#ಘತ್ತರಗಿಯ_ಭಾಗಮ್ಮ_ದೇವಿ.
#ಒಂದು_ಹಾಡು_ಸಾವಿರ_ಕಿಲೋಮೀಟರ್_ಪ್ರಯಾಣಕ್ಕೆ_ಕಾರಣವಾಯಿತು.
#ಆ_ಹಾಡು_ಕೇಳಿದ_ನಂತರ_ಅಲ್ಲಿಗೆ_ಹೋಗಲೇ_ಬೇಕೆಂದು_ನಿರ್ದರಿಸಿದ್ದೆ.
#ಕಲಬುರ್ಗಿ_ಜಿಲ್ಲೆಯ_ಅಪ್ಜಲ್ಪುರ_ತಾಲ್ಲೂಕಿನ_ಘತ್ತರಗಿಯಲ್ಲಿದೆ_ಬಾಗಮ್ಮ_ದೇವಾಲಯ.
#ವಿಜಯನಗರ_ಪತನದ_ನಂತರ_ಕೃಷ್ಣದೇವರಾಯರ_ಕುಲದೇವತೆ_ಇಲ್ಲಿಗೆ_ಬಂದು_ನೆಲೆಸಿದಳೆಂಬ_ಸ್ಥಳಪುರಾಣ_ಇದೆ
#ಇಲ್ಲಿಗೆ_ಬಂದು_ಪ್ರಾರ್ಥಿಸಿದರೆ_ಇಷ್ಟಾರ್ಥ_ನೂರಕ್ಕೆ_ನೂರು_ಸಿದ್ಧಿ_ಎಂಬ_ನಂಬಿಕೆ.
#ನಿತ್ಯ_ಕನಿಷ್ಟ_ಎರೆಡು_ಸಾವಿರ_ಭಕ್ತರಿಗೆ_ದಾಸೋಹ
#ಇಲ್ಲಿ_ದೇವರ_ಅರ್ಚಕರು_ಹಿಂದುಳಿದ_ವರ್ಗದ_ಮಹಿಳೆಯರು.
#ganagapura #gattaragi #vijayapurakarnataka
#bagamma #afjalpura
ನಾನು ಈ ಚೌಡಿಕೆಯ ಪ್ರಕಾರದ ಸ್ಥಳ ಪುರಾಣದ ಹಾಡು ಒಂದು ಸಾವಿರಕ್ಕೂ ಹೆಚ್ಚು ಸಾರಿ ಕೇಳಿದ್ದೇನೆ.
ಉತ್ತರ ಕರ್ನಾಟಕದ ಸೊಗಡಿನ ಕನ್ನಡದಲ್ಲಿ ತಮ್ಮದೇ ಸಂಪ್ರದಾಯಿಕ ವಾದ್ಯದೊಂದಿಗೆ ಕಲಬುರ್ಗಿ ಜಿಲ್ಲೆಯ ಅಪ್ಜಲ್ಪುರ ತಾಲ್ಲೂಕಿನ ಘತ್ತರಗ ಎಂಬ ಊರಿನ ಬಾಗಮ್ಮ ತಾಯಿಯ (ಭಾಗ್ಯವಂತೆ ದೇವಿಯ) ಸ್ಥಳ ಪುರಾಣದ ಕಥೆ ಹೇಳುವು ಹಾಡು ಇದು.
ಕಾಮೆಂಟ್ ನಲ್ಲಿರುವ ಲಿಂಕ್ ಕ್ಲಿಕ್ ಮಾಡಿ ಈ ಹಾಡು ಕೇಳ ಬಹುದು.
ವಿಜಯನಗರದ ಅರಸರ ಕುಲದೇವತೆ ಭಾಗ್ಯವತಿ ವಿಜಯನಗರದ ಸಿರಿ ಸಮೃದ್ಧಿಗೆ ಕಾರಣಳಾದ ದೇವತೆ.
ಕೃಷ್ಣದೇವರಾಯರ ನಂತರ ಕೊನೆಯ ಅರಸ ರಾಮರಾಯನು ಈ ದೇವಿಯ ವಚನ ಮಾನ್ಯ ಮಾಡದಾದನು.
ಇದರ ಪರಿಣಾಮ ವಿಜಯ ನಗರದ ಮಹಾ ಸಂಪತ್ತು ಕ್ಷೀಣಿಸ ತೊಡಗಿತ್ತು.
ಆ ಕಾಲದಲ್ಲಿ ದೇವಿಯ ಕಡೆಗಾಣಿಸಿದ್ದರಿಂದ ದೇವಿ ತುಂಗಾ ಭದ್ರಾ ನದಿಗೆ ಸರ್ಪದ ರೂಪದಲ್ಲಿ ಹಾರಿ ನಂತರ ಪ್ರವಾಹದಲ್ಲಿ ಸಾಗಿ ಕಲಬುರ್ಗಿ ಜಿಲ್ಲೆಯಲ್ಲಿ ಪ್ರವಹಿಸುವ ಬೀಮಾ ನದಿ ಮಾರ್ಗವಾಗಿ ಘತ್ತರಗಿ ಎಂಬ ಊರಿನಲ್ಲಿ ಬಂದು ನೆಲೆಸುತ್ತಾಳೆ ಎಂಬ ಸ್ಥಳ ಪುರಾಣ ಜನರ ನಂಬಿಕೆ ಆಗಿದೆ.
ಅಲ್ಲಿ ದ್ಯಾವಣ್ಣ ಎಂಬ ದೈವಭಕ್ತ ಕಡು ಬಡವನಿಗೆ ಕಾಜಿನ ಒಂದು ಕಂಬದ ರೂಪದಲ್ಲಿ ಗೋಚರಿಸುತ್ತದೆ.
ಅದರಲ್ಲಿ ಬೇರೆ ನೀರು ಮತ್ತು ಘಟ ಸರ್ಪ ನೋಡುತ್ತಾನೆ ಆ ಕಂಬದಿಂದ ವಿಚಿತ್ರವಾದ ಧ್ವನಿ ಕೇಳಿ ಬರುತ್ತದೆ ಅವನಿಗೆ.
ಅವನು ಅದನ್ನು ಊರಲ್ಲಿ ಬಂದು ಎಲ್ಲರಿಗೂ ತಿಳಿಸುತ್ತಾನೆ ಆದರೆ ಊರವರು ಯಾರೂ ಇದನ್ನು ನಂಬುವುದಿಲ್ಲ.
ಬಡ ಕುರುಬನ ಈ ಮಾತು ಹುಚ್ಚರಾಡುವ ಮಾತು ಎಂದು ಊರ ಜನ ಹೀಯಾಳಿಸುತ್ತಾರೆ.
ನಂತರ ನಡೆದ ಕೆಲ ಪವಾಡಗಳಿಂದ ಊರವರಿಗೆ ಸತ್ಯ ದರ್ಶನ ಆಗಿ ಭಾಗಮ್ಮದೇವಿಗೆ ಗುಡಿ ನಿರ್ಮಿಸುತ್ತಾರೆ.
ಈ ದೇವಾಲಯದಲ್ಲಿ ಸಿಡಿ ಆಡುವ ಹರಕೆ ಪದ್ಧತಿ ಪ್ರಸಿದ್ಧಿ ಪಡೆದಿತ್ತು ನಂತರ ಮಾನವ ಹಕ್ಕುಗಳ ಆಯೋಗದ ತೀರ್ಮಾನವನ್ನು ಮನ್ನಿಸಿ ರಾಜ್ಯ ಸರ್ಕಾರ ಇಲ್ಲಿ ಸಿಡಿ ಪದ್ಧತಿ ರದ್ದು ಮಾಡಿದೆ.
ಆದ್ದರಿಂದ ದೇವಾಲಯದ ಒಳಗೆ ಶತಮಾನಗಳಿಂದ ಆಚರಣೆಯಲ್ಲಿದ್ದ ಸಿಡಿ ಕಂಬಗಳನ್ನು ಸಂರಕ್ಷಿಸಿಟ್ಟಿದ್ದಾರೆ.
ಸುಮಾರು ನಾಲ್ಕು ನೂರು ವರ್ಷಗಳಿಂದ ಇಲ್ಲಿ ಪ್ರಾರ್ಥನೆ ಮಾಡಿದರೆ ಭಕ್ತರ ಇಷ್ಟಾರ್ಥ ಸಿದ್ದಿ ನೂರಕ್ಕೆ ನೂರು ಶತಸಿದ್ಧ ಎಂಬ ನಂಬಿಕೆ ಭಕ್ತರಲ್ಲಿದೆ.
ಘತ್ತರಗದ ಬಾಗಮ್ಮ ಸಿರಿ ಸಂಪತ್ತುಗಳನ್ನು ನೀಡುವ ಏಕೈಕ ದೇವತೆ ಎಂದು ಮಹಾರಾಷ್ಟ್ರ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಹೆಚ್ಚು ಹೆಚ್ಚು ಭಕ್ತರು ಬರಲು ಪ್ರಾರಂಬಿಸಿದ ಮೇಲೆ ಈ ಕ್ಷೇತ್ರ ಇನ್ನೂ ಹೆಚ್ಚು ಪ್ರಸಿದ್ದಿ ಪಡೆಯಿತು.
ಪ್ರತಿನಿತ್ಯ ಇಲ್ಲಿನ ಅನ್ನ ದಾಸೋಹಕ್ಕೆ ಕನಿಷ್ಟ 2000 ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ ವಿಶೇಷ ದಿನದಲ್ಲಿ ಇದರ 5- 6 ಪಟ್ಟು ಹೆಚ್ಚು ಭಕ್ತರು ಬರುತ್ತಾರೆ.
ಇಲ್ಲಿಂದ ದೇವರ ಗಾಣಗಾಪುರದ ದತ್ತ ಮಂದಿರ ಕೇವಲ 28 ಕಿ.ಮಿ.ದೂರದಲ್ಲಿದೆ.
440 ಕಿ.ಮಿ.ದೂರದ ಇಲ್ಲಿಗೆ ಹುಬ್ಬಳ್ಳಿ- ನರಗುಂದ - ಕೊಲ್ಹಾರ - ಬಸವನ ಬಾಗೇವಾಡಿ ಮಾರ್ಗದಲ್ಲಿ ಈ ದೇವಾಲಯ ಮಧ್ಯಾಹ್ನ 2ಕ್ಕೆ ತಲುಪಿದಾಗ ದೇವರ ದರ್ಶನಕ್ಕೆ ಸಾವಿರಾರು ಜನ ಸರತಿ ಸಾಲಿನಲ್ಲಿದ್ದರು.
ಇಲ್ಲಿಂದ ದೇವರ ಗಾಣಿಗಾಪುರದ ದತ್ತಾತ್ರೇಯ ಮಂದಿರಕ್ಕೆ ನಮ್ಮ ಮುಂದಿನ ಪ್ರಯಾಣ ಪ್ರಾರಂಬಿಸಿದೆವು.
ಒಂದು ಹಾಡು ಸುಮಾರು ಒಂದು ಸಾವಿರ ಕಿಲೋ ಮೀಟರ್ ಪ್ರಯಾಣ ಮಾಡಿ ಈ ಸ್ಥಳದ ದರ್ಶನ ಮಾಡಿಸಿತು ಎಂಬುದೇ ವಿಶೇಷ.
ಕಾಮೆಂಟ್ ಲಿಂಕ್ ನಲ್ಲಿ ಒಮ್ಮೆ ನೀವೂ ಆ ಹಾಡು ಕೇಳಿ ನೋಡಿ.. ನಿಮಗೂ ಮನಸ್ಸಾದರೆ ಅಲ್ಲಿಗೆ ಹೋಗಿ ಬನ್ನಿ.
Comments
Post a Comment