#ಮಲೆನಾಡಿನಲ್ಲಿ_ಕಾಡಾನೆಗಳು_ಲಗ್ಗೆ_ಹಾಕುತ್ತಿರುವುದೇಕೆ?
#ಶತಮಾನಗಳ_ನಂತರ_ಕಾಡಾನೆಗಳು.
#ಕೊಪ್ಪ_ಶೃಂಗೇರಿಯಲ್ಲಿ_ಪ್ರತ್ಯಕ್ಷವಾದ_ಜೋಡಿ_ಕಾಡಾನೆ.
#ಪ್ರತಿ_ವರ್ಷ_ಆಗುಂಬೆಗೆ_ಬರುವ_ಒಂಟೆ_ಕಾಡಾನೆ.
#ಆನಂದಪುರಂ_ಭಾಗಕ್ಕೆ_ಪ್ರತಿ_ವರ್ಷ_ಬರುತ್ತಿರುವ_ಕಾಡಾನೆಗಳು
#ವಿಜಯನಗರ_ಸಾಮ್ರಾಜ್ಯದ_ಅರಸು_ಪ್ರೌಡ_ಪ್ರತಾಪರಾಯನಿಗೆ
#ಗಜಬೇಂಟೆಗಾರ_ಎಂಬ_ಬಿರುದು_ಬರಲು_ಕಾರಣ
#ಹದಿನಾಲ್ಕನೇ_ಶತಮಾನದಲ್ಲಿ_ಅವರು_ಆರಗದ_ದಟ್ಟ_ಅರಣ್ಯದಲ್ಲಿ
#ಕಾಡಾನೆ_ಹಿಡಿದು_ಪಳಗಿಸಿ_ತಮ್ಮ_ಸೇನೆಗೆ_ಸೇರಿಸುತ್ತಿದ್ದರು.
#wildlifeplanet #agumbe #thirthahalli #ShivamoggaNews #wildelephants
ಶಿವಮೊಗ್ಗ ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ಇವತ್ತಿಗೂ ಕಾಡಾನೆಗಳು ಮತ್ತು ಅವುಗಳ ಕಾರಿಡಾರ್ ಇದೆ.
ಶರಾವತಿ ಅಭಯಾರಣ್ಯದಲ್ಲಿ ಶರಾವತಿ ನದಿಗೆ ಆಣೆಕಟ್ಟು ಕಟ್ಟಿದ ನಂತರ ಕಾಡಾನೆಗಳು ಈ ಭಾಗದಲ್ಲಿ ಇರಲಿಲ್ಲ.
ಆದರೆ ಒಂದು ಒಂಟಿ ಸಲಗ ತೀರ್ಥಹಳ್ಳಿಯ ಆಗು೦ಬೆ ಭಾಗದಲ್ಲಿ ಪ್ರತಿ ವರ್ಷ ನಿಗದಿತ ಸಮಯದಲ್ಲಿ ಜನವಸತಿ ಕೇಂದ್ರಗಳಲ್ಲಿ ಕಾಣಿಸುಕೊಳ್ಳುತ್ತಾ ಆ ಭಾಗದಲ್ಲಿನ ಜನರಲ್ಲಿ ಭಯ - ಆತಂಕ ಸೃಷ್ಟಿಸಿದೆ.
ಇದೇ ಆನೆ ಕೆಲವು ವರ್ಷದ ಹಿಂದೆ ಸಾಗರ ತಾಲ್ಲೂಕಿನ ಆವಿನಳ್ಳಿ ಸಮೀಪದ #ಗಿಣಿವಾರ ಎಂಬ ಗ್ರಾಮದಲ್ಲಿ ಈ ಆನೆ ಕಾಣಿಸಿಕೊಂಡಾಗ ಗ್ರಾಮಸ್ಥರೆಲ್ಲ ಒಂದು ರಾತ್ರಿ ಕಾಡಾನೆಯ ಉಪಟಳ ನಿವಾರಿಸಲು ಸಭೆ ಆಯೋಜಿಸಿದ್ದರು.
ಕಾಡಾನೆ ಉಪಟಳ ಪರಿಹಾರದ ಸಭೆಗೆ ಭಾಗವಹಿಸಲು ಕೃಷಿ ಕಾರ್ಮಿಕ ಮಹಿಳೆಯೋರ್ವರು ರಾತ್ರಿಯ ಅಡುಗೆ ಮಾಡಿ ಇಟ್ಟು ಮನೆಯಿಂದ ಹೊರಬಂದಾಗ ಈ ಕಾಡಾನೆ ಆ ಮಹಿಳೆಯನ್ನು ಹತ್ಯೆ ಮಾಡಿತ್ತು.
ಸಾಗರ ಹೊಸನಗರ ತಾಲ್ಲೂಕಿನ ಜನರಿಗೆ ಇದು ಅಘಾತಕಾರಿ ಸುದ್ದಿ ಏಕೆಂದರೆ ಕಳೆದ ನೂರು ವರ್ಷದಲ್ಲಿ ಈ ಭಾಗದಲ್ಲಿ ಕಾಡಾನೆ ಸಂಚಾರ ಅಥವ ಹಾವಳಿ ಅವರಾರಿಗೂ ಗೊತ್ತಿಲ್ಲದವರು.
1970 ರಲ್ಲಿ ಅರಸಾಳು ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಿನ ಆನೆ ಒಂದನ್ನು ಹಿಡಿಯಲು ಸರ್ಕಾರ ಆ ಕಾಲದ #ಆನೆ_ಖೆಡ್ಡಾ ನಿಮಿ೯ಸಿ ಕಾಡಾನೆ ಹಿಡಿಯಲು ಯಶಸ್