Skip to main content

ದೇಶಕ್ಕೊಬ್ಬರೆ ಮಹಾತ್ಮಾ ಗಾಂಧೀಜಿ ಇವತ್ತು ಅವರ ಜಯ೦ತಿ.

#ಗಾ೦ಧಿ_ಜಯ೦ತಿ.
#ದೇಶಕ್ಕೊಬ್ಬರೇ_ಮಹಾತ್ಮ_ಗಾಂಧೀಜಿ.
#ಗೊರೂರು_ರಾಮಸ್ವಾಮಿ_ಅಯ್ಯಂಗಾರರು_ಅನುವಾದಿಸಿದ_ಗಾಂಧಿ_ಆತ್ಮಚರಿತ್ರೆ_ಇನ್ನೊಮ್ಮೆ_ಓದಿ.

   ಸಣ್ಣವನಿದ್ದಾಗಲೇ ಐದನೆ ತರಗತಿಯಲ್ಲಿದ್ದಾಗ ನಮ್ಮ ತಂದೆ ತಂದು ಕೊಟ್ಟ ಗೊರೂರು ರಾಮಸ್ವಾಮಿ ಅಯ್ಯಂಗಾರರು ಬಾವಾನುವಾದ ಮಾಡಿದ್ದ ಗಾಂಧೀಜಿ ಆತ್ಮಚರಿತ್ರೆ ಓದಿದ ಮೇಲೆ ಗಾಂದೀಜಿ ಅರ್ಥ ಆಗಿದ್ದು.
  ಅಲ್ಲಿವರೆಗೆ ಗಾಂದೀಜಿ ಅಂದರೆ ಶಾಲೆಯ ಗೋಡೆ ಮೇಲಿನ ಪೋಟೋದಿಂದ ಮಾತ್ರ ಗೊತ್ತಿದ್ದರು, ಗಾಂದಿ ಜಯಂತಿಯ೦ದು ಆಗಿನ ಆನಂದಪುರಂನ ಐಕಾನ್ ಆಗಿದ್ದ ದೈಹಿಕ ಶಿಕ್ಷಕರಾಗಿದ್ದ #ಕೃಷ್ಣಪ್ಪ (SRK) ದಲಿತರ ಕೇರಿಗಳಲ್ಲಿ ನಡೆಸುತ್ತಿದ್ದ ಶ್ರಮದಾನ ಗಾಂಧಿ ನೆನಪು ಪುನರಾವರ್ತನೆ ಆಗುತ್ತಿತ್ತು, ಕೆಲ ತರಗತಿಯಲ್ಲಿ ಗಾಂಧಿ ಜೀವನದ ತುಣುಕು ಅದರಲ್ಲಿ ವಿಶೇಷವಾಗಿ ತಂದೆಯ ಜೇಬಿಂದ ಹಣ ಕದಿಯುವುದು ನಂತರ ತಮ್ಮ ಅರಿವಾಗಿ ತಂದೆಯಲ್ಲಿ ಕ್ಷಮೆ ಕೇಳಿದ ಘಟನೆ ಅಚ್ಚಳಿಯದೇ ಉಳಿದಿತ್ತು.
  ಆಗೆಲ್ಲ ಗಾಂಧೀ ವಿರೋದಿಗಳು ಈಗಿನಂತೆ ವಿಜೃಂಬಿಸುತ್ತಿರಲಿಲ್ಲ, ಶಾಲಾ ದಿನದಲ್ಲಿ ಪೋಲಿ ಪುಂಡನೆಂಬ ಹೆಸರು ಪಡೆದಿದ್ದ ಗೆಳೆಯ ಗಾಂಧಿ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿದ್ದ, ಗಾಂದಿಯಿಂದ ದೇಶ ಹಾಳಾಯಿತು ಅಂತಿದ್ದ ಇದು ಹೆಡ್ ಮಾಸ್ತರ್ ನಾಗಭೂಷಣರಾವ್ ಕಿವಿಗೆ ತಲುಪಿತು.
  ಅವತ್ತು ಅವರೇ ನಮ್ಮ ತರಗತಿಗೆ ಬಂದು ವಿಚಾರಣೆ ನಡೆಸಿದರು, ನಮಗೆ ಅನ್ನಿಸಿದ್ದು ಹೆಡ್ ಮಾಸ್ತರ್ ಲಾಠಿ ಶಿಕ್ಷೆ ನೀಡುತ್ತಾರಂತ ಆದರೆ ಆರೋಪ ಮಾಡುತ್ತಿದ್ದ ವಿದ್ಯಾರ್ಥಿ ತನ್ನ ಪೋಷಕರು ಹೇಳುತ್ತಿದ್ದದ್ದನ್ನು ಇಲ್ಲಿ ಹೇಳಿದ್ದಾಗಿ ಅವರ ತಂದೆ ಅದಕ್ಕೆಲ್ಲ ಸಾಕ್ಷಿಯಾಗಿ ಒಂದು ಪುಸ್ತಕ ತೋರಿಸುವುದು ಇತ್ಯಾದಿ ಹೇಳಿದ.
