#ಕುಂದಾದ್ರಿ
#ಇಲ್ಲಿಂದ_360_ಡಿಗ್ರಿಯಲ್ಲಿ_ಪಶ್ಚಿಮ_ಘಟ್ಟದ_ಸುಂದರ_ದೃಶ್ಯ
#ಸೂರ್ಯೋದಯ_ಸೂರ್ಯಾಸ್ತ_ವೀಕ್ಷಣೆ
#ಕ್ಷಣ_ಕ್ಷಣಕ್ಕೂ_ಬದಲಾಗುವ_ದೃಶ್ಯಗಳು
#ಕುವೆಂಪು_ಕುಂದಾದ್ರಿಗೆ_ಚಾರಣ_ಮಾಡಿದ್ದನ್ನ_ಬರೆದಿದ್ದಾರೆ.
#ಕು೦ದಾದ್ರಿ_ಎಂಬ_ಸುಂದರ_ಪವ೯ತ_ಕುOದಾದ್ರಿ_ಬೆಟ್ಟ.
#ಶಿವಮೊಗ್ಗ_ಜಿಲ್ಲೆಯ_ತೀರ್ಥಳ್ಳಿ_ತಾಲ್ಲೂಕಿನಲ್ಲಿದೆ
#ತೀರ್ಥಹಳ್ಳಿ_ಆಗುಂಬೆ_ಮಾರ್ಗದಲ್ಲಿದೆ
#kundadrihills #thirthahalli #augumbe #jainism
ಶಿವಮೊಗ್ಗದಿಂದ 80 ಕಿಮಿ ದೂರದಲ್ಲಿದೆ ಕುಂದಾದ್ರಿ ಹಿಲ್ಸ್ ಇದು ಸಮುದ್ರ ಮಟ್ಟದಿಂದ 826 ಮೀಟರ್ ಅಥವ 2783 ಅಡಿ ಎತ್ತರದಲ್ಲಿದೆ.
ಇಲ್ಲಿಂದ ಪಶ್ಚಿಮ ಘಟ್ಟದ ಸುಂದರವಾದ ವಿಹಂಗಮ ದೃಶ್ಯ, ಸೂರ್ಯೋದಯ ಸೂರ್ಯಾಸ್ತ 360 ಡಿಗ್ರಿ ಕೋನದಲ್ಲಿ ವೀಕ್ಷಿಸಲು ಇಲ್ಲಿಗೆ ಹೆಚ್ಚು ಪ್ರವಾಸಿಗಳು ಬರುತ್ತಾರೆ.
ಒಂದು ವಿಶೇಷ ಅಂದರೆ ಪ್ರತಿ ಕ್ಷಣವೂ ಇಲ್ಲಿಂದ ಕಾಣುವ ದೃಶ್ಯ ನಿತ್ಯನೂತನ, ಮಳೆಗಾಲ - ಚಳಿಗಾಲ - ಬೇಸಿಗೆ - ಬೆಳಿಗ್ಗೆ - ಮದ್ಯಾಹ್ನ - ಸಂಜೆ ಕ್ಷಣ ಕ್ಷಣದ ಬದಲಾಗುತ್ತಿರುವ ದೃಶ್ಯ ವಿಶೇಷ.
ಮಳೆಗಾಲದ ಬೆಳಿಗ್ಗೆ ಮೋಡಗಳು ಕುಂದಾದ್ರಿಯ ಕೆಳಗೆ ಸಾಗುವ ದೃಶ್ಯ ರೋಮಾಂಚಕಾರಿ, ಇಲ್ಲಿಂದ ಶೃಂಗೇರಿ ಭಾಗದಿಂದ ಹರಿದು ಬರುವ ತುಂಗೆ ಕಾಣುತ್ತಾಳೆ ತಿರುಗಿದರೆ ವರಾಹಿಯೂ ಘೋಚರಿಸುತ್ತಾಳೆ.
