Skip to main content

3468. ದೋಸೆ ಪುರಾಣ

#ದೋಸೆ_ಇತಿಹಾಸ

#ದೋಸೆಯ_ತವರುಮನೆ_ದಕ್ಷಿಣಭಾರತದ_ಉಡುಪಿ

#ನೀರು_ದೋಸೆ_ಮೂಲ_ಕರಾವಳಿಯ_ತುಳು_ಪ್ರದೇಶ

#ದೋಸೆ_ಒಂದನೆ_ಶತಮಾನದಿಂದ_ಬಳಕೆಯಲ್ಲಿ

#ಹನ್ನೆರಡನೆ_ಶತಮಾನದ_ಸಂಸ್ಕೃತ_ವಿಶ್ವಕೋಶ_ಮನಸೋಲ್ಲಾಸದಲ್ಲಿ_ದೋಸೆ_ಪಾಕ_ವಿದಾನ_ಇದೆ.

#ಸ್ವಾತಂತ್ರ್ಯನಂತರ_ದೆಹಲಿ_ಕನಾಟ್_ಪ್ಲೇಸಿನ_ಮದ್ರಾಸ್_ಹೋಟೇಲಿಂದ_ದೆಹಲಿಯಲ್ಲಿ_ದೋಸೆ_ಪ್ರಸಿದ್ದಿ_ಆಯಿತು.

#ಉಡುಪಿ_ರೆಸ್ಟೋರೆಂಟ್_1930ರಿಂದ_ಮುಂಬೈಯಲ್ಲಿ_ದೋಸೆ_ಪರಿಚಯಿಸಿತು.

#ನಮ್ಮ_ಮಲ್ಲಿಕಾ_ವೆಜ್_ಗ್ರಾಹಕರಿಗೆ_ನೀರುದೋಸೆ_ನಿತ್ಯ_ನೀಡುತ್ತಿದೆ.


#Dosa #Neerudose #Mallikaveg #Hombujaresidency #Lodge  
#Restorant #Yadehalli #Anandapuram 
#Masaladose #Setdose

    ದೋಸೆಯಲ್ಲಿ 112 ಕ್ಯಾಲೋರಿ ಶಕ್ತಿ ಇದೆ, 84% ಕಾರ್ಬೋಹೈಡ್ರೇಟ್ ಮತ್ತು 16% ಪ್ರೋಟೀನ್ ಇದೆ.

  ಇತ್ತೀಚಿಗೆ ಅಮೇರಿಕಾ ಅಧ್ಯಕ್ಷಿಯ ಚುನಾವಣಾ ಪ್ರಚಾರದಲ್ಲಿ ಉಪಾದ್ಯಕ್ಷೆ ಆಗಿರುವ ಕಮಲಾ ಹ್ಯಾರೀಸ್ ನಟಿ ಮಿಂಡಿ ಕಾಲಿಂಗ್ ಜೊತೆ ಮಸಾಲೆ ದೋಸೆ ಮಾಡುವ ಮೂಲಕ ವಿಶ್ವದಾದ್ಯಂತ ಗಮನ ಸೆಳೆದಿದ್ದರು,ಭಾರತ ಮೂಲದ ಅಮೇರಿಕನ್ ಮತದಾರರ ಗಮನ ಸೆಳೆಯಲು.

   ನಮ್ಮ #ಮಲ್ಲಿಕಾ_ವೆಜ್ ನಲ್ಲಿ ಎಲ್ಲಾ ಸಂಪ್ರದಾಯಿಕ ದೋಸೆಗಳು ಲಭ್ಯವಿದೆ.

    ಈಗ ಅನೇಕ ಗ್ರಾಹಕರ ಬೇಡಿಕೆ ಆಗಿದ್ದ #ನೀರು_ದೋಸೆ ಈಗ ಲಭ್ಯವಿದೆ.