   ಪಿನ್ ಡ್ರಾಪ್ ಸೈಲೆನ್ಸ್ ಆದ ಆ ತರಗತಿಯಲ್ಲಿ ಸಣ್ಣದಾಗಿ ಹೆಡ್ ಮಾಸ್ತರರ ಕಣ್ಣೀರಿನಿಂದ ಪ್ರಾರಂಭ ಆದ ಅಳು ದೊಡ್ಡ ಬಿಕ್ಕಳಿಕೆ ಆಯಿತು ಇದನ್ನು ನೋಡಿ ಗಾಂಧೀಜಿಗೆ ಬೈಯುವ ಗೆಳೆಯನೂ ಸೇರಿ ಇಡೀ ತರಗತಿ ಅಳುತ್ತಿತ್ತು ಸಮೂಹ ಸನ್ನಿಯಲ್ಲಿ.pplllllpllllllllplpplppppppllppplplpllppppppppppppppppppppppplpppppppppppplppppplppppppplpppllplpplppppppppppppplplpplppppllpppppplpplppplplpllpllllpppllpllllpplllpppllllllplplplllllpllllplpplplplllllllllllllllllpllllplpllllllllllllllllplppplllllllplpplpllplplllpllllplllplpplplllplplpllllllpllllllpllllppplplplpllllplpplpllllplllllplllppplplpllplllpllppplllllllllllplplpppllllplppplplpllllplllpppllplpllplpllpppllplllpllpplllpppplllplllpllplppppplppplpppplpppppllllllplpppppplplpllpplppllpppllpplpppplplllppppllllpplpllppllllpppplplllllplplpplppppplpplppplpplppllllpplllpplplllllpllllppllpllllllllpllpplpplplpllppllpplppppppllplpppplplppllplpppllppllplpplpppplllllppplplpppppllppllpppplplplllppppppppplpplpllppppllllppllppplppppplpllpppppppppplppplppplplplppllpllppplplppppppppppllppppppppppplppllpppppppppppppppplppppllplpppppppplpppppppppppppppplpplpplpppppppplpllplpplpppppplpllpppplpppppppplpplppppplpppplppplpppppppppplppppppppplpppplpplpppppppppppplppppppppppppplpppppppplppppppppppppplppppplpppplpppppppppppppppppppppppppppplppppppppppppppppppppppppppplppllpppplllllplpppllllppppppplpplpppllppplpppplppppppplplllpllpllppppplpllpllllpllpplplllllllplpllpllpplplpllllplplllpplllllppplllpplppllllllpplplplpplpppplpppppplpppppppplppppppppppplppllllpllllllllllplpllllllllplllllplppplpppplpppppllppppplplppppppppppppppppplpppppppppppllpplpppplppllpllpppplpppppppppppppppppplpppplpppppppppppplppplpppppppppppppppppppppppppppppppppppppppppplpppllplpppllplpppppppppppllplllpllppplppplplplppllpplplpplppplllppppppllpllppppppppppppppplppppppppppppppppppppplppppplppppppppppppppppppplppppppppppppppppppppppppppppppppppppppppppppppppppppppppppppppppppppppppppppplppppppppppppppppppplppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppplppppppppppppppppplppppppppppppppppppppppppppppppppppppppppppppppppppppppppppppppppppppppppppppplppppppppppppppppppppppppppppppppppppppppppppppppppppppppppppppppppppppppppppppppppppppppppppppp  ಗಾಂಧೀಜಿ ಬ್ಯಾರಿಸ್ಟರ್ ಆಗಿದ್ದು ಆಫ್ರಿಕಾದಲ್ಲಿ ವಕಾಲತ್ತು ಪ್ರಾರಂಬಿಸಿದ್ದು, ಅಲ್ಲಿ ಬ್ರಿಟಿಷರ ವರ್ಣಬೇಧ ಪ್ರತಿಭಟಿಸಿದ್ದು ಭಾರತಕ್ಕೆ ಬಂದಾಗ ಇಲ್ಲಿನ ಸ್ವಾತಂತ್ರ ಹೋರಾಟಗಾರರು ಗಾಂಧೀಜಿಗೆ ಹೋರಾಟದ ನೇತೃತ್ವ ವಹಿಸಲು ವಿನಂತಿಸುವುದು, ಗಾಂಧಿ ಇಡೀ ದೇಶ ರೈಲಿನಲ್ಲಿ 3 ನೇ ದರ್ಜೆ (ಈಗಿಲ್ಲ) ಬೋಗಿಯಲ್ಲಿ ಪ್ರಯಾಣಿಸಿ ದೇಶ ಅವಲೋಕಿಸಿ ನಂತರ ಈ ದೇಶ ಸ್ವಾತಂತ್ರ ಹೋರಾಟದ ಚುಕ್ಕಾಣಿ ಸ್ವಾತಂತ್ರ ಪಡೆಯುವ ತನಕ ಮುನ್ನಡೆಸುವುದು, ಈ ಅಹಿಂಸಾತ್ಮಕವಾದ ಹೋರಾಟಕ್ಕೆ ಇಡೀ ದೇಶದ ಜನತೆ ಹಿಂಬಾಲಿಸುವುದು, ಅಹಿಂಸೆ- ಸತ್ಯ - ದೇವರು - ಜಾತ್ಯಾತೀತತೆ- ಸರಳ ಜೀವನ - ಆಹಾರ - ದೇಶಿ ವೈದ್ಯ - ಶಿಕ್ಷಣ - ಸ್ತ್ರಿ ಸಮಾನತೆ ಬಗ್ಗೆ ಗಾಂಧಿಜೀ ಬೋದನೆ ಆಚರಣೆ ಮತ್ತು ಬರವಣಿಗೆ ನಂತರ ಅವರೇ ಈ ದೇಶದ ಅಧಿಕಾರದ ಚುಕ್ಕಾಣೆ ಹಿಡಿಯಬಹುದಾಗಿತ್ತಾದರೂ ಅವರು ಅದರಿಂದ ದೂರ ಸರಿಯುವುದು, ಅವರ ಕುಟುಂಬದವರಾರಿಗೂ ಹಣ ಅಧಿಕಾರ ನೀಡದ ಅವರ ಪರೋಪಕಾರಿ ಜೀವನ ನಂತರ ದೇಶ ವಿಭಜನೆ ಆಗಿದ್ದು ಆಗ ಗಾಂಧಿಯನ್ನು ಗುಂಡಿಕ್ಕಿ ಕೊಂದ ದ್ದರ ವರೆಗೆ ಅವರು ಹೇಳಿದ ಸಂಪೂರ್ಣವಾದ ಸಂಕ್ಷಿಪ್ತ ಕಥೆ ಮತ್ತೊಮ್ಮೇ ಇಡೀ ತರಗತಿಯಲ್ಲಿ ಕಣ್ಣೀರ ದಾರೆ ಸುರಿಸಿತು.
  ಆಗ ಹೆಡ್ ಮಾಸ್ತರ್ ಎದ್ದು ಹೊರಟವರು ತಿರುಗಿ ಗಾಂದಿ ನಿಂದಿಸುವ ವಿದ್ಯಾರ್ಥಿಗೆ ಕೇಳಿದರು ನೀನು ಬೈಯುತ್ತಿದ್ದ ಗಾಂದಿ ಇವರೇನಾ? ಅಂದಾಗ ಅತ್ತು ಅತ್ತು ಕಣ್ಣೀರಾಗಿದ್ದ ಆತ "ಇಲ್ಲಾ ಸಾರ್ ನಾನು ಹೇಳಿದ್ದು ಬೇರೆ ಗಾಂದಿ" ಅಂದಾಗ ನಮಗೇ ಆಶ್ಚಯ೯ ಮತ್ತು ಬೇರೆ ಗಾಂದೀ ಯಾರು ಅಂತ ಆಗ ಅವರು ಹೇಳಿದ್ದು ಬೇರೆ ಗಾಂದಿ ಇಲ್ಲ ಒಬ್ಬರೇ #ಮಹಾತ್ಮ_ಗಾಂದೀಜಿ ಅವರ ಬಗ್ಗೆ ತಿಳಿಯದವರು ಓದದವರು ಸ್ವಾತಂತ್ರ ಹೋರಾಟದ ಅರಿವೇ ಇಲ್ಲದವರು ಈ ರೀತಿ ಗಾಂದೀಜಿ ವಿರುದ್ದ ಮಾತಾಡುತ್ತಾರೆ ಅಂದಿದ್ದು ಪ್ರತಿವಷ೯ ಗಾಂಧೀ ಜಯಂತಿಯಂದು ನೆನಪು ಆಗುತ್ತದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...