#ಹಳ್ಳಿಯಲ್ಲಿರುವ_ನಿಮ್ಮ_ಮನೆ_ತಂದೆ_ತಾಯಿಗಳ_ಸುರಕ್ಷತೆ_ಬಗ್ಗೆ_ಯೋಚಿಸಿ.
#ಭಾರತದಲ್ಲಿನ_ತನ್ನ_ಮನೆಗೆ_ಕಳ್ಳರು_ಬಂದಿದ್ದನ್ನು_ಅಮೇರಿಕಾದಲ್ಲಿದ್ದ_ಅವರ_ಪುತ್ರಿ_ಎಚ್ಚರಿಸಿದ_ಘಟನೆ.
#ಮಲೆನಾಡಿನ_ಒ೦ಟಿ_ಮನೆಗಳು_ದರೋಡೆಕೋರರಿಗೆ_ಸುಲಭ_ಟಾಗೆ೯ಟ್.
#ಸಕಾ೯ರ_ಮಲೆನಾಡಿನ_ಒ೦ಟಿ_ಮನೆ_ವಾಸಿಗಳಿಗೆ_ಬಂದೂಕು_ಲೈಸೆನ್ಸ್_ನೀಡಬೇಕು.
#ಸಾಗರ_ತಾಲ್ಲೂಕಿನ_ಬ್ಯಾಕೋಡಿನ_ನಿವೃತ್ತ_ಪೋಸ್ಟ್_ಮಾಸ್ಟರ್_ದಂಪತಿ_ಹತ್ಯೆ_ಆಗಿ_ಐದು_ವರ್ಷ
#Westernghats #Malenadu #Selfprotection #Docoits #Softtargets #cctv #Camera #Dogs
ಮಲೆನಾಡಿನ ಒಂಟಿ ಮನೆಗಳು ದರೋಡೆಕೋರರಿಗೆ ಸಾಫ್ಟ್ ಟಾಗೆ೯ಟ್ (ಸುಲಭ ಗುರಿ) ಆಗುತ್ತಿದೆ ಇದಕ್ಕೆ ಸರ್ಕಾರ ಏನು ಮಾಡಬಹುದು? ಸ್ವತಃ ನಾವೇನು ತಯಾರಿ ಮಾಡಿಕೊಳ್ಳಬಹುದು? ಇತ್ತೀಚಿನ ಈ ಕೆಳಗಿನ ಘಟನೆ ನೋಡಿ....
ಈಗಿನ ಕಾಲದಲ್ಲಿ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ, ಅಮೆರಿಕಾದಲ್ಲಿ ಕುಳಿತು ದೂರದ ಬಾಗಲಕೋಟೆಯ ಮುಧೋಳ ನಗರದಲ್ಲಿ ಏನಾಗುತ್ತಿದೆ ತಮ್ಮ ಮನೆಯ ಹತ್ತಿರ ಯಾರು ಬಂದಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.
ಮುಧೋಳದಲ್ಲಿ ನಡೆಯುವ ಘಟನೆಯನ್ನು ದೂರದ ಅಮೆರಿಕಾದಲ್ಲಿ ನೋಡಿ ಅಪರಾಧ ಕೃತ್ಯವನ್ನು ತಪ್ಪಿಸಿದ ಚಾಣಾಕ್ಷ ಘಟನೆಯೊಂದು ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಹೆಚ್ಚಾಗಿದೆ, ಅಮೇರಿಕಾದಲ್ಲಿ ನೆಲೆಸಿದ ಮಗಳಿಂದ ಕಳ್ಳರ ಕೃತ್ಯ ಬಯಲಾಗಿದೆ.
ಹನುಮಂತಗೌಡ ಸಂಕಪ್ಪನವರ ಎಂಬುವವರ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಈ ಸಿಸಿ ಕ್ಯಾಮರಾದ ದೃಶ್ಯಗಳು ತನ್ನ ಮೊಬೈಲ್ ನಲ್ಲಿ ವೀಕ್ಷಿಸುವಂತೆ ಹನುಮಂತಗೌಡ ಸಂಕಪ್ಪನವರ ಮಗಳು ವ್ಯವಸ್ಥೆ ಮಾಡಿಕೊಂಡಿದ್ದರು.
