Skip to main content

Posts

Showing posts with the label September 30 Kagodu Satyagraha Netha H.Ganapathiyappa death anniversary

Blog number 993.ಸೆಪ್ಟೆಂಬರ್ 30 ಕಾಗೋಡು ಭೂ ಹೋರಾಟದ ನೇತಾರ ಹೆಚ್.ಗಣಪತಿಯಪ್ಪ ಅವರ ಪುಣ್ಯ ತಿಥಿ.

#ಕಾಗೋಡು_ಹೋರಾಟದ_ರೂವಾರಿ #ಹೆಚ್_ಗಣಪತಿಯಪ್ಪರ_ನೆನಪು       ನಾನು ಗುರು ಅಂತ ಕರೆದಿದ್ದು ಇವರೊಬ್ಬರಿಗೆ ಅದಕ್ಕೆ ಹಲವು ಕಾರಣ ಇದೆ, ನಿನ್ನೆ ರಾತ್ರಿ ಕನಸಿನಲ್ಲಿ ಗಣಪತಿಯಪ್ಪನವರು ಅವರ ಶಿಸ್ತಿನ ವಸ್ತ್ರ ಅಲಂಕರಿಸಿ ಬಂದಿದ್ದರು.   ಬಿಳಿ ಜುಬ್ಬಾ ಕಚ್ಚೆ ಪಂಜೆ ಮೇಲೆ ಕ್ಯಾಮೆಲ್ ಕಲರ್ ನ ವೇಸ್ಟ್ ಕೋಟ್ ಬಗಲ ಚೀಲದೊಂದಿಗೆ ಬಂದಿದ್ದರು.   ಅವರು ಇಹ ಲೋಕ ತ್ಯಜಿಸಿದ ನಂತರ ಯಾವತ್ತೂ ಕನಸಿಗೆ ಬಂದಿರಲಿಲ್ಲ.    ಗೂಗಲ್ ನಲ್ಲಿ ಅವರ ಬಗ್ಗೆಯ ಮಾಹಿತಿಗಾಗಿ ಕ್ಷಿಕ್ ಮಾಡಿದರೆ ಮೊದಲಿಗೆ ಬಂತು ದಿ ಹಿಂದೂ ಪತ್ರಿಕೆಯ ಅವರ ಇಹ ಲೋಕ ತ್ಯಜಿಸಿದ ವರದಿ.    ಕಾಕತಾಳಿಯ / ಆರನೇ ಇಂದ್ರಿಯಾ/ಸುಪ್ತ ಮನಸ್ಸಿನ ಪುನರ್ ಜ್ಞಾಪಕ ಹೀಗೆ ಯಾವುದೋ 2014 ಸೆಪ್ಟೆಂಬರ್ 30 ರಂದು ಅವರು ವಿದಿವಶರಾದ ದಿನ.    ಇವತ್ತು #ಕಾಗೋಡು_ಹೋರಾಟದ_ರೂವಾರಿ_ಗಣಪತಿಯಪ್ಪರ_ಪುಣ್ಯತಿಥಿ.    ಅವರ ಹೋರಾಟವನ್ನೆ ಜನ ಮರೆತು ಬಿಟ್ಟ ಕಾಲದಲ್ಲಿ ಅವರ ಆತ್ಮಚರಿತ್ರೆ ಸಾಹಿತಿ ಕೋಣಂದೂರು ವೆಂಕಟಪ್ಪ ಗೌಡರಿಂದ ಬರಿಸಿದ್ದು, ಅದಕ್ಕೆ ದಾಖಲೆ ಹುಡುಕಾಟ, ಪುಸ್ತಕ ಮುದ್ರಣಕ್ಕೆ ಹಣಕ್ಕಾಗಿ ಪ್ರಯತ್ನ, ಪುಸ್ತಕ ಮುದ್ರಿಸದಂತೆ ಬಾಹ್ಯ ಒತ್ತಡ, ಬಿಡುಗಡೆ ಮಾಡದಂತೆ ಕಾಯ೯ಕ್ರಮ ಹಾಳು ಮಾಡುವ ಪ್ರಯತ್ನ, ಕೆಟ್ಟ ವಿಮಶೆ೯ ಬರೆದ ವಿಮರ್ಶಕರು,ಕಾಗೋಡಿನಲ್ಲಿ ಲೋಹಿಯಾ ಆ ಕಾಲದಲ್ಲಿ ಕಾಗೋಡಿನ ವೀರ ಹೋರಾಟಗಾರರನ್ನ ...