#ಡಾ_ತಿರುಮಲೈ_ಮದುರನಾಥ_ಕೇಶವ
#ಇವರ_71ನೇ_ಹುಟ್ಟು_ಹಬ್ಬದ_ಶುಭಹಾರೈಕೆಗಳು
#ತಾಳಗುಂದ_ಶಾಸನ_ಸಂಶೋಧನೆ_ಮಾಡಿದವರು
#ಹಲ್ಮಿಡಿ_ಶಾಸನಕ್ಕಿಂತ_80_ವರ್ಷ_ಹಳೆಯ_ಶಾಸನ.
#ಶಿವಮೊಗ್ಗ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ಶಿರಾಳಕೊಪ್ಪದಿಂದ_11_ಕಿಲೋಮೀಟರ್_ದೂರದಲ್ಲಿದೆ
#Kannadasculpture #Talagunda #Halmidi #Researcher #DrTMKeshava
#Shivamogga #Shikaripura
ಡಾಕ್ಟರ್ ತಿರುಮಲೈ ಮದುರನಾಥ ಕೇಶವರವರ 71 ನೇ ಹುಟ್ಟು ಹಬ್ಬದ ಶುಭಾಶಯಗಳು.
ಅವರ ಜನ್ಮ ದಿನಾಂಕ 19 -ಸೆಪ್ಟೆಂಬರ್-1954.
ಬೆಂಗಳೂರು ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞರಾಗಿದ್ದವರು.
ಈಗ ನಿವೃತ್ತರಾಗಿ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸಿದ್ದಾರೆ.
ಇವರೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದದ ಸಿಂಹ ಕಟಾಂಜನದ ಕನ್ನಡ ಶಾಸನ ಉತ್ಕನದಲ್ಲಿ ಸಂಶೋಧನೆ ಮಾಡಿದವರು.
ಈ ಶಾಸನ ಹಲ್ಮಿಡಿಯ ಶಾಸನಕ್ಕಿಂತ 80 ವರ್ಷ ಹಿಂದಿನದ್ದು.
ಅಂದರೆ ಕನ್ನಡದ ಮೊದಲ ಶಾಸನ ಎನ್ನಿಸಿಕೊಂಡ ಹಲ್ಮಿಡಿ ಶಾಸನಕ್ಕಿಂತ ಹಿಂದಿನದ್ದು.
ತಾಳಗುಂದ ಶಾಸನ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಪಠ್ಯವಾಗಿದೆ.
ಇತಿಹಾಸ ದರ್ಪಣ ಪುಸ್ತಕದಲ್ಲಿ ತಾಳಗುಂದ ಶಾಸನದ ವಿವರವಾದ ಲೇಖನ ಪ್ರಕಟವಾಗಿದೆ.
ಕೇಂದ್ರ ಪುರಾತತ್ವ ಇಲಾಖೆ "Early kannada inscription found" ಎಂದು ಉಲ್ಲೇಖಿಸಿದ್ದಾರೆ.
ಕದಂಬರ ರಾಜ ಮಯೂರ ವರ್ಮನ ಕುಲದೇವರು ತಾಳಗುಂದದ ಪ್ರಣವೇಶ್ವರ.
ಪ್ರಣವೇಶ್ವರ ದೇವಾಲಯದ ದ್ವಾರ ಪುನರ್ ನಿರ್ಮಾಣ ಮಾಡಿದ ಕದಂಭ ರಾಜ ಕಾಕುಸ್ತ ವರ್ಮ ನೆಡಿಸಿದ ಸ್ತಂಭ ಶಾಸನ ಕಾಲದಲ್ಲಿ ಈ ಕಟಾಂಜನ ಶಾಸನಗಳು ಈ ದೇವಾಲಯ ನವೀಕರಣ ಮಾಡುವಾಗ ಮಣ್ಣಿನಲ್ಲಿ ಹೂತು ಹೋದವುಗಳು.
ಈ ಕನ್ನಡದ ಕ್ರಿ.ಶ. 380 ರ ಕಾಲಮಾನದ ಕಟಾಂಜನ ಶಾಸನ ಬಳ್ಳಿಗಾವಿಯ ವಸ್ತು ಸಂಗ್ರಹಾಲಯಕ್ಕೆ ತೆಗೆದು ಕೊಂಡು ಹೋಗಿ ಸಂರಕ್ಷಣೆ ಮಾಡುವ ಕೆಲಸ ಅನೇಕ ಕಾರಣದಿಂದ ವಿಳಂಬವಾಗಿದೆ ಮತ್ತು ಸ್ಥಳೀಯರು ಅದು ಇಲ್ಲೇ ಇರಬೇಕೆಂದು ಕೂಡ ಬಯಸಿದ್ದಾರೆ.
ಆ ಕಾರಣದಿಂದ ಮತ್ತು ಈ ಅಪೂರ್ವ ಶಾಸನ ಹಾಳಾಗಬಾರದೆಂದು ತಾಳಗುಂದದ ಪ್ರಣವೇಶ್ವರ ದೇವಾಲಯದ ಸ್ಥಂಭ ಶಾಸನದ ಎದರು ಅದು ಉತ್ಕನನ ಮಾಡಿದ ಸ್ಥಳದಲ್ಲೇ ಪುನಃ ಮಣ್ಣಿನಲ್ಲಿಯೇ ಮುಚ್ಚಿಟ್ಟಿದ್ದಾರೆ.
ಈ ವರ್ಷದ 2005ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೌರವವನ್ನು ಈ ಕನ್ನಡದ ಅಮೋಘ ಸಂಶೋಧನೆ ಮಾಡಿದ ಡಾ. ಟಿ.ಎಂ. ಕೇಶವರಿಗೆ ನೀಡ ಬೇಕೆಂದು ಸಮಸ್ತ ಕನ್ನಡಿಗರ ಪರವಾಗಿ ಕರ್ನಾಟಕ ಸರ್ಕಾರಕ್ಕೆ ಒತ್ತಾಯಿಸೋಣ.
Comments
Post a Comment