#ಭದ್ರಾವತಿ_ಮಾಜಿ_ಶಾಸಕ_ಅಪ್ಪಾಜಿಗೌಡರ_ನೆನಪುಗಳು
#ಶಿವಮೊಗ್ಗ_ಜಿಲ್ಲೆಯಲ್ಲಿ_ಪಕ್ಷೇತರವಾಗಿ_ಶಾಸಕರಾದ_ತಾಕತ್ತು_ಅವರದ್ದು.
#ಐದನೆ_ಪುಣ್ಯ_ತಿಥಿ_ಸಂದಭ೯ದಲ್ಲಿ_ಅವರ_ಸ್ಮರಣೆ
#bhadravathi #Appajigowda #MLA #coronavirus2020
1994 ರಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ವಿದಾನ ಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಅಪ್ಪಾಜಿ ಗೌಡರೆಂಬ ಯಂಗ್ ಮ್ಯಾನ್ ಗೆದ್ದಿದ್ದರೆಂಬ ಸೋಜಿಗದ ಸುದ್ದಿ ಕೇಳಿದ್ದೆ ಆದರೆ ಅವರ ಪರಿಚಯ ಬೇಟಿ ಆಗಿರಲಿಲ್ಲ.
1995ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯನಾದಾಗ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಅವರ ಪರಿಚಯ ಆಯಿತು ಆಗ ಇವರ ಭದ್ರಾವತಿ ವಿದಾನ ಸಭಾ ಕ್ಷೇತ್ರದ ಶ್ರೀಮತಿ ಬಲ್ಕೀಷ್ ಬಾನು ಜಿ.ಪಂ. ಅಧ್ಯಕ್ಷೆ .
ನನ್ನ ಎಲ್ಲಾ ಜನಪರ ಹೋರಾಟಕ್ಕೆ ಜಿ.ಪಂ.ಸಭೆಯಲ್ಲಿ ಬೆಂಬಲಿಸಿ ಶಾಸಕರಾಗಿದ್ದ ಅಪ್ಪಾಜಿ ಗೌಡರು ಬೆಂಬಲಿಸಿ ಮಾತಾಡುತ್ತಿದ್ದದ್ದು ಈಗ ನೆನಪು.
ಕೆಲ ವರ್ಷದ ಹಿಂದೆ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಶ್ರೀಕಾಂತರ ಜೊತೆ ಅವರ ಮನೆಗೆ ಹೋದಾಗ ಒಂದೆರೆಡು ಗಂಟೆ ಈ ಹಳೇ ನೆನಪುಗಳ ಮಾತಾಡಿದ್ದೆವು.
ಕೊರಾನ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ 3- ಸೆಪ್ಟಂಬರ್- 2020 ರಂದು ಅಪ್ಪಾಜಿ ಗೌಡರು ಇಹಲೋಕ ತ್ಯಜಿಸಿದರು, ಇವತ್ತು ಅವರ ಐದನೇ ಪುಣ್ಯ ತಿಥಿ.
Comments
Post a Comment