Skip to main content

3483. ಕಾಡಾನೆಗಳು

#ಮಲೆನಾಡಿನಲ್ಲಿ_ಕಾಡಾನೆಗಳು_ಲಗ್ಗೆ_ಹಾಕುತ್ತಿರುವುದೇಕೆ?

#ಶತಮಾನಗಳ_ನಂತರ_ಕಾಡಾನೆಗಳು.

#ಕೊಪ್ಪ_ಶೃಂಗೇರಿಯಲ್ಲಿ_ಪ್ರತ್ಯಕ್ಷವಾದ_ಜೋಡಿ_ಕಾಡಾನೆ.

#ಪ್ರತಿ_ವರ್ಷ_ಆಗುಂಬೆಗೆ_ಬರುವ_ಒಂಟೆ_ಕಾಡಾನೆ.

#ಆನಂದಪುರಂ_ಭಾಗಕ್ಕೆ_ಪ್ರತಿ_ವರ್ಷ_ಬರುತ್ತಿರುವ_ಕಾಡಾನೆಗಳು

#ವಿಜಯನಗರ_ಸಾಮ್ರಾಜ್ಯದ_ಅರಸು_ಪ್ರೌಡ_ಪ್ರತಾಪರಾಯನಿಗೆ

#ಗಜಬೇಂಟೆಗಾರ_ಎಂಬ_ಬಿರುದು_ಬರಲು_ಕಾರಣ

#ಹದಿನಾಲ್ಕನೇ_ಶತಮಾನದಲ್ಲಿ_ಅವರು_ಆರಗದ_ದಟ್ಟ_ಅರಣ್ಯದಲ್ಲಿ

#ಕಾಡಾನೆ_ಹಿಡಿದು_ಪಳಗಿಸಿ_ತಮ್ಮ_ಸೇನೆಗೆ_ಸೇರಿಸುತ್ತಿದ್ದರು.


#wildlifeplanet #agumbe #thirthahalli #ShivamoggaNews #wildelephants

 ಶಿವಮೊಗ್ಗ ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ಇವತ್ತಿಗೂ ಕಾಡಾನೆಗಳು ಮತ್ತು ಅವುಗಳ ಕಾರಿಡಾರ್ ಇದೆ.
 
   ಶರಾವತಿ ಅಭಯಾರಣ್ಯದಲ್ಲಿ ಶರಾವತಿ ನದಿಗೆ ಆಣೆಕಟ್ಟು ಕಟ್ಟಿದ ನಂತರ ಕಾಡಾನೆಗಳು ಈ ಭಾಗದಲ್ಲಿ ಇರಲಿಲ್ಲ.

   ಆದರೆ ಒಂದು ಒಂಟಿ ಸಲಗ ತೀರ್ಥಹಳ್ಳಿಯ ಆಗು೦ಬೆ ಭಾಗದಲ್ಲಿ ಪ್ರತಿ ವರ್ಷ ನಿಗದಿತ ಸಮಯದಲ್ಲಿ ಜನವಸತಿ ಕೇಂದ್ರಗಳಲ್ಲಿ ಕಾಣಿಸುಕೊಳ್ಳುತ್ತಾ ಆ ಭಾಗದಲ್ಲಿನ ಜನರಲ್ಲಿ ಭಯ - ಆತಂಕ ಸೃಷ್ಟಿಸಿದೆ.

   ಇದೇ ಆನೆ ಕೆಲವು ವರ್ಷದ ಹಿಂದೆ ಸಾಗರ ತಾಲ್ಲೂಕಿನ ಆವಿನಳ್ಳಿ ಸಮೀಪದ #ಗಿಣಿವಾರ ಎಂಬ ಗ್ರಾಮದಲ್ಲಿ ಈ ಆನೆ ಕಾಣಿಸಿಕೊಂಡಾಗ ಗ್ರಾಮಸ್ಥರೆಲ್ಲ ಒಂದು ರಾತ್ರಿ  ಕಾಡಾನೆಯ ಉಪಟಳ ನಿವಾರಿಸಲು ಸಭೆ ಆಯೋಜಿಸಿದ್ದರು.

   ಕಾಡಾನೆ ಉಪಟಳ ಪರಿಹಾರದ ಸಭೆಗೆ ಭಾಗವಹಿಸಲು ಕೃಷಿ ಕಾರ್ಮಿಕ ಮಹಿಳೆಯೋರ್ವರು ರಾತ್ರಿಯ ಅಡುಗೆ ಮಾಡಿ ಇಟ್ಟು ಮನೆಯಿಂದ ಹೊರಬಂದಾಗ ಈ ಕಾಡಾನೆ ಆ ಮಹಿಳೆಯನ್ನು ಹತ್ಯೆ ಮಾಡಿತ್ತು.

  ಸಾಗರ ಹೊಸನಗರ ತಾಲ್ಲೂಕಿನ ಜನರಿಗೆ ಇದು ಅಘಾತಕಾರಿ ಸುದ್ದಿ ಏಕೆಂದರೆ ಕಳೆದ ನೂರು ವರ್ಷದಲ್ಲಿ ಈ ಭಾಗದಲ್ಲಿ ಕಾಡಾನೆ  ಸಂಚಾರ ಅಥವ ಹಾವಳಿ ಅವರಾರಿಗೂ ಗೊತ್ತಿಲ್ಲದವರು.

