#ಪ್ರವಾಸಿ ಕಂಡ ಇಂಡಿಯಾ ಪುಸ್ತಕದಲ್ಲಿ ಬುದ್ಧಿವಂತ ಬ್ರಾಹ್ಮಣ ಪುರೋಹಿತರ ಒಂದು ವೃತ್ತಾಂತವನ್ನ ಪ್ರವಾಸಿ ಎಬಿ ಡೂಬಾ ಬರೆದಿದ್ದಾರೆ ಓದಿ#
18 ಅಥವಾ 19 ನೇ ಶತಮಾನದಲ್ಲಿ ಒಂದು ಊರಿನಲ್ಲಿ 11 ಜನ ಪುರೋಹಿತರು ಬರಗಾಲದ ಕಾರಣ ಉದ್ಯೋಗ ಅರಸಿಕೊಂಡು ಬೇರೆ ಊರಿಗೆ ಹೋಗುತ್ತಾರೆ, ಮಾಗ೯ದಲ್ಲಿ ಊಟ ಉಪಚಾರಕ್ಕಾಗಿ ಬೇಕಾದ ಆಹಾರ ಧಾನ್ಯಗಳನ್ನ ಕಟ್ಟಿಕೊಂಡು ತೆಗೆದು ಕೊಂಡು ಹೋಗುತ್ತಾರೆ.
ಮುಂದಿನ ಊರು ತಲುಪಿ, ಒಲೆ ಹೂಡಿ, ಅಡುಗೆ ಮಾಡಲು ಹೊಸ ಮಡಿಕೆ ತರಲು ಊರ ಒಳಗೆ ಹೋಗುತ್ತಾರೆ. ಆದರೆ ಅವರ ದುರಾದೃಷ್ಟ ಇಡೀ ಊರೇ ಬರಗಾಲದಿಂದ ಗುಳೆ ಹೋಗಿರುತ್ತೆ, ಹೇಗೋ ಏನೋ ಒಬ್ಬ ಅಗಸ ಉಳಿದಿರುತ್ತಾನೆ ಅವನ ಹತ್ತಿರ ಇವರ ಅಡುಗೆಗೆ ಬೇಕಾದ ಹೊಸ ಮಡಿಕೆ ಕೇಳುತ್ತಾರೆ. ಆದರೆ ಅವನ ಹತ್ತಿರ ಹೊಸ ಮಡಕೆಗಳು ಇರುವುದಿಲ್ಲ. ಆದರೆ ಆತ ಬಳಸಿದ ಮಡಕೆಗಳನ್ನ ಇವರು ಕೇಳಿದರೂ ಆತ ಕೊಡುವುದಿಲ್ಲ ಕಾರಣ ಶೂದ್ರ ಬಳಸಿದ ಮಡಿಕೆ ಬ್ರಾಹ್ಮಣ ಬಳಸುವಂತಿಲ್ಲ ಬಳಸಿದರೆ ಅದು ನೀಡಿದವನಿಗೆ ಪಾಪ ಬರುತ್ತೆ ಅಂತ. ಬರಗಾಲದ ಊರಿನಲ್ಲಿ ಇದೆಲ್ಲ ಪಾಲಿಸಲು ಹೋದರೆ ಉಪವಾಸದಿಂದ ಸಾಯಬೇಕೆಂದು ಬಳಸಿದ ಮಡಕೆಯನ್ನ ಒತ್ತಾಯದಿಂದ ತರುತ್ತಾರೆ. ಇವರಲ್ಲಿನ ಒಬ್ಬ ಪುರೋಹಿತ ಇದು ಧಮ೯ ವಿರೋಧ ಅಂತ ಇವರು ತಯಾರಿಸಿದ ಅಡುಗೆ ನಿರಾಕರಿಸಿ ಉಪವಾಸ ಉಳಿಯುತ್ತಾನೆ.
ಮರು ದಿನ ಮುಂದಿನ ಊರಿಗೆ ತಲುಪಿದಾಗ ಅಲ್ಲಿನ ಸ್ವಜಾತಿ ಬಾಂಧವರ ಎದುರು ಈ ವಿಚಾರ ಪ್ರಸ್ತಾಪ ಆಗಿ ಹಿಂದಿನ ದಿನ ಶೂದ್ರರು ಬಳಸಿದ ಮಡಕೆಯಲ್ಲಿ 10 ಜನ ಪುರೋಹಿತರು ಅಡುಗೆ ತಯಾರಿಸಿ ಊಟ ಮಾಡಿದ್ದರಿಂದ ಧಮ೯ ವಿರೋಧಿ ಕಾಯ೯ ನಡೆಸಿ ಜಾತಿ ಭ್ರಷ್ಟರಾಗಿದ್ದಾರೆಂದು ಈ ಅಡುಗೆ ಬಳಸದೆ ಉಪವಾಸ ಉಳಿದ ಪುರೋಹಿತ ದೂರುತ್ತಾನೆ.
ನಂತರ ಉಳಿದ ಬುದ್ಧಿವಂತ 10 ಬ್ರಾಹ್ಮಣರು ಹಿಂದಿನ ದಿನ ತಾವು ಎಷ್ಟು ತಡೆದರೂ ಕೇಳದೆ ಈಗ ದೂರು ನೀಡುತ್ತಿರುವವನೆ ಅಗಸ ಬಳಸಿದ ಮಡಕೆಯಲ್ಲಿ ಅಡುಗೆ ಮಾಡಿ ಊಟ ಮಾಡಿದ ಎಂದು, ತಾವು ಪರಿಪರಿ ಆಗಿ ಶಾಸ್ತ್ರ ನಿಷೇಧ ವಿವರಿಸಿದರೂ ಕೇಳಲಿಲ್ಲ ಎಂದಾಗ ಹತ್ತು ಜನರ ಒಗ್ಗಟ್ಟಿನ ಸಾಕ್ಷದ ಎದುರು ನಿಜ ಶಾಸ್ತ್ರ ನಿಷ್ಠ ಬ್ರಾಹ್ಮಣನ ವಾದ ಬಿದ್ದು ಹೋಗಿ ಅವನನ್ನ ಧಮ೯ ವಿರೋಧಿ ಎಂದು ಜಾತಿಯಿಂದ ಬಹಿಷ್ಕಾರ ಹಾಕಿ ಊರಿಂದ ಓಡಿಸಿ ಬಿಡುತ್ತಾರೆ.
Comments
Post a Comment