#ಭಾಗ_5.
#ಜೋಗ್_ಪಾಲ್ಸ್_ಪರಿಸರದಲ್ಲಿ
#ಇನ್ನೂರಕ್ಕೂ_ಹೆಚ್ಚು_ಹೋಮ್_ಸ್ಟೇ_ಲಾಭದಾಯಕವಾಗಿ_ನಡೆಯಲಿದೆ.
#ಸ್ಥಳೀಯರು_ಈ_ಯೋಜನೆಯಲ್ಲಿ_ಸೇರಿ_ಸ್ವಯಂ_ಉದ್ಯೋಗ_ಪಡೆದುಕೊಳ್ಳುವ_ಸಾಧ್ಯತೆ.
#Worldfamouse #Jogfalls #Westernghats #Malenadu #Homestayprojects #Localinvolvement #Tourism #GovtofKarnataka
ಜೋಗ್ ಜಲಪಾತ ಅಭಿವೃದ್ಧಿ ಕಾಮಗಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಡೆಯುತ್ತಿದೆ.
ಇದರಿಂದ ಮುಂದಿನ ದಿನಗಳಲ್ಲಿ ದೇಶ -ವಿದೇಶಗಳ ಪ್ರವಾಸಿಗಳು ಹೆಚ್ಚು ಬರಲಿದ್ದಾರೆ.
ಈ ಪ್ರವಾಸೋಧ್ಯಮದಲ್ಲಿ ಸ್ಥಳೀಯರ ಭಾಗವಹಿಸುವ ಮೂಲಕ ಅವರು ಉದ್ಯೋಗ ಮತ್ತು ಲಾಭ ಪಡೆಯಲು ಈ ಪ್ರದೇಶದಲ್ಲಿ ಹೋಮ್ ಸ್ಟೇಗಳನ್ನು ಪ್ರಾರಂಬಿಸಬಹುದು.
ಈ ಮೂಲಕ ಪ್ರವಾಸಿಗಳಿಗೆ ಅತಿಥ್ಯ ನೀಡಬಹುದು ಇದರಿಂದ ಪ್ರವಾಸಿಗಳಿಗೆ ಅವರ ಬಜೆಟ್ ಸಾಮರ್ಥ್ಯದಲ್ಲಿ ತಂಗಲು,ಊಟ ಉಪಚಾರ ಪಡೆಯಲು ಸಾಧ್ಯವಿದೆ.
ಸ್ಥಳೀಯ ಮಲೆನಾಡಿನ ಸಂಪ್ರದಾಯಿಕ ಆಹಾರಗಳನ್ನ ಪರಿಚಯಿಸ ಬಹುದು ಜೊತೆಗೆ ಜೋಗ್ ಫಾಲ್ಸ್ ಮಾತ್ರವಲ್ಲ ಸ್ಥಳೀಯ ಅನೇಕ ಜಲಪಾತಗಳನ್ನು, ಶರಾವತಿ ನದಿಯ ಹಿನ್ನೀರಿನ ಪ್ರದೇಶಗಳನ್ನು, ಈ ಭಾಗದ ಪ್ರಸಿದ್ಧ ದೇವಾಲಯಗಳು, ಜೈನ ಬಸದಿಗಳು, ಐತಿಹಾಸಿಕ ಸ್ಮಾರಕಗಳು ,ಕೋಟೆ ಕೊತ್ತಲಗಳನ್ನು ಸ್ಥಳೀಯ ಇಲಾಖೆಗಳ ಪೂರ್ವಾನುಮತಿ ಪಡೆದು ತೋರಿಸ ಬಹುದು.
ಮಲೆನಾಡ ಪರಿಸರದಲ್ಲಿ ಚಾರಣ ಪ್ರವಾಸ ಏರ್ಪಡಿಸಬಹುದು ಇದಕ್ಕೆಲ್ಲ ಹೋಮ್ ಸ್ಟೇ ಅವರೇ ಗೈಡ್ ಆಗಿ ಕಾರ್ಯನಿರ್ವಹಿಸ ಬಹುದು.
ಹೀಗೆ ಒಮ್ಮೆ ಪ್ರವಾಸೋಧ್ಯಮದಲ್ಲಿ ಭಾಗಿ ಆದರೆ ನಿಮಗೆ ಅರಿವಿಗೆ ಬರದಂತೆ ಸಂಪೂರ್ಣ ತೊಡಗಿಸಿಕೊಂಡು ಅದರಲ್ಲಿ ಆದಾಯದ ಜೊತೆ ವಿಶೇಷ ಅನುಭವ ಪಡೆಯುತ್ತಾರೆ ಮತ್ತು ಸಾಮಾಜಿಕವಾಗಿ ಗೌರವದ ಸ್ಥಾನಮಾನದ ಉದ್ಯೋಗವೊಂದು ಅವರ ಕುಟುಂಬಕ್ಕೆ ಹೆಸರು ಖ್ಯಾತಿ ತಂದು ಕೊಡುತ್ತದೆ.
