#ಯಡೇಹಳ್ಳಿ_ಗ್ರಾಮ_ಪಂಚಾಯಿತಿ #ಸ್ವಚ್ಚ_ಸಂಕೀರ್ಣ_ಘಟಕದ_ಉದ್ಘಾಟನೆ. #ಆಹ್ವಾನ_ಪತ್ರಿಕೆ_ನೀಡಿದ್ದಾರೆ. #ಅಧ್ಯಕ್ಷೆ_ಉಪಾದ್ಯಕ್ಷ_ಪಂಚಾಯತ್_ಅಭಿವೃದ್ದಿ_ಅಧಿಕಾರಿ_ಮಾಜಿ_ಉಪಾಧ್ಯಕ್ಷರು. #Gramapanchayath #Yadehalli #Anandapuram #Sagar #Shivamogga.#Anandapuram ದಿನಾಂಕ 20 - ಸೆಪ್ಟಂಬರ್ - 2025 ಶನಿವಾರ ನಮ್ಮ ಊರಿನ ಯಡೇಹಳ್ಳಿ ಗ್ರಾಮ ಪಂಚಾಯತ್ ನ ಕಸವಿಲೇವಾರಿ ಘಟಕದ ನೂತನ ಸ್ವಚ್ಚ ಸಂಕೀರ್ಣ ಭವನದ ಉದ್ಘಾಟನಾ ಸಮಾರಂಭ ನೆರವೇರಲಿದೆ. ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ನೀಡಲು ಬಂದವರು ಅಧ್ಯಕ್ಷೆ #ಶ್ರೀಮತಿ_ರತ್ನಮ್ಮ ಇವರು ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಕೊರಲಿಕೊಪ್ಪದ ದಿವಂಗತ ಕೆಂಚಣ್ಣರ ಪುತ್ರಿ ಕೆಂಚಣ್ಣ ನನ್ನ ಹಿರಿಯ ಗೆಳೆಯರು ಕೊರಲಿಕೊಪ್ಪದಿಂದ ಗೇರುಬೀಸಿಗೆ ಖಾತೆ ಜಮೀನಿನಲ್ಲಿ ರಸ್ತೆ ಮಾಡಿಸಲು ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಸಹಕರಿಸಿದವರು. ಉಪಾಧ್ಯಕ್ಷರು #ಇರುವಕ್ಕಿ_ಗಣಪತಿ 1993ರಲ್ಲಿ ನಾವೆಲ್ಲ ಒಟ್ಟಿಗೆ ಚುನಾವಣೆ ಮಾಡಿ ಯಡೇಹಳ್ಳಿ ಗ್ರಾಮ ಪಂಚಾಯಿತಿ ಮೊದಲ ಸದಸ್ಯರಾದವರು. ಕಳೆದ 32 ವರ್ಷದಿಂದ ಮೂರು ಬಾರಿ ಅಧ್ಯಕ್ಷ ಮತ್ತು ಮೂರು ಬಾರಿ ಉಪಾಧ್ಯಕ್ಷರಾಗಿರುವ ಗಣಪತಿ ರಾಜ್ಯದಲ್ಲಿೇ ಮೊದಲ #ಬಗರ್_ಹುಕುಂ_ಹಕ್ಕುಪತ್ರ ನೀಡಿದ ಗ್ರಾಮ ಪಂಚಾಯಿತಿ ಎಂಬ ದಾಖಲೆ ಮಾಡಲು ನನ್ನ ಜೊತೆ ಕೈಜೋಡಿಸಿದವರು ಅಷ್ಟೇ ಅಲ...