ಕೆಳದಿ ರಾಜ ವಂಶಸ್ಥರು ಅಂತಃಪುರ ವಾಸಿಗಳಿಗಾಗಿ ನಿರ್ಮಿಸಿದ್ದ ಸುಂದರವಾದ ಈಜು ಕೊಳಗಳ ಸಂಕೀರ್ಣ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಿದನೂರು ನಗರದ ಸಮೀಪದ ದೇವಗಂಗೆಯಲ್ಲಿದೆ.
#ಜಲ_ವಿಜ್ಞಾನಿಗಳಿಗೆ_ನೈಸಗಿ೯ಕ_ಈಜು_ಕೊಳದ_ಆದುನಿಕ_ಪ್ರತಿಪಾದಕರಿಗೆ_ಮತ್ತು_ಇತಿಹಾಸ_ಪ್ರಿಯರಿಗೆ #ಕೈ_ಬೀಸಿ_ಕರೆಯುತ್ತಿರುವ_ದೇವಗಂಗೆಯ_ರಾಜವಂಶಸ್ಥರ_ಖಾಸಾಗಿ_ಕೊಳಗಳು #ಬಿದನೂರು_ನಗರದ_ಈ_ಸು೦ದರ_ಈಜು_ಕೊಳಗಳ_ಸಂಕೀಣ೯ಕ್ಕೆ_ಒಮ್ಮೆಯಾದರೂ_ನೀಡಿ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಿದನೂರು ನಗರದ ಕೋಟೆಯಿ೦ದ ಕೊಲ್ಲೂರು ಮಾಗ೯ದಲ್ಲಿ 5-6 ಕಿ.ಮಿ. ಸಾಗಿದರೆ ಅಲ್ಲಿ ಬೈಸೆ ಎಂಬ ಹಳ್ಳಿ ಸಿಗುತ್ತದೆ, ಈ ಹಳ್ಳಿಯ ಬಲ ಬಾಗದಲ್ಲಿ ಕೆಳದಿ ಅರಸರ ಶಿಥಿಲ ಸಮಾದಿಗಳು ಇದೆ. ಇಲ್ಲೇ ಒಂದು ರಸ್ತೆ ಬಲಕ್ಕೆ ದೇವಗಂಗೆಗೆ ಹೋಗುತ್ತದೆ, ಇಲ್ಲಿಯೇ ಕೆಳದಿ ಅರಸರ ಅದ್ಬುತ ನಿಮಾ೯ಣದ ಈಜು ಕೊಳಗಳ ಸಂಕೀಣ೯ವಿದೆ. ಈಗೆಲ್ಲ ನೈಸಗಿ೯ಕ ಈಜುಕೊಳಗಳ ಬಗ್ಗೆ ವಿದೇಶಗಳಲ್ಲಿ ವಿಪರೀತ ಕಯಾಲಿ ಈಗ ಪ್ರಾರಂಭ ಆಗಿದೆ ಏಕೆಂದರೆ ಅದುನಿಕ ಈಜು ಕೊಳಗಳು ಕಾರ್ಬನೈಸೇಷನ್ ನಿರಂತರ ಮಾಡುವುದರಿಂದ ಅನೇಕ ಚರ್ಮ ರೋಗಕ್ಕೆ ಕಾರಣ ಆದರೆ 350 - 400 ವಷ೯ದ ಹಿಂದೆ ಕೆಳದಿ ಅರಸರು ನಿಮಿ೯ಸಿದ ಈ ನೈಸಗಿ೯ಕ ಈಜು ಕೊಳಗಳ ಸಂಕೀಣ೯ ನಿತ್ಯ ನೂತನ ಎಂಬಂತೆ ನಿರಂತರವಾಗಿ ಸದಾ ನೀರು ಹರಿದು ಹೋಗುವ ನೈಸರ್ಗಿಕ ಈಜು ಕೊಳಗಳಾದ್ದರಿಂದ ಸಂಶೋದನೆಗೆ ಆಹ೯ವಾಗಿದೆ. ವಷ೯ ಪೂತಿ೯ ಈ ಈಜು ಕೊಳದಲ್ಲಿ ಒಂದೇ ಮಟ್ಟದಲ್ಲಿ ನೀರು ಇರುತ್ತದೆ ಮತ್ತು ನೀರು ಸದಾ ಹರಿಯುತ್ತಿರುತ್ತದೆ. ದೊಡ್ಡ ಕೊಳ ಸಂಪೂಣ೯ ಶಿಲೆ ಕಲ್ಲಿನಿಂದ ನಿಮಿ೯ಸಿದ್ದ...