  1970 ರಲ್ಲಿ ಅರಸಾಳು ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಿನ ಆನೆ ಒಂದನ್ನು ಹಿಡಿಯಲು ಸರ್ಕಾರ ಆ ಕಾಲದ #ಆನೆ_ಖೆಡ್ಡಾ ನಿಮಿ೯ಸಿ ಕಾಡಾನೆ ಹಿಡಿಯಲು ಯಶಸ್ವಿ ಆದರೂ ಕಾಡಾನೆ ಬದುಕುಳಿಯಲಿಲ್ಲ.

  ಈಗೆಲ್ಲ ಈ ರೀತಿ ಜನರಿಗೆ ಉಪಟಳ ನೀಡುವ ಕಾಡಾನೆ ಹಿಡಿಯಲು ವ್ಯೆಜ್ಞಾನಿಕವಾದ ದಾರಿಗಳಿದೆ.

  ಗಿಣಿವಾರದ ನರಹಂತಕ ಮಾತ್ರ ಸರ್ಕಾರದ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ವೀರಪ್ಪನಂತೆ ಒಂಟಿಯಾಗಿ ಮಲೆನಾಡಿನಲ್ಲಿ ಆತಂಕ ಸೃಷ್ಟಿಸುತ್ತಿದೆ.

   ಕೊಡಚಾದ್ರಿಯ ಮೂಲ ಮೂಕಾಂಬಿಕ ದೇವಾಲಯದ ಅವರಣಕ್ಕೂ ಒಮ್ಮೆ ದಿಡೀರನೆ ನುಗ್ಗಿತ್ತು ಈ ಕಾಡಾನೆ.

  ಮೊದಲೆಲ್ಲ ಜನರ ಕಣ್ಣಿಗೆ ಅಪರೂಪವಾಗಿ ಕಾಣಿಸುತ್ತಿದ್ದ ಈ ಗಿಣಿವಾರದ ನರ ಹಂತಕ ಈಗ ಪ್ರತಿ ವರ್ಷ ಆಗುಂಬೆಯ ಸಮೀಪದಲ್ಲಿ ರಸ್ತೆಗಳಲ್ಲಿ ಸಂಚರಿಸಿ ಆಭಾಗದ ಜನರಲ್ಲಿ ಆತಂಕ ಉಂಟು ಮಾಡುತ್ತಿದೆ 

   ಅದನ್ನು ಸರ್ಕಾರಗಳು ಸೆರೆ ಹಿಡಿಯಲಾಗದಿದ್ದರು ಅದು ಜನರ ಸೆಲ್ ಫೋನ್ ನಲ್ಲಿ ಸೆರೆ ಆಗಿದ್ದಾನೆ.

 ದಶಕಗಳಿಂದ ಈ ಕಾಡಾನೆ ಯಾಕೆ ಒಂಟಿ ಆಗಿ ಸಂಚರಿಸುತ್ತಿದೆ? ಈ ನಿಗೂಡ ಆನೆಯ ಮೂಲ ಎಲ್ಲಿ? ಈ ಪ್ರಶ್ನೆಗೆ  ಉತ್ತರ ಇನ್ನೂ ಸಿಕ್ಕಿಲ್ಲ.

    ಕಳೆದ 15 ದಿನದ ಹಿಂದೆ ಜೋಡಿ ಕಾಡಾನೆಗಳು ಕೊಪ್ಪ ಮತ್ತು ಶೃಂಗೇರಿ ಭಾಗದಲ್ಲಿ ಸಂಚರಿಸುತ್ತಿದೆ.

   ಪ್ರತಿ ವರ್ಷ ಡಿಸೆಂಬರ್ ಜನವರಿ ತಿಂಗಳಲ್ಲಿ ಐದಾರು ಕಾಡಾನೆಗಳಿರುವ ಆನೆ ತಂಡ ಸಾಗರ ತಾಲೂಕಿನ ಆನಂದಪುರ0 ಭಾಗದಲ್ಲಿ ಸಂಚರಿಸುತ್ತದೆ.

   14ನೇ ಶತಮಾನದಲ್ಲಿ ಈ ಪ್ರದೇಶ ದಟ್ಟಾರಣ್ಯವಾಗಿದ್ದು ಇಲ್ಲಿ ಕಾಡಾನೆಗಳು ಹೇರಳವಾಗಿತ್ತು ಎನ್ನುವುದಕ್ಕೆ ಶಾಸನ ಒಂದು ಇಲ್ಲಿ ಉದಾಹರಿಸ ಬಹುದಾಗಿದೆ.

   ವಿಜಯನಗರದ ಅರಸ ಪ್ರೌಡ ಪ್ರತಾಪರಾಯ ಆರಗದ ದಟ್ಟಾರಣ್ಯದಲ್ಲಿ ಕಾಡಾನೆಗಳನ್ನು ಹಿಡಿದು ಪಳಗಿಸಿ ತನ್ನ ಸೇನೆಗೆ ಸೇರಿಸುತ್ತಿದ್ದರಿಂದ ಅವನಿಗೆ #ಗಜಬೇಂಟೆಗಾರ ಎಂಬ ಬಿರುದು ಬಂದಿತ್ತು.

   ವಿಜಯನಗರ ಸಾಮ್ರಾಜ್ಯದ ಅರಸು ಪ್ರೌಡ ಪ್ರತಾಪರಾಯ ಆಡಳಿತ ಅವಧಿ 1422-1446.

    ಬಹುಶಃ ಆನೆಗಳು ಆ ಕಾರಣದಿಂದ ಈಗ ಈ ಪ್ರದೇಶಗಳಿಗೆ ಬರುತ್ತಿದೆಯಾ?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...