪಿಯ ಮೀನುಗಾರ ಮುಖಂಡ ಗುತ್ತಿಗೆದಾರ ಜಿ.ಶಂಕರ್ ಗೆ ಇವರಿಂದ ಸಬ್ ಕಂಟ್ರಾಕ್ಟ್ ಅಗ್ರಿಮೆಂಟ್ ಮಾಡಿ ಸಲೀಂ ರಿಂದ ಶಂಕರ್ ಗೆ ಹಸ್ತಾಂತರಿಸಿದ್ದಾರೆ.
ಇವತ್ತು ಸಲೀ೦ ಮತ್ತು ಉಗ್ರಪ್ಪ ಪತ್ರಿಕಾಗೋಷ್ಠಿ ಮೊದಲು ಬ್ರಷ್ಟಾಚಾರ ಪರ್ಸೆಂಟೇಜ್ ರಾಜಕಾರಣದ ಬಗ್ಗೆ ಮಾತಾಡಿಕೊಂಡದ್ದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಶಬ್ದ ಮಾಡಿದೆ, ಕಾಂಗ್ರೇಸ್ ಪಕ್ಷದ ವಿರುದ್ದ ಬಿಜೆಪಿಗೊಂದು ಅಸ್ತ್ರವೂ ಸಿಕ್ಕಿದೆ ಇದರಿಂದ ಸಲೀಂರನ್ನು 6 ವರ್ಷ ಪಕ್ಷದಿಂದ ಉಚ್ಚಾಟಿಸಿದ್ದಾರೆ.
ಸಲೀಂ ಹೇಳಿದ್ದು ಸುಳ್ಳಲ್ಲ ಆದರೆ ಅವರದೇ ಪಕ್ಷದ ಚೌಕಟ್ಟಿನಲ್ಲಿ ಅವರ ನಡತೆ ತಪ್ಪು ಇದರಿಂದ ವೈಯಕ್ತಿಕವಾಗಿ ಸಲೀ೦ಗೆ ನಷ್ಟವೋ ಅಥವ ಡಿ.ಕೆ. ವಿರೋದಿಗಳಿಂದ ಸಲೀಂಗೆ ಲಾಭವೋ ಗೊತ್ತಿಲ್ಲ.
ಆದರೆ ಗೆಳೆಯ ಸಲೀಂ ಯಾವುದೇ ಗಾಡ್ ಪಾದರ್ ಇಲ್ಲದೆ ತಲುಪಿದ ಸ್ಥಾನ ಸಣ್ಣದಲ್ಲ ಆದರೆ ಈ ಘಟನೆ ಅವರ ಮುಂದಿನ ದಿನದ ರಾಜಕಾರಣದಲ್ಲಿ ಬೀರುವ ಪರಿಣಾಮ ಏನು ಅಂತ ಗೊತ್ತಿಲ್ಲ.
ಈಗ ಬಂದಿರುವ ರಾಜಕಾರಣದ ಗಂಡಾಂತರ ಸಲೀಂ ಜೀವನದಲ್ಲಿ ಕರಗಿ ಹೋಗಿ ಮುಂದಿನ ಅವರ ರಾಜಕಾರಣ ಜೀವನ ಪ್ರಜ್ವಲಿಸಲಿ ಎಂದು ಗೆಳೆಯನಾಗಿ ಹಾರೈಸುತ್ತೇನೆ.
Comments
Post a Comment