#ಯಡೇಹಳ್ಳಿ_ಗ್ರಾಮ_ಪಂಚಾಯಿತಿ
#ಸ್ವಚ್ಚ_ಸಂಕೀರ್ಣ_ಘಟಕದ_ಉದ್ಘಾಟನೆ.
#ಆಹ್ವಾನ_ಪತ್ರಿಕೆ_ನೀಡಿದ್ದಾರೆ.
#ಅಧ್ಯಕ್ಷೆ_ಉಪಾದ್ಯಕ್ಷ_ಪಂಚಾಯತ್_ಅಭಿವೃದ್ದಿ_ಅಧಿಕಾರಿ_ಮಾಜಿ_ಉಪಾಧ್ಯಕ್ಷರು.
#Gramapanchayath #Yadehalli #Anandapuram #Sagar #Shivamogga.#Anandapuram
ದಿನಾಂಕ 20 - ಸೆಪ್ಟಂಬರ್ - 2025 ಶನಿವಾರ ನಮ್ಮ ಊರಿನ ಯಡೇಹಳ್ಳಿ ಗ್ರಾಮ ಪಂಚಾಯತ್ ನ ಕಸವಿಲೇವಾರಿ ಘಟಕದ ನೂತನ ಸ್ವಚ್ಚ ಸಂಕೀರ್ಣ ಭವನದ ಉದ್ಘಾಟನಾ ಸಮಾರಂಭ ನೆರವೇರಲಿದೆ.
ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ನೀಡಲು ಬಂದವರು ಅಧ್ಯಕ್ಷೆ #ಶ್ರೀಮತಿ_ರತ್ನಮ್ಮ ಇವರು ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಕೊರಲಿಕೊಪ್ಪದ ದಿವಂಗತ ಕೆಂಚಣ್ಣರ ಪುತ್ರಿ ಕೆಂಚಣ್ಣ ನನ್ನ ಹಿರಿಯ ಗೆಳೆಯರು ಕೊರಲಿಕೊಪ್ಪದಿಂದ ಗೇರುಬೀಸಿಗೆ ಖಾತೆ ಜಮೀನಿನಲ್ಲಿ ರಸ್ತೆ ಮಾಡಿಸಲು ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಸಹಕರಿಸಿದವರು.
ಉಪಾಧ್ಯಕ್ಷರು #ಇರುವಕ್ಕಿ_ಗಣಪತಿ 1993ರಲ್ಲಿ ನಾವೆಲ್ಲ ಒಟ್ಟಿಗೆ ಚುನಾವಣೆ ಮಾಡಿ ಯಡೇಹಳ್ಳಿ ಗ್ರಾಮ ಪಂಚಾಯಿತಿ ಮೊದಲ ಸದಸ್ಯರಾದವರು.
ಕಳೆದ 32 ವರ್ಷದಿಂದ ಮೂರು ಬಾರಿ ಅಧ್ಯಕ್ಷ ಮತ್ತು ಮೂರು ಬಾರಿ ಉಪಾಧ್ಯಕ್ಷರಾಗಿರುವ ಗಣಪತಿ ರಾಜ್ಯದಲ್ಲಿೇ ಮೊದಲ #ಬಗರ್_ಹುಕುಂ_ಹಕ್ಕುಪತ್ರ ನೀಡಿದ ಗ್ರಾಮ ಪಂಚಾಯಿತಿ ಎಂಬ ದಾಖಲೆ ಮಾಡಲು ನನ್ನ ಜೊತೆ ಕೈಜೋಡಿಸಿದವರು ಅಷ್ಟೇ ಅಲ್ಲ ಇವರು ನಮ್ಮ ಊರು ಯಡೇಹಳ್ಳಿ ವೃತ್ತದ ಶಾಶ್ವತ ದ್ವಜಸ್ಥಂಭ ಮತ್ತು ಅಂಬೇಡ್ಕರ್ ನಾಮಕರಣಕ್ಕೆ ಕಾರಣರಾದವರು.
ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ #ಗೇರುಬೀಸು_ಶಿವಾನಂದ ನನ್ನ ಶಿಷ್ಯ ನನ್ನ ಸಾಗರ ತಾಲೂಕಿನ ಅಭಿವೃದ್ದಿಗಾಗಿ ಪಾದಯಾತ್ರೆ ಮತ್ತು ಎತ್ತಿನಗಾಡಿ ಯಾತ್ರೆಯಲ್ಲಿ ಮುಂಚೂಣಿಯಲ್ಲಿದ್ದ ಶರಾವತಿ ಮುಳುಗಡೆ ಸಂತ್ರಸ್ಥ ಕುಟುಂಬದ ದಿವಂಗತ ಜಟ್ಟಣ್ಣರ ಪುತ್ರ.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ #ಸುರೇಶ್_S_K. ಉತ್ಸಾಹಿ ಯುವ ಅಧಿಕಾರಿ ಇವರು ನನ್ನ ಮಿತ್ರ ಕೆಳದಿಯ ಆರ್.ಸಿ. ಮಂಜಪ್ಪರ ಗೆಳೆಯ-ಸಂಬಂದಿ ಸತ್ಯನಾರಾಯಣರ ಪುತ್ರ.
ನಮ್ಮ ಊರಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಆಗಿರುವುದರಿಂದ ನಮ್ಮ ಊರು ಸಾಕಷ್ಟು ಸ್ವಚ್ಚವಾಗಿದೆ.
ಅಲ್ಲಿ ಕಸಗಳ ವಿಂಗಡನೆಗೆ ನೂತನ ಕಟ್ಟಡ ನಿರ್ಮಾಣ ಆಗಿದೆ ಅಲ್ಲಿ ಸಿಬ್ಬಂದಿ ವರ್ಗಕ್ಕೆ ಕಛೇರಿ ಮತ್ತು ಶೌಚಾಲಯ ನಿರ್ಮಾಣ ಆಗಿದೆ.
ನಮ್ಮ ಊರಲ್ಲಿ ನಾಲ್ಕು ನೂರು ಮನೆ ಇದೆ ಆದರೆ ಕಸ ವಿಲೇವಾರಿ ಘಟಕಕ್ಕೆ ಪ್ರತಿ ತಿಂಗಳ ಶುಲ್ಕ ಮುವ್ವತ್ತು ರೂಪಾಯಿ ಪಾವತಿ ಮಾಡುವವರು ಕೇವಲ ನೂರು ಮನೆ ಅಂತೆ!!.
ಊರಿನ ಕಸ ವಿಲೇವಾರಿ ಮಾಡುವ ವ್ಯವಸ್ಥೆಗೆ ಊರವರೆಲ್ಲ ಕೈ ಜೋಡಿಸಬೇಕು ದಿನಕ್ಕೆ ಕೇವಲ ಒಂದು ರೂಪಾಯಿ ಶುಲ್ಕ ಮಾತ್ರ ಇದೆ ಅದನ್ನು ಪಾವತಿಸಿ ಎಲ್ಲಾ ಮನೆಯವರೂ ಸಹಕರಿಸಬೇಕು ಈ ಬಗ್ಗೆ ಊರಿನ ಪ್ರಗತಿಪರರು ಕೂಡ ಸಾರ್ವಜನಿಕರಿಗೆ ಈ ಬಗ್ಗೆ ತಿಳಿಹೇಳಿ ಪ್ರೋತ್ಸಾಹಿಸ ಬೇಕು.
ಅಪರೂಪಕ್ಕೆ ಬಂದಿದ್ದ ಇವರೆಲ್ಲರಿಗೂ ನಮ್ಮ ಸಂಸ್ಥೆ ಪರವಾಗಿ ಗೌರವಿಸಿ ನಮ್ಮ #ಮಲ್ಲಿಕಾ_ವೆಜ್ ನಿಂದ ಕಾಫಿ ನೀಡಿದೆ.
Comments
Post a Comment