#ಆನಂದಪುರಂ
#ಈ_ಹೆಸರಿಗಿದೆ_ನಾಲ್ಕು_ಶತಮಾನದ_ಇತಿಹಾಸ
#ಪ್ರತಿ_ಊರಿನ_ಹೆಸರಿಗೂ_ಇತಿಹಾಸ_ಇದೆ.
#ಆನಂದಪುರಂ_ಅಥವ_ಆನಂದಪುರ_ಇದರಲ್ಲಿ_ಸರಿ_ಯಾವುದು?
#ಆನಂದಪುರಂ_ಸರಿ
#ಆನಂದಪುರ_ಅಪಭ್ರಂಶ
#ಗೆಜೆಟಿಯರ್_ರೈಲ್ವೆ_ಮತ್ತು_ಅಂಚೆ_ಇಲಾಖೆಯಲ್ಲಿ_ಆನಂದಪುರಂ
#ಪುರಂ_ಪದ_ಮೂಲ_ಹಿಂದಿ_ಮತ್ತು_ಸಂಸ್ಕೃತ_ಮೂಲ
#ಪುರಂ_ಎಂದರೆ_ನಗರ_ಪ್ರದೇಶ
#ಆನಂದಪುರಂ_ಮೂಲ_ಹೆಸರು_ಯಡೇಹಳ್ಳಿ_ಕೋಟೆ.
#Anandapuram #Keladi #Venkatappanayaka #Champakasarassu #Sagar #Shivamogga #Yadehalli #Badarinarayanaiyangar #Karnataka
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೋಬಳಿ ಕೇಂದ್ರ ಆನಂದಪುರಂ.
#ಆನಂದಪುರಂ ಎಂಬ ಸ್ಟಾತಂತ್ರ್ಯ ಪೂರ್ವದ ಬೋರ್ಡ ಆನಂದಪುರಂ ಕನಕಮ್ಮಾಳ್ ಆಸ್ಪತ್ರೆ ಎದುರು ಇತ್ತು.
18ನೇ ಶತಮಾನದಲ್ಲಿ ಅನೇಕ ದಶಕಗಳ ಕಾಲ ಆನಂದಪುರಂ ತಾಲ್ಲೂಕು ಕೇಂದ್ರ ಆಗಿತ್ತು.
ಸಾಗರ ತಾಲೂಕಿನ ಮೊದಲ ನ್ಯಾಯಾಲಯ ಪ್ರಾರಂಭ ಆಗಿದ್ದು ಆನಂದಪುರಂನಲ್ಲಿ.
ಆನಂದಪುರಂ ರೈಲ್ವೆ ನಿಲ್ದಾಣದ ಬೋರ್ಡ್ ಕೂಡ ಇವತ್ತಿಗೆ ಆನಂದಪುರಂ ರೈಲ್ವೆ ನಿಲ್ದಾಣ ಎಂದೇ ಇದೆ.
ಆನಂದಪುರಂ ಅಂಚೆ ಕೇಂದ್ರ ಕೂಡ ಆನಂದಪುರಂ 577 412 ಆಗಿದೆ.
ಪುರಂ ಎಂದರೆ ವಿಶೇಷವಾಗಿ ರಾಜರ ಜೀವನ ಶೈಲಿ ಪ್ರತಿಬಿಂಬಿಸುತ್ತದೆ ಮತ್ತು ಬೌದ್ಧ, ಪಾಲಿ, ಹಿಂದೂ, ಸಂಸ್ಕೃತ, ಜೈನ, ಪ್ರಾಕೃತ ಪ್ರಾಚೀನ ಭಾರತದ ಇತಿಹಾಸ.
ಮರಾಠಿ, ಹಿಂದಿ ಮತ್ತು ತಮಿಳಿನಲ್ಲಿ ಪುರಂ ಎಂದರೆ ನಗರ ಪ್ರದೇಶ ಎಂದು ಅರ್ಥವಿದೆ.
