#ತುಂಗಭದ್ರಾ_ಶುಗರ್ಸ್
#ಮಯೂರ್_ಮಾದ್ವಾನಿ
#ಶಿವಮೊಗ್ಗದಲ್ಲಿ_ಮರೆತು_ಹೋದ_ಹೆಸರುಗಳು.
#ಭಾರತೀಯ_ಮೂಲದ_ಉಗಾಂಡದ_ಉದ್ಯಮಿ
#ಮಯೂರ್_ಮಾದ್ವಾನಿ_1958ರಲ್ಲಿ_ಶಿವಮೊಗ್ಗದಲ್ಲಿ_ಸಕ್ಕರೆ_ಕಾರ್ಖಾನೆ_ಪ್ರಾರಂಬಿಸಿದ್ದರು
#ಪ್ರಖ್ಯಾತ_ಹಿಂದಿ_ಚಿತ್ರತಾರೆ_ಮುಮ್ತಾಜ್_ಇವರ_ಪತ್ನಿ.
#ಇವರ_ಪುತ್ರಿ_ನತಾಶ_ನಟ_ಪಿರೋಜ್_ಖಾನ್_ಪುತ್ರ_ನಟ_ಪರ್ದೀನ್_ಖಾನ್_ವಿವಾಹ_ಆಗಿದ್ದಾರೆ
#Shivamogga #Malagoppa #Tungabhadrasugars #Mayurmadwani #Uganda #Bollywood #Mumtaj.
ಶಿವಮೊಗ್ಗದಲ್ಲಿ ಭದ್ರಾವತಿ ರಸ್ತೆಯ ಮಲವಗೊಪ್ಪದಲ್ಲಿ 1958 ರಲ್ಲಿ ಪ್ರಾರಂಭವಾಗಿದ್ದ ಸಕ್ಕರೆ ಕಾರ್ಖಾನೆ ಈಗ ಇಲ್ಲ.
ಇದನ್ನು ಪ್ರಾರಂಬಿಸಿದವರು ಗುಜರಾತಿನ ಬ್ರಾಹ್ಮಣ ಕುಟುಂಬದ #ಮಯೂರ್_ಮಾದ್ವಾನಿ ಅವರು ಭಾರತಿಯ ಮೂಲದ ಉಗಾಂಡದ ಕೈಗಾರಿಕೋಧ್ಯಮಿ.
ನಟಿ ಮುಮ್ತಾಜ್ ಶಿವಮೊಗ್ಗಕ್ಕೆ ಬಂದರೆ ತಂಗಲಿಕ್ಕಾಗಿ ಶಿವಮೊಗ್ಗದ ಜ್ಯೂವೆಲ್ ರಾಕ್ ಹಿಂಬಾಗದ ವಿಶಾಲವಾದ ಜಾಗದಲ್ಲಿ ದೊಡ್ಡ ಬಂಗಲೆ ನಿರ್ಮಿಸಿದ್ದರು ಅಲ್ಲಿ ಸ್ವಿಮ್ಮಿಂಗ್ ಪೂಲ್ ಕೂಡ ಇತ್ತಂತೆ ಈಗ ಅದು ಸ್ಥಳೀಯ ಶಿವಮೊಗ್ಗದ ವ್ಯಾಪಾರಸ್ಥರು ಖರೀದಿಸಿದ್ದಾರೆ.
ಆ ಕಾಲದಲ್ಲಿ ಉದ್ಯಮಿ ಮಯೂರ್ ಮಾದ್ವಾನಿ ತುಂಗಭದ್ರಾ ಶುಗರ್ ಪ್ಯಾಕ್ಟರಿಗಾಗಿ ಒಂದು ಸಾವಿರ ಎಕರೆ ಜಮೀನು ಖರೀದಿಸಿದ್ದರು.
ರಾಜ್ಯ ಸರ್ಕಾರದಿಂದ 1400 ಎಕರೆ ಲೀಸ್ ಗೆ ಪಡೆದಿದ್ದರು.