ಕೆಳಗಿನಿಂದ ಚಾರಣ ಮಾಡಿದರೆ ಮೂರು ಗಂಟೆ ಕಾಲ ಬೇಕು ಇಲ್ಲಿಗೆ ತಲುಪಲು ಅಥವ ನಿಮ್ಮ ವಾಹನದಲ್ಲಿಯೇ ಇಲ್ಲಿಗೆ ತಲುಪಲು ಡಾಂಬಾರ್ ಘಾಟಿ ರಸ್ತೆ ಇದೆ ಅಲ್ಲಿಂದ ಮೆಟ್ಟಿಲು ಹತ್ತಿ ಮೇಲೆ ಹೋದರೆ ಕುಂದಾದ್ರಿ ಹಿಲ್ ಟಾಪ್ ವೀವ್ ಪಾಯಿಂಟ್ ತಲುಪುತ್ತೀರಿ.
ಅಲ್ಲಿಂದ ಪಶ್ಚಿಮ ಘಟ್ಟದ ಸುಂದರ ದೃಶ್ಯ ವೀಕ್ಷಿಸಬಹುದು.
ತೀಥ೯ಹಳ್ಳಿಯಿಂದ ಆಗುಂಬೆ
ಮಾಗ೯ದಲ್ಲಿ ಸಾಗಿ ಗುಡ್ಡೆಕೇರಿ ಎಂಬ ಊರಿಂದ ಎಡಕ್ಕೆ ಹೋದರೆ ಕುಂದಾದ್ರಿ ಬೆಟ್ಟಕ್ಕೆ ಹೋಗುವ ರಸ್ತೆ ಇದೆ ಇಲ್ಲಿ೦ದ ಆಗುOಬೆ ಸಮೀಪದಲ್ಲಿದೆ.
ಕುವೆಂಪುರವರು ಕುಂದಾದ್ರಿ ಬೆಟ್ಟದಲ್ಲಿ ಸೂಯೋ೯ದಯ ವೀಕ್ಷಿಸಲಿಕ್ಕಾಗಿ ಸಮೀಪದ ಸಂಬಂದಿಗಳ ಮನೆಯಲ್ಲಿ ರಾತ್ರಿ ತಂಗಿ ಬೆಳಗಾಗುವ ಮುನ್ನ ಬೆಟ್ಟ ಏರಿ ಸೂಯೋ೯ದಯ ವೀಕ್ಷಿಸಿದ ಅನುಭವ ಅವರ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.
ಹೊಸನಗರ ತಾಲ್ಲೂಕಿನ ಹೊಂಬುಜ ಜೈನ ಮಠದ ಸುಪದಿ೯ಯಲ್ಲಿರುವ ಈ ಸ್ಥಳ ಇತ್ತೀಚಿನವರೆಗೆ ನಕ್ಸಲೇಟ ಪೀಡಿತ ವ್ಯಾಪ್ತಿ ಪ್ರದೇಶವಾದ್ದರಿಂದ ಪ್ರವಾಸಿಗಳಿಗೆ ಪ್ರವೇಶಕ್ಕೆ ಮಿತಿ ಇತ್ತು, ಈಗ ಅಂತಹ ನಿಬ೯೦ದವಿಲ್ಲ.
ಸುಮಾರು 2000 ವಷ೯ದ ಹಿಂದೆ ಜೈನ ಆಚಾಯ೯ ಮುನಿಗಳಾದ #ಕುಂದ_ಕುಂದಾಚಾಯ೯ರು ದಟ್ಟಡವಿಯ ಸಮುದ್ರ ಮಟ್ಟದಿಂದ 3200 ಅಡಿ ಎತ್ತರದ ಈ ಪರ್ವತದಲ್ಲಿ ತಪಸ್ಸು ಮಾಡಿದ್ದರು.
ಜೈನರ ಪವಿತ್ರ ಗ್ರಂಥ #ಅನುಸರಣ ಇಲ್ಲೇ ರಚಿಸಿದ್ದರಿಂದ ಈ ಸ್ಥಳ ದೇಶದ ಜೈನರಿಗೆ ಅತ್ಯಂತ ಪವಿತ್ರ ಮತ್ತು ಪುಣ್ಯ ಸ್ಥಳವಾಗಿದೆ.
