#ಭಾಗ_4.
#ಜೋಗ್_ಪಾಲ್ಸ್_ಹೊಮ್_ಸ್ಟೇ_ಅವಕಾಶಗಳು
#ಸ್ಥಳೀಯರ_ಸಹಭಾಗಿತ್ವದ_ಪ್ರವಾಸೋಧ್ಯಮ
#ವರ್ಷ_ಪೂರ್ತಿ_ಪ್ರವಾಸಿಗಳ_ಸೆಳೆಯುವ_ಸರ್ವಋತು_ಪ್ರವಾಸಿ_ತಾಣ.
#Homestay #Jogfalls #Westernghats #Malenadu #Gerusoppe #Siganduru #Balepadmavathi #Jainabasadhi
ಜೋಗ್ ಫಾಲ್ಸ್ ಪರಿಸರದಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಗಾಗಿ ಸರ್ಕಾರ ನೂರಾರು ಕೋಟಿ ವಿನಿಯೋಗಿಸುತ್ತಿದೆ.
ಇದರಿಂದ ಮುಂದಿನ ದಿನಗಳಲ್ಲಿ ಜೋಗ್ ಫಾಲ್ಸ್ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಸಾಧ್ಯತೆ ಇದೆ.
ಇದೆಲ್ಲದರಿಂದ ದೊಡ್ಡ ದೊಡ್ಡ ಹೋಟೆಲ್ ರೆಸಾರ್ಟ್ ಗಳನ್ನು ಹೊರಗಿನ ಸಂಸ್ಥೆಗಳು ನಿರ್ಮಿಸಲಿದೆ.
ಸ್ಥಳೀಯರು ಪ್ರವಾಸಿಗಳಿಗೆ ಆತಿಥ್ಯ ನೀಡುವ ಹೋಮ್ ಸ್ಟೇಗಳನ್ನು ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸ ಬಹುದಾಗಿದೆ.
ಆಸಕ್ತರಿಗೆ ಸಾಲ ರೂಪದಲ್ಲಿ ಆರ್ಥಿಕ ನೆರವು, ಇಲಾಖಾ ಅನುಮತಿಗಳು ಮತ್ತು ಬುಕಿಂಗ್ ಸೌಲಭ್ಯಗಳು ಅವಶ್ಯವಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮತ್ತು ಹೊನ್ನಾವರ ತಾಲ್ಲೂಕಿನ ಅಂಚಿನಲ್ಲಿ ದುಮುಕುವ ಜೋಗ್ ಜಲಪಾತದಿಂದ ಈ ಪ್ರದೇಶದಲ್ಲಿ 200 ಕ್ಕೂ ಹೆಚ್ಚು ಹೋಮ್ ಸ್ಟೇಗಳು ಲಾಭದಾಯಕವಾಗಿ ನಡೆಸಲು ಸಾಧ್ಯವಿದೆ ಎಂಬ ಸಮೀಕ್ಷಾ ವರದಿಯಿಂದ ದೃಢಪಟ್ಟಿದೆ.
ಬರುವ ಪ್ರವಾಸಿಗಳಿಗೆ ಅತಿಥಿ ಸತ್ಕಾರಕ್ಕಾಗಿ ಮತ್ತು ಹೋಮ್ ಸ್ಟೇ ಸುವ್ಯವಸ್ಥಿತವಾಗಿ ನಿರ್ವಹಿಸಲು ತರಬೇತಿ ಬೇಕು.
ಸ್ಥಳೀಯರು ತಮ್ಮ ವಾಸದ ಮನೆಯಲ್ಲೇ ಹೋಮ್ ಸ್ಟೇ ಮಾಡುವುದರಿಂದ ಅದರಲ್ಲಿ ಅವರೂ ವಾಸ ಆಗಿರುವುದರಿಂದ ಅವರೇ ಈ ಹೋಮ್ ಸ್ಟೇಗಳನ್ನ ಸುಲಭವಾಗಿ ನಡೆಸ ಬಹುದು.
ಈ ಭಾಗದ ಸ್ಥಳೀಯರು ಹಾಲಿ ಆ ಭಾಗದ ಹೋಮ್ ಸ್ಟೇಗಳ ಬಗ್ಗೆ ಕೆಲ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಅದೇನೆಂದರೆ ಅಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸಲು ಅವಕಾಶ ನೀಡುತ್ತಾರೆ ಎಂದು ಇದು ಸತ್ಯವಿರಬಹುದು ಆದರೆ ಹೋಮ್ ಸ್ಟೇ ಪರಿಕಲ್ಪನೆ ಮತ್ತು ಅದಕ್ಕೆ ಪಡೆಯುವ ಅನುಮತಿಗಳಲ್ಲಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.
ಹಣಕ್ಕಾಗಿ ಏನೇನೋ ಮಾಡಲು ಅವಕಾಶ ನೀಡುವುದು ಪ್ರವಾಸೋದ್ಯಮಕ್ಕೆ ಉತ್ತೇಜನ ಆಗುವುದಿಲ್ಲ ಕಂಟಕ ಆಗುತ್ತದೆ.
ಜುಗಾರಿ - ವೆಶ್ಯಾವಾಟಿಕೆ - ಮಧ್ಯ- ಡ್ರಗ್ಸ್ ಗಳ ಮೋಜು ಮಸ್ತಿಯಿಂದ ಇಂತಹ ಪ್ರಾಪರ್ಟಿಗಳು ತಕ್ಷಣ ಹಣ ಕಾಣುತ್ತಾರೆ ಆದರೆ ಅದು ತಾತ್ಕಾಲಿಕ ಅಂತಹ ಜಾಗದಲ್ಲಿ ಪ್ರವಾಸಿ ಕುಟುಂಬಗಳು ಬಂದು ತಂಗಲು ಇಷ್ಟ ಪಡುವುದಿಲ್ಲ ಅಷ್ಟೇ ಅಲ್ಲ ಅಂತವರು ಕಾನೂನಿನ ಸಂಕೋಲೆಯಲ್ಲಿ ಸಿಕ್ಕಿ ಬೀಳುತ್ತಾರೆ.
ನಾನು ಇಲ್ಲಿ ಬೆಂಬಲಿಸಿ ಬರೆಯುತ್ತಿರುವ #ಜೋಗ್_ಪಾಲ್ಸ್_ಹೋಮ್_ಸ್ಟೇ ಯೋಜನೆಯ ಸರಣಿ ಲೇಖನಗಳು ಕಾನೂನುಬದ್ದವಾಗಿ,ಪರಿಸರ ಸ್ನೇಹಿ ಮತ್ತು ಸ್ಥಳೀಯರ ಸಹಕಾರ ನೆರವಿನಿಂದ ನಡೆಯುವ ಅದರಿಂದ ಪ್ರವಾಸೋಧ್ಯಮಕ್ಕೆ ಉತ್ತೇಜನ ನೀಡುವ ಮೂಲಕ ಸ್ಥಳೀಯರೂ ಸ್ವಯಂ ಉದ್ಯೋಗ ಪಡೆದುಕೊಳ್ಳುವ ಯೋಜನೆ ಆಗಿರುತ್ತದೆ.
ಈ ಬಗ್ಗೆ ಆಸಕ್ತರು, ಮುಂದಿನ ದಿನಗಳಲ್ಲಿ ಈ ಯೋಜನೆ ರೀತಿ ಹೋಮ್ ಸ್ಟೇ ನಿರ್ಮಿಸುವವರು ಕಾಮೆಂಟ್ ನಲ್ಲಿರುವ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ವಿನಂತಿ.
Comments
Post a Comment