ಜೋಗ್ ಫಾಲ್ಸ್ ಪರಿಸರದ ಸಾಗರ - ಸಿದ್ದಾಪುರ - ಹೊನ್ನಾವರ ಪ್ರದೇಶದಲ್ಲಿ 200 ಕ್ಕೂ ಹೆಚ್ಚು ಹೋಮ್ ಸ್ಟೇ ಲಾಭದಾಯಕವಾಗಿ ನಡೆಸಲು ಅವಕಾಶ ಇದೆ ಎಂಬ ಸಮೀಕ್ಷೆ ಸ್ಥಳೀಯರಿಗೆ ಆಶಾಕಿರಣ ಆಗಿದೆ.
ಇದಕ್ಕಾಗಿ ತರಬೇತಿ, ಆರ್ಥಿಕ ನೆರವು ಮತ್ತು ಬುಕಿಂಗ್ ಸೌಲಭ್ಯ in ಬೇಕಾಗುತ್ತದೆ.
ನನ್ನ ಲೇಖನ ಸರಣಿಗೆ ಕೆಲವರು ತಮ್ಮ ಪ್ರಶ್ನೆ ಕೇಳಿದ್ದಾರೆ ಅದರಲ್ಲಿ ಒಂದು ಇಲ್ಲಿದೆ ನೋಡಿ ಅದಕ್ಕೆ ನನ್ನ ಉತ್ತರ ಕೂಡ....
Home ಸ್ಟೇ ಅನಾಚಾರಗಳು ಜೋಗ್ ಪಾಲ್ಸ್ ನಲ್ಲಿ ನಡಿಯತ್ತೆ ಕಣ್ಣು ಮುಚ್ಚಿ ಕುಳಿತ ಕಾರ್ಗಲ್ ಪೂಲೀಸ ಇಲಾಖೆ ಅಂದಿದ್ದಾರೆ.
ನಮ್ಮ ಮಲೆನಾಡು ಸಾಗರ ರೆಸಾರ್ಟ್ - ಹೊಂ ಸ್ಟೇ ಗಳ ದುರುಪಯೋಗ - ವೇಶ್ಯಾವಾಟಿಕೆ - ಡ್ರಗ್ಸ್ ಗಳಾಗಿದೆ.
ಇಂತಹದ್ದೇ ಕೆಲವರ ಪ್ರಶ್ನೆಗಳು ಬಂದಿದೆ.
ನನ್ನ ಉತ್ತರ ...
"ಮಲೆನಾಡಿನಲ್ಲಿ ನಮ್ಮ ಸ್ವಂತ ವಾಸದ ಮನೆಯಲ್ಲಿ ಬರುವ ಪ್ರವಾಸಿಗಳಿಗೆ ಆತಿಥ್ಯದ ವ್ಯವಸ್ಥೆ ಮಾಡುವ ಉದ್ದೇಶ ಹೊಂ ಸ್ಟೇ ದಾಗಿದೆ ಮನೆ ಮಾಲಿಕರೇ ವಾಸ ಇರುವ ಮನೆಯಲ್ಲಿ ಹೋಮ್ ಸ್ಟೇ ಆದರೆ ಇಂತಹದ್ದು ನಡೆಯಲು ಸಾಧ್ಯವಿಲ್ಲ.
ಮಲೆನಾಡು - ಪಶ್ಚಿಮ ಘಟ್ಟ -ಜಲಪಾತ - ಇತಿಹಾಸ ಮತ್ತು ಇಲ್ಲಿನ ಆಹಾರ ಇಷ್ಟ ಪಟ್ಟು ಬರುವವರಿಗೆ ಆತಿಥ್ಯ ನೀಡಿ ಆದಾಯ ಪಡೆಯುವ ಈ ಯೋಜನೆ ಉಪಯುಕ್ಷ ಸ್ಥಳೀಯರು ಇದನ್ನು ಬಳಸಿಕೊಳ್ಳಬೇಕು.
ಸ್ಥಳಿಯರು ಇದನ್ನು ಬಳಸಿಕೊಳ್ಳದಿದ್ದರೆ ಹೊರ ರಾಜ್ಯದವರು ಕೊಡಗು ಮತ್ತು ಚಿಕ್ಕಮಗಳೂರುಗಳಲ್ಲಿ ಅತಿ ಹೆಚ್ಚು ಹೋಮ್ ಸ್ಟೇ ನಿರ್ಮಿಸಿದಂತೆ ಇಲ್ಲೂ ನಿರ್ಮಿಸುತ್ತಾರೆ.
ಇಂತಹ ಮಾಹಿತಿಗಳಿಗಾಗಿ ಕಾಮೆಂಟ್ ನಲ್ಲಿರುವ ವಾಟ್ಸಪ್ ಗ್ರೂಪ್ ಲಿಂಕ್ ಗೆ ಜಾಯಿನ್ ಆಗಿ.
Comments
Post a Comment