ಇಲ್ಲಿ ಪಾರ್ಶನಾಥ ತೀರ್ಥಂಕರರಿಗೆ ಸಮರ್ಪಿತವಾದ ಜೈನ ದೇವಾಲಯವಿದೆ.
ಈಗ ಇಲ್ಲಿಗೆ ವಾಹನಗಳು ಸರಾಗವಾಗಿ ತಲುಪುತ್ತದೆ ಆದರೂ ಕಡಿದಾದ ತಿರುವು, ಅಲ್ಲಿಂದ ಅತ್ಯಂತ ಆಳದಲ್ಲಿ ಕಾಣುವ ಊರು, ಮನೆಗಳು ನೋಡುವವರಿಗೆ ಭಯ ಉoಟು ಮಾಡುತ್ತದೆ.
ಶ್ರೀಮತಿ ಕಾಡಮ್ಮ ನಾಗಪ್ಪ ಹೆಗ್ಗಡೆ ದಂಪತಿಗಳು ಇಲ್ಲಿಗೆ ರಸ್ತೆ ಮಾಡಿಸಿಕೊಟ್ಟ ದಾನಿಗಳOತೆ.
ಇತ್ತೀಚಿಗೆ ಬೆಟ್ಟದ ತುದಿಯಲ್ಲಿ ಪಾವಟಿಗೆ ಅಳವಡಿಸಿ, ಸುಂದರವಾದ ಪ್ರವಾಸಿಗಳು ಕುಳಿತು ವಿಶ್ರಮಿಸಿಕೊಳ್ಳುತ್ತಾ ಸುತ್ತಲಿನ ಪರಿಸರ ವೀಕ್ಷಣೆಗೆ ಗೋಪುರ ನಿಮಿ೯ಸಿದ್ದಾರೆ.
ಆಯುರ್ವೇದ ಸಂಶೊದನೆಗಾಗಿ 200 ಎಕರೆ ಅರಣ್ಯವನ್ನ ರಕ್ಷಣಾ ಬೇಲಿ ನಿಮಿ೯ಸಿ ಸಂರಕ್ಷಿಸುವ ಕೆಲಸ ಮಾಡಿದ್ದಾರೆ.
ಬೆಟ್ಟದಲ್ಲಿ ಕೊಳದ ಸುತ್ತ, ಬOಡೆಯ ಸುತ್ತ ರಕ್ಷಣಾ ಬೇಲಿ ನಿಮಿ೯ಸಿದ್ದರಿಂದ ಪ್ರವಾಸಿಗಳಿಗೆ ಮೊದಲಿನಂತೆ ಅಪಾಯವಿಲ್ಲ.
ಇಲ್ಲಿ ಒಬ್ಬಿಬ್ಬರು ಮಾತ್ರ ಹೋಗಲು ಭಯ ಆಗುತ್ತೆ, ರಾತ್ರಿ ಹೊತ್ತು ಇರುವುದ೦ತು ಅಸಾಧ್ಯ ಆದರೆ 2000 ವಷ೯ದ ಹಿಂದೆ ಇಲ್ಲಿನ ಗುಹೆಯಲ್ಲಿದ್ದು ಸಾದನೆ ಮತ್ತು ಗ್ರOಥ ರಚನೆ ಮಾಡಿದ್ದರೆಂದರೆ ಅವರು ಜೀವ ಮತ್ತು ಜೀವನದ ಬಗ್ಗೆ ಎಂತಹ ತ್ಯಾಗಿಗಳಾಗಿದ್ದರೆಂದು ಅಥ೯ವಾಗುತ್ತೆ.
ಶಿವಮೊಗ್ಗ ಜಿಲ್ಲೆಯಲ್ಲಿಯೇ ಇಲ್ಲಿಂದ ಕಾಣುವಷ್ಟು ಸುಂದರ ಪ್ರಕೃತಿ ಬೇರೆಲ್ಲೂ ನೋಡಲು ಸಿಗುವುದಿಲ್ಲ.
ಈ ಸ್ಥಳದ ಲೊಕೇಶನ್ ಕಾಮೆಂಟ್ ನಲ್ಲಿದೆ ನೋಡಿ.
Comments
Post a Comment