1958 ರಿಂದ 1996 ರವರೆಗೆ 38 ವರ್ಷ ಕಾರ್ಯನಿರ್ವಹಿಸಿದ ಈ ಕಾರ್ಖಾನೆ ನಂತರ ನಷ್ಟದಿಂದ ಸಕ್ಕರೆ ಉತ್ಪಾದನೆ ಸ್ಥಗಿತವಾಯಿತು.
ಮಯೂರ್ ಮಾಧ್ವಾನಿ ಜನನ 1949 ರಲ್ಲಿ ಅವರು ಭಾರತೀಯ ಮೂಲದ ಉಗಾಂಡಾದ ಉದ್ಯಮಿ.
ಅವರು ಉಗಾಂಡಾದ ಕಾಕಿರಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮಾಧ್ವಾನಿ ಗ್ರೂಪ್ ಆಫ್ ಕಂಪನಿಗಳ ಮಾಲಿಕರು.
ಈ ಸಂಸ್ಥೆಯ ಅಂತರರಾಷ್ಟ್ರೀಯ ಮಾಸ್ಟರ್ ಆಫ್ ಹ್ಯೂಮನ್ ರಿಸೋರ್ಸ್ ಮತ್ತು ಜನರಲ್ ಮ್ಯಾನೇಜ್ಮೆಂಟ್, ಅಂತರರಾಷ್ಟ್ರೀಯ ಮಾಸ್ಟರ್ ಆಫ್ ಇಂಟರ್ನ್ಯಾಷನಲ್ ಬ್ಯುಸಿನೆಸ್ ಮತ್ತು ಕಂಪನಿ ಲಾ ಸಂಸ್ಥೆಗಳ ಮಾಲಿಕತ್ವ ಹೊಂದಿದೆ.
ನ 1972 ರಲ್ಲಿ ಉಗಾಂಡಾದ ಸರ್ವಾಧಿಕಾರಿ ಇದಿ ಅಮೀನ್ ಉಗಾಂಡದಲ್ಲಿನ ಏಷ್ಯನ್ನರ ಪೌರತ್ವವನ್ನು ಲೆಕ್ಕಿಸದೆ ಎಲ್ಲಾ ಏಷ್ಯನ್ನರನ್ನು ಉಗಾಂಡಾದಿಂದ ಹೊರಹಾಕಿದರು.
ಇದರಿಂದ ಮಯೂರ್ ಮತ್ತು ಇತರ ಕುಟುಂಬ ಸದಸ್ಯರು ಲಂಡನ್‌ಗೆ ಸ್ಥಳಾಂತರಗೊಂಡರು.
1976ರಲ್ಲಿ ಇದೀಅಮೀನ್ ಪದಚ್ಯುತಗೊಂಡ ನಂತರ ಮಾಧ್ವಾನಿಗಳು ಉಗಾಂಡಾಗೆ ಮರಳಿದರು ಮತ್ತು ತಮ್ಮ ಆಸ್ತಿಗಳನ್ನು ಮರಳಿ ಪಡೆದರು.
ಅವರ ಕುಟುಂಬದ ಪ್ರಮುಖ ಕಂಪನಿಯಾದ ಕಾಕಿರಾ ಶುಗರ್ (KSW) ಲಿಮಿಟೆಡ್ ಅನ್ನು 1985 ರಲ್ಲಿ ಯಶಸ್ವಿಯಾಗಿ ಚೇತರಿಸಿಕೊಳ್ಳುವಂತೆ ಮಾಡಿದರು.
ಮಾಧ್ವಾನಿ ಕುಟುಂಬದ ನೇತೃತ್ವದಲ್ಲಿ ಅವರು KSW ಅನ್ನು ಪೂರ್ವ ಆಫ್ರಿಕಾದಲ್ಲಿ ಸಂಸ್ಕರಿಸಿದ ಸಕ್ಕರೆಯ ಅತಿದೊಡ್ಡ ಉತ್ಪಾದಕರಾಗಿ ಮುನ್ನಡೆಸಿದ್ದಾರೆ.