ಕೇರಳದ ಮಲಪುರಂ, ಆಂಧ್ರಪ್ರದೇಶದಲ್ಲಿ ಅನಂತಪುರಂ, ತಮಿಳುನಾಡಿನ ಕಾಂಚಿಪುರಂ, ದೆಹಲಿಯ ಆರ್.ಕೆ.ಪುರಂಗಳನ್ನ ಉದಾಹರಿಸ ಬಹುದು.
ಹಿಂದಿ ಮತ್ತು ಸಂಸ್ಕೃತದಲ್ಲಿ ಪುರಂ ಹಳ್ಳಿ - ಕೋಟೆ-ಜನವಸತಿಗೆ ಇರುವ ಹೆಸರು.
ಪುರ ಅಥವ ಪುರಂ ಭಾರತದ ನಗರಗಳಿಗೆ ಸಾಮಾನ್ಯ ಪ್ರತ್ಯಯವಾಗಿದೆ ಆದರೆ ಆನಂದಪುರಂನ ವಾಸಿಗಳು #ಆನಂದಪುರಂ ಎನ್ನುವುದನ್ನ ಬಳಕೆ ಮಾಡದೆ ಕೇವಲ ಆನಂದಪುರ ಎಂದೇ ಉಲ್ಲೇಖಿಸುವುದು ಊರಿನ ಹೆಸರಿನ ಅಪಭ್ರಂಶ ಆಗಿದೆ.
ಇನ್ನೂ ಕೆಲವರು ಮುಂದುವರಿದು ತಮಿಳು ಭಾಷಾ ಮೂಲದ ನಮ್ಮ ಊರಿನ ಮಾಜಿ ಮಂತ್ರಿಗಳು ಜಮೀನ್ದಾರರಾದ ಬದರಿನಾರಾಯಣ ಅಯ್ಯಂಗಾರರ ಕುಟುಂಬ ತಮ್ಮ ಮಾತೃ ಬಾಷೆ ತಮಿಳು ಅಭಿಮಾನದಿಂದ ಆನಂದಪುರವನ್ನು ಆನಂದಪುರಂ ಎಂದು ಬದಲಿಸಿದರು ಎಂಬ ವಿತಂಡವಾದ ಮಾಡುತ್ತಿದ್ದಾರೆ.
ಆದರೆ ಬದರಿ ನಾರಾಯಣ ಅಯ್ಯಂಗಾರರ ತಂದೆ ರಾಮಕೃಷ್ಣ ಅಯ್ಯಂಗಾರ್ ತಂದೆ ಇಲ್ಲಿಗೆ ಬಂದು ನೆಲೆಸುವಾಗಲೇ ನಮ್ಮ ಊರು ಆನಂದಪುರಂ ಎಂದೇ ಹೆಸರಾಗಿತ್ತು.
ಇವರ ಕುಟುಂಬದ ಎಲ್ಲರ ಹೆಸರಿನ ಮೊದಲಿನ ಇನ್ಷಿಯಲ್ A ಅಂದರೆ ಆನಂದಪುರಂ ಎಂದೇ ಆಗಿದ್ದು ಹೆಮ್ಮೆಯ ವಿಷಯ.
ನಮ್ಮ ಊರಿನ ಬದರಿ ನಾರಾಯಣ ಅಯ್ಯಂಗಾರ್ ಅವರು ಮುಖ್ಯಮಂತ್ರಿ ದೇವರಾಜ ಅರಸ್ ಅವರ ಸಂಪುಟದಲ್ಲಿ ವಿದ್ಯಾಮಂತ್ರಿ ಆಗಿದ್ದಾಗಲೇ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡುವಲ್ಲಿ ಪ್ರಮುಖ ಕಾರಣ ಕರ್ತರು ಎಂಬುದು ನೆನಪಿಸಿ ಕೊಳ್ಳಬೇಕು.