    ಮೂರು ನೀರು ದೋಸೆಯ ಒಂದು ಪ್ಲೇಟಿನಲ್ಲಿ ಹಸಿ ಮೆಣಸಿನಕಾಯಿಯ ತೆಂಗಿನ ಕಾಯಿ ಚಟ್ನಿ ಮತ್ತು ಕೆಂಪು ಒಣ ಮೆಣಸಿನಕಾಯಿ ಮತ್ತು ತೆಂಗಿನ ಕಾಯಿಯ ನೀರು ಚಟ್ನಿ ಆದ ರೇಲ್ ಚಟ್ನಿ ಜೊತೆ ಗ್ರಾಹಕರಿಗೆ ನೀಡುತ್ತಿದೆ ಬೆಲೆ ಕೇವಲ 50 ರೂಪಾಯಿ ಪ್ಲೇಟಿಗೆ.

   ನೀರು ದೋಸೆಯ ಮೂಲ ಕರಾವಳಿಯ ತುಳು ಭಾಷಾ ಪ್ರದೇಶ ಅಂದರೆ ಉಡುಪಿ ಮೂಲವೇ ಆಗಿದೆ.

  ದಕ್ಷಿಣ ಬಾರತದಲ್ಲಿ ಉಡುಪಿ ದೋಸೆಯ ತವರು ಮನೆ ಎ೦ದು ಇತಿಹಾಸಕಾರ ಪಿ. ತಂಕಪ್ಪನ್ ನಾಯರ್ ನಮೂದಿಸಿದ್ದಾರೆ.

   ಒಂದನೆ ಶತಮಾನದಲ್ಲಿ ಪ್ರಾಚೀನ ತಮಿಳು ದೇಶದಲ್ಲಿ ದೋಸೆ ಬಳಕೆಯಲ್ಲಿತ್ತು ಎಂದು ಆಹಾರ ಇತಿಹಾಸಕಾರ ಟಿ.ಕೆ.ಆಚಾರ್ಯರು ಉಲ್ಲೇಖಿಸಿದ್ದಾರೆ.

   8ನೇ ಶತಮಾನದಲ್ಲಿ ಇಂದಿನ ತಮಿಳುನಾಡಿನ ಸಾಹಿತ್ಯದಲ್ಲಿ ದೋಸೆಯ ಲಿಖಿತ ಉಲ್ಲೇಖ ಇದೆ ಅಂತೆ.

 ಕನಾಟಕದಿಂದ ಆಳಿದ ಮೂರನೇ ಸೋಮೇಶ್ವರರವರು ಸಂಗ್ರಹಿಸಿದ 12 ನೇ ಶತಮಾನದ ಸಂಸ್ಕೃತ ವಿಶ್ವಕೋಶ #ಮನಸೋಲ್ಲಾಸ ಗ್ರಂಥದಲ್ಲಿ ದೋಸೆಯ ಪಾಕ ವಿದಾನವಿದೆ.

  ಸ್ಥಳೀಯ ತಮಿಳು ಸಂಸ್ಕೃತಿ ಭಾಗವಾಗಿ ದೋಸೆ ಶ್ರೀಲಂಕಾ ತಲುಪಿದೆ.

   ಈಗ ವಿಶ್ವದಾದ್ಯಂತ ಭಾರತೀಯ ದೋಸೆ ಜನಮನ್ನಣೆ ಪಡೆದಿದೆ.

     ಶಿವಮೊಗ್ಗ -ಜೋಗ್ ಪಾಲ್ಸ್ -ಸಿಗಂದೂರು ಮಾಗ೯ದಲ್ಲಿ ಪ್ರಯಾಣಿಸುವಾಗ ಆನಂದಪುರಂ ಯಡೇಹಳ್ಳಿ ವೃತ್ತದಲ್ಲಿರುವ #ಮಲ್ಲಿಕಾ_ವೆಜ್ ಗೆ ಬೇಟಿ ನೀಡಿ ಲೊಕೇಶನ್ ಕಾಮೆಂಟ್ ನಲ್ಲಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...