ಮನೆಯ ಸಿಸಿ ಕ್ಯಾಮರಾದ ವಿಡಿಯೋ ನೋಡುವಾಗ ರಾತ್ರಿ ವೇಳೆ ತಮ್ಮ ಮನೆಗೆ ಯಾರೋ ಕಳ್ಳರು ಕಂಪೌಂಡ್ ದಾಟಿ ಬಂದಿರುವುದು ಕಂಡಿದೆ, ಅಮೇರಿಕಾದಲ್ಲಿ ಕುಳಿತೇ ತನ್ನ ಮೊಬೈಲ್‌ನಲ್ಲಿ ಸಿಸಿ ಕ್ಯಾಮರಾ ದೃಶ್ಯಗಳನ್ನು ಹನುಮಂತಗೌಡ ಸಂಕಪ್ಪನವರ ಮಗಳು ಶೃತಿ ಗಮನಿಸಿದ್ದಾರೆ.
ತಕ್ಷಣವೇ ತಂದೆ ಹನುಮಂತಗೌಡ ಸಂಕಪ್ಪನವರ್ ಗೆ ಕರೆ ಮಾಡಿದ ಮಗಳು ಶೃತಿ ಆಲರ್ಟ್ ಆಗಿರುವಂತೆ ಹೇಳಿದ್ದಾರೆ ನಂತರ ತಂದೆ ಹನುಮಂತಗೌಡ ಸಂಕಪ್ಪನವರ ಬಾಗಿಲು ತೆರೆದಾಗ ಕಳ್ಳರು ಹೆದರಿಕೊಂಡು ಎಸ್ಕೇಪ್ ಆಗಿದ್ದಾರೆ.
ಅಮೇರಿಕದಲ್ಲಿ ನೆಲೆಸಿರುವ ಹನುಮಂತಗೌಡ ಸಂಕಪ್ಪನವರ ಮಗಳು ಶೃತಿ ಸಂಕಪ್ಪನವರ ವೃತ್ತಿಯಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ.
ಕಳ್ಳರು ರಾಜಾರೋಷವಾಗಿ ಮನೆಗಳ್ಳತನ ಮಾಡಲು ಬಂದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಧೋಳ ನಗರದ ಸಿದ್ದರಾಮೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ.
ಒಂದು ಕಾಲದಲ್ಲಿ ಮಲೆನಾಡಿನ ಒಂಟಿ ಮನೆಗಳು ಕಳ್ಳರು ದರೋಡೆಕೋರರಿಂದ ಸುರಕ್ಷಿತವಾಗಿತ್ತು ಇದಕ್ಕೆ ಕಾರಣ ಅವಿಭಕ್ತ ಕುಟುಂಬಗಳಿಂದ ಮನೆ ತುಂಬಾ ಕುಟುಂಬ ಸದಸ್ಯರು ಇರುತ್ತಿದ್ದರು ಮತ್ತು ನಾಯಿಗಳು ಹಾಗು ಪಸಲು ರಕ್ಷಣೆಯ ಬಂದೂಕುಗಳೂ ಒಂದು ಕಾರಣ ಇರಬಹುದು.
ಆದರೆ ಈಗ ಮಲೆನಾಡು ಬದಲಾಗಿದೆ ವಿಭಕ್ತ ಕುಟು೦ಬಗಳಾಗಿದೆ, ಉದ್ಯೋಗಕ್ಕಾಗಿ ಮಕ್ಕಳು ಪೇಟೆ ಸೇರಿದ್ದಾರೆ ಹಳ್ಳಿ ಮನೆಗಳು ವೃದ್ಧಾಶ್ರಮ ಆಗಿದೆ, ನಾಯಿ ಸಾಕುವುದಿಲ್ಲ, ಪಸಲು ಮತ್ತು ಆತ್ಮ ರಕ್ಷಣೆಗೆ ಬಂದೂಕು ಇಲ್ಲ.
ಇಂತಹ ಮನೆಗಳ ಮಾಹಿತಿ ಹೆಕ್ಕಿ ಕಳ್ಳರಿಗೆ ಕೊಡುವ ಮಾಹಿತಿದಾರರು ಪ್ರತಿ ಹಳ್ಳಿಗಳಲ್ಲಿದ್ದಾರೆ.
ಕಳ್ಳರಿಗೆ ದರೋಡೆಕೋರರಿಗೆ ಇಂತಹ ಮಲೆನಾಡಿನ ಹಳ್ಳಿ ಮನೆಯ ಒಂಟಿ ಮನೆಗಳು ಸಾಫ್ಟ್ ಟಾಗೆ೯ಟ್ಗಳಾಗಿದೆ.
ದೋಚಿದ ನಂತರ ಸುಲಭವಾಗಿ ಹೋಗಲು ರಸ್ತೆ ವಾಹನಗಳು ಇದೆ.
ಇದು ಮಲೆನಾಡಿನ ಪ್ರತಿಯೊಂದು ಒಂಟಿ ಮನೆಯ ಪೋಷಕರ ಜೀವ ರಕ್ಷಣೆಗೆ ಹೆಚ್ಚಿನ ಜವಾಬ್ದಾರಿಯನ್ನು ಆ ಕುಟುಂಬದ ಮಕ್ಕಳು ಉದ್ಯೋಗಕ್ಕಾಗಿ ಎಲ್ಲೇ ಇದ್ದರೂ ಜಾಗೃತೆ ವಹಿಸಬೇಕು.
ಹೀಗಾಗಿ ಮಲೆನಾಡ ಒಂಟಿ ಮನೆಗಳ ವಾಸಿಗಳಿಗೆ ಸಕಾ೯ರ ವಿಶೇಷ ಬಂದೂಕು ಲೈಸೆನ್ಸ್ ನೀಡಲು ಸುಲಭ ಮತ್ತು ಶೀಘ್ರ ಪ್ರಕ್ರಿಯೆಗಳನ್ನ ವಿದಿಸಿ ಬಂದೂಕು ರಕ್ಷಣೆಗೆ ಇಟ್ಟುಕೊಳ್ಳಲು ಅನುವು ಮಾಡಬೇಕು.
ಒಂಟಿ ಮನೆಯ ಉದ್ಯೋಗಕ್ಕೆ ಪಟ್ಟಣ ಸೇರಿದ ಮಕ್ಕಳು ತಮ್ಮ ಪೋಷಕರ ಆತ್ಮ ರಕ್ಷಣೆಗಾಗಿ ಸಿ.ಸಿ ಕ್ಯಾಮೆರಾ, ಸೈರನ್ ಗಳನ್ನ ಅಳವಡಿಸಿ ತಮ್ಮ ಮೊಬೈಲ್ ಪೋನ್ ನಲ್ಲೇ ಮಾನಿಟರಿಂಗ್ ಮಾಡಬಹುದು.
ಒಳ್ಳೇ ತಳಿಯ ಎರಡಕ್ಕಿಂತ ಹೆಚ್ಚು ನಾಯಿ ಸಾಕುವ ಅಭ್ಯಾಸ ಕೂಡ ಮಾಡಬೇಕು.
ಕೊಲೆ ದರೋಡೆ ಮಾಡಿದ ನಂತರ ಅವರನ್ನ ಪೋಲಿಸರು ಹಿಡಿಯುತ್ತಾರೆ ಆದರೆ ಕೊಲೆ ದರೋಡೆ ಆಗದಂತೆ ಮುಂಜಾಗೃತೆ ನಮಗೆ ನಾವೇ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅತಿ ಅವಶ್ಯಕತೆ ಇದೆ ಮತ್ತು ಅನಿವಾಯ೯ ಕೂಡ.
ಸಾಗರ ತಾಲ್ಲೂಕಿನ ಹಿನ್ನೀರಿನ ಸಿಗಂದೂರು ಕ್ಷೇತ್ರದ ಬ್ಯಾಕೋಡಿನ ಈ ಜೋಡಿ ಕೊಲೆ ಆಪರಾದಿಗಳು ಐದು ವರ್ಷವಾದರೂ ಪೋಲಿಸರಿಗೆ ಸಿಕ್ಕಿಲ್ಲ.
Comments
Post a Comment