KSW ವಾರ್ಷಿಕವಾಗಿ ಅಂದಾಜು 165,000 ಮೆಟ್ರಿಕ್ ಟನ್ ಸಕ್ಕರೆಯನ್ನು ಉತ್ಪಾದಿಸುತ್ತದೆ, ಇದು 2011 ರಲ್ಲಿ ರಾಷ್ಟ್ರೀಯ ಉತ್ಪಾದನೆಯ ಸುಮಾರು 47 ಪ್ರತಿಶತದಷ್ಟಿದೆ.
ಕಾಕಿರಾದಲ್ಲಿ ಸಹ-ಉತ್ಪಾದನೆಗೆ ಗುಂಪು ಮುಂಚೂಣಿಯಲ್ಲಿದೆ ಇದು ಈಗ 52 ಮೆಗಾವ್ಯಾಟ್‌ಗಳ ವಿದ್ಯುತ್ ಅಲ್ಲಿ ಉತ್ಪಾದಿಸುತ್ತದೆ, ಅದರಲ್ಲಿ 20 ಮೆಗಾವ್ಯಾಟ್‌ಗಳನ್ನು ಆಂತರಿಕವಾಗಿ ಬಳಸಲಾಗುತ್ತದೆ ಮತ್ತು 32 ಮೆಗಾವ್ಯಾಟ್‌ಗಳನ್ನು ಉಗಾಂಡದ ರಾಷ್ಟ್ರೀಯ ಗ್ರಿಡ್‌ಗೆ ಮಾರಾಟ ಮಾಡಲಾಗುತ್ತದೆ.
2016 ರಲ್ಲಿ ದಿನಕ್ಕೆ ಒಟ್ಟು 60,000 ಲೀಟರ್ ಎಥೆನಾಲ್ ಸಾಮರ್ಥ್ಯದೊಂದಿಗೆ ಎಥೆನಾಲ್ ಡಿಸ್ಟಿಲರಿಯನ್ನು ಸಹ ಸ್ಥಾಪಿಸಿದ್ದಾರೆ.
1974 ರಲ್ಲಿ ಮಯೂರ್ ಮಾದ್ವಾನಿ ಅವರು ಬಾಲಿವುಡ್ ನ ಪ್ರಖ್ಯಾತ ನಟಿ ಮುಮ್ತಾಜ್ ಅವರನ್ನು ವಿವಾಹವಾದರು.
ಹಿಂದಿ ಚಲನಚಿತ್ರ ನಟಿ ಮುಮ್ತಾಜ್ ಇರಾನ್‌ನ ಮಶಾದ್‌ನಿಂದ ಬಂದ ಅಬ್ದುಲ್ ಸಲೀಂ ಅಸ್ಕರಿ (ಒಣ ಹಣ್ಣುಗಳ ಮಾರಾಟಗಾರ) ಮತ್ತು ಶಾದಿ ಹಬೀಬ್ ಅಘಾ ದಂಪತಿಗಳ ಪುತ್ರಿ ಅವರ ತಂದೆ ಇಮಾಮ್‌ಗಳ ಕುಟುಂಬದಿಂದ ಬಂದವರು.
ಮುಮ್ತಾಜ್ ಜನಿಸಿದ ಒಂದು ವರ್ಷದ ನಂತರ ಅವರ ಪೋಷಕರು ವಿಚ್ಛೇದನ ಪಡೆದರು, ಮುಮ್ತಾಜ ಅವರ ಅಕ್ಕ ನಟಿ ಮಲ್ಲಿಕಾ , ಅವರು ಕುಸ್ತಿಪಟು ಮತ್ತು ಭಾರತೀಯ ನಟ ರಾಂಧವಾ ಅವರನ್ನು ವಿವಾಹವಾದರು.
ರಾಂಧವಾ ಅವರು ಕುಸ್ತಿಪಟು ಮತ್ತು ನಟ ದಾರಾ ಸಿಂಗ್ ಅವರ ಕಿರಿಯ ಸಹೋದರ.
ಶಿವಮೊಗ್ಗದ ತುಂಗಭದ್ರಾ ಸಕ್ಕರೆ ಕಾರ್ಖಾನೆ ಮಾಲಿಕ ದಂಪತಿಗಳಾದ ಮಯೂರ್ ಮಾದ್ವಾನಿ ಮತ್ತು ನಟಿ ಮುಮ್ತಾಜ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು ನತಾಶಾ ಮತ್ತು ತಾನ್ಯಾ.
ಅವರಲ್ಲಿ ನತಾಶಾ 2006 ರಲ್ಲಿ ನಟ ಫಿರೋಜ್ ಖಾನ್ ಅವರ ಮಗ ನಟ ಫರ್ದೀನ್ ಖಾನ್ ಅವರನ್ನು ವಿವಾಹವಾದರು.
ಈ ಕಾರ್ಖಾನೆಯು 1958 ರಿಂದ 1996 ರವರೆಗೆ ಸುಮಾರು 38 ವರ್ಷಗಳ ಕಾಲ ಕಬ್ಬು ಅರೆಯುವ ಖಾಸಗಿ ಘಟಕವಾಗಿತ್ತು.
ಪುನರಾವರ್ತಿತ ನಷ್ಟಗಳಿಂದಾಗಿ ಅದು 1996 ರಲ್ಲಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತು.
1999 ರಲ್ಲಿ ಮದ್ರಾಸ್ ಹೈಕೋರ್ಟ್ ಕಾರ್ಖಾನೆಯ ದಿವಾಳಿತನಕ್ಕೆ ಆದೇಶಿಸಿತು ಮತ್ತು ಈಗ ಅದು ತುಂಗಭದ್ರಾ ಶುಗರ್ ವರ್ಕ್ಸ್ ಲಿಮಿಟೆಡ್ ಒಡೆತನದಲ್ಲಿದೆ.
ತುಂಗಭದ್ರಾ ಶುಗರ್ ವರ್ಕ್ಸ್ ಲಿಮಿಟೆಡ್‌ನ ಪ್ರಸ್ತುತ ಮಾಲೀಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಪಿ. ಮಣಿವೇಲನ್.
ಮಣಿವೇಲನ್ ವಿಜಯಚಾಮುಂಡೇಶ್ವರಿ , ಚಿನ್ನಸಾಮಿ ರವಿಚಂದ್ರನ್ , ಸುರೇಶ್ ಕುಮಾರ್ ರೈ ಮತ್ತು ಉಮಾಮಹೇಶ್ವರಿ ಅವರೊಂದಿಗೆ ಮಂಡಳಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇಷ್ಟೆಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರಗಳ ಜ್ಞಾನ ಇರುವ ಮಯೂರ್ ಮಾದ್ವಾನಿ ಒಡೆತನದ ಶಿವಮೊಗ್ಗದ #ತುಂಗಭದ್ರಾ_ಶುಗರ್ಸ್ ದಿವಾಳಿ ಆಗಿದ್ದು ಹೇಗೆ? ಅದು ಬೇರೆಯದೇ ಆದ ಕಥೆ.
ನಮ್ಮ ಜಿಲ್ಲೆಯಲ್ಲಿ ತುಂಗಭದ್ರಾ ಶುಗರ್ಸ್ ಮತ್ತು ಭದ್ರಾವತಿಯಲ್ಲಿದ್ದ MPM ಸಕ್ಕರೆ ಕಾರ್ಖಾನೆ ಎರೆಡೂ ಈಗ ಮುಚ್ಚಲ್ಪಟ್ಟಿದೆ.
ಈ ಸಕ್ಕರೆ ಕಾರ್ಖಾನೆ ಜಾಗ ಗುರುತಿಸುವ, ಅಡಿಪಾಯ ಹಾಕುವ ಮಹತ್ತರ ಕೆಲಸ ಮಾಡಿದವರು ಮಯೂರ್ ಮಾದ್ವಾನಿ ಸಂಬಂಧಿ #ಮೋಹನ್_ಬಾಯಿ_ಕುಟೇಚ ಈಗ ಅವರಿಲ್ಲ ಅವರ ಪುತ್ರ #ಲಲೀತ್_ಕುಟೇಚಾ ಸಂದರ್ಶನ ಮುಂದಿನ ಭಾಗದಲ್ಲಿ ನಿರೀಕ್ಷಿಸಿ.
Comments
Post a Comment