ಆದ್ದರಿಂದ ಆನಂದಪುರಂ ಎಂಬ ನಮ್ಮ ಊರಿನ ಅಸಲಿ ಹೆಸರಿಗೆ ಇತಿಹಾಸದ ನಂಟಿದೆ ಅದನ್ನು ಯಾರೂ ಬದಲಿಸಿಲ್ಲ ನಾವೂ ಅದನ್ನ ಬದಲಿಸಬಾರದು ಊರಿನ ಹೆಸರು ಸರಿಯಾಗಿ ಬರೆಯುವ ಮತ್ತು ಉಚ್ಚರಿಸುವ ಜನಜಾಗೃತಿ ಕೆಲಸ ಆಗಬೇಕಾಗಿದೆ ಅದನ್ನು ಅಪಭ್ರಂಶ ಮಾಡುವುದು ಸರಿಯಲ್ಲ.
#ಆನಂದಪುರಂ_ಹೆಸರಿಗಿದೆ_400_ವರ್ಷದ_ಇತಿಹಾಸ...
ಕೆಳದಿ ರಾಜ ವೆಂಕಟಪ್ಪ ನಾಯಕರು ರಾಣಿ ಚಂಪಕಾಳ ನೆನಪಿಗಾಗಿಯೇ #ಯಡೇಹಳ್ಳಿ_ಕೋಟೆ ಎಂಬ ಪ್ರದೇಶವನ್ನು #ಆನಂದಪುರಂ ಎಂದೇ ನಾಮಕರಣ ಮಾಡುತ್ತಾರೆ.
ಇದೆಲ್ಲ ಅಂದಾಜು ಕಾಲ ಮಾನ 1624-25 ಎಂದು ಪರಿಬಾವಿಸ ಬಹುದಾಗಿದ್ದು ಅಂದರೆ 2025 ಕ್ಕೆ ಚಂಪಕ ಸರಸ್ಸು ಸ್ಮಾರಕ ನಿರ್ಮಾಣವಾಗಿ 400 ವಷಾ೯ಚರಣೆಯ ದಿನವಾಗಲಿದೆ ಹಾಗೆಯೇ ಆನಂದಪುರಂ ಎಂದು ನಾಮಕರಣಕ್ಕೂ 400 ವರ್ಷ ಆಗಲಿದೆ.
ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕರಾಣಿಯ ದುರಂತ ಪ್ರೇಮ ಕಥೆ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ " #ಬೆಸ್ತರರಾಣಿ_ಚಂಪಕ ಎಂಬ ನಾನು ಬರೆದ ಕಾದಂಬರಿಯಲ್ಲಿ ಹೆಚ್ಚಿನ ವಿವರಗಳಿದೆ.
400 ವರ್ಷದ ಹಿಂದೆ ಈ ಪ್ರದೇಶದ ಹೆಸರು #ಯಡೇಹಳ್ಳಿ_ಕೋಟೆ ಎಂದೇ ಇತ್ತು, ಕೆಳದಿ ಇತಿಹಾಸದಲ್ಲಿ ಕೆಳದಿ ಅರಸರು ಯಡೇಹಳ್ಳಿ ಕೋಟೆ ಅಕ್ರಮಿಸಿದ್ದ ಹರತಾಳಿನ ಕಿರಾತಕರ ಮೇಲೆ ಯುದ್ಧ ಮಾಡಿ ಯಡೇಹಳ್ಳಿ ಕೋಟೆ ಬಿಡಿಸಿಕೊಳ್ಳುತ್ತಾರೆಂದು ಇದೆ ಮತ್ತು ಆನಂದಪುರಂನ ರಂಗನಾಥ ದೇವರನ್ನು ಯಡೇಹಳ್ಳಿ ತಿರುಮಲ ಎಂದು ಕರೆದಿರುವ ಉದಾಹರಣೆ ಇದೆ.
ಕೆಳದಿ ರಾಜ ವೆಂಕಟಪ್ಪ ನಾಯಕರು ಯಡೇಹಳ್ಳಿ ಕೋಟೆಯಿಂದ ಸೂಯೋ೯ದಯಕ್ಕೆ ಮೊದಲೆ ರಾಜ ಮಾರ್ಗದಲ್ಲಿ ಕವಲೇದುರ್ಗ ಮತ್ತು ಬಿದನೂರು ಕೋಟೆಗೆ ಹೋಗುವಾಗ ಪೇಟೆಯ ಗಂಗಾ ಮಠದ ಗುತ್ಯಮ್ಮ ದೇವಸ್ಥಾನದ ಎದರು ಮನೆಯ ಅಂಗಳದಲ್ಲಿ ಪ್ರತಿನಿತ್ಯ ಆಕರ್ಷಕವಾದ ಸುಂದರವಾದ ಬೃಹತ್ ರಂಗೋಲಿಯಿಂದ ಗಮನ ಸೆಳೆಯುವ ಬೆಸ್ತರ ಕನ್ಯೆ ಚಂಪಕಳ ಮೇಲೆ ಮನಸೋತು ವಿವಾಹವಾಗಿ ಆನಂದಪುರಂನ ಕೋಟೆಯ ಅರಮನೆಯಲ್ಲಿಡುತ್ತಾರೆ ಇದು ಅವರ ಕುಟುಂಬದಲ್ಲಿ ಕೋಲಾಹಲವಾಗಿ ಮಹಾರಾಣಿ ಭದ್ರಮ್ಮಾಜಿ ಊಟ ಆಹಾರ ತ್ಯಜಿಸಿ ಕಾಯಿಲೆಯಿಂದ ದೇಹಾಂತ್ಯವಾಗುತ್ತದೆ ಇದರಿಂದ ರಾಜ ವೆಂಕಟಪ್ಪ ನಾಯಕರಿಗೆ ಕೆಟ್ಟ ಹೆಸರು ಉಂಟಾಗುತ್ತದೆ ಇದಕ್ಕೆಲ್ಲ ಅನ್ಯ ಜಾತಿಯ ಚಂಪಕಳ ಮದುವೆ ಆದದ್ದೇ ಕಾರಣ ಎಂದು ಪ್ರಜೆಗಳು ಭಾವಿಸುತ್ತಾರೆ, ಇದರಿಂದ ನೊಂದ ಚಂಪಕ ಹಾಲಿನೊಂದಿಗೆ ವಜ್ರದ ಪುಡಿ ಬೆರೆಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ರಾಜ ವೆಂಕಟಪ್ಪ ನಾಯಕ ಚಂಪಕಳ ಸ್ಮರಣಾರ್ಥ ಸುಂದರ ಕೊಳ ಅದರ ಮಧ್ಯೆ ಚಂಪಕ ನಿತ್ಯ ಪೂಜಿಸುತ್ತಿದ್ದ ಶಿವಲಿಂಗ ಸ್ಥಾಪಿಸಿ ಅಲ್ಲಿಗೆ ಹೋಗಲು ಕಲ್ಲಿನ ಸಂಕ ನಿರ್ಮಿಸುತ್ತಾರೆ ಅದರ ಎದರು ಸುಂದರ ಕಲ್ಲಿನ ಎರೆಡು ಆನೆಯ ಮಧ್ಯದ ಪಾವಟಿಗೆ ದಾಟಿದರೆ ಸುತ್ತು ಪಗಾರದ ಮಧ್ಯ ಚಂಪಕಾಳ ಸಮಾದಿ ಇದೆ.
ಆದ್ದರಿಂದ ಆನಂದಪುರಂ ಎಂಬ ನಮ್ಮ ಊರಿನ ಅಸಲಿ ಹೆಸರಿಗೆ ಇತಿಹಾಸದ ನಂಟಿದೆ ಅದನ್ನು ಯಾರೂ ಬದಲಿಸಿಲ್ಲ ನಾವೂ ಅದನ್ನ ತಪ್ಪಾಗಿ ಬರೆಯುವುದು ಅಥವ ಉಚ್ಚರಿಸುವುದು ಸರಿಯಲ್ಲ.
ನಮ್ಮೂರು ಆನಂದಪುರಂ ಲೊಕೇಶನ್ ಕಾಮೆಂಟ್ ನಲ್ಲಿದೆ ನೋಡಿ
Comments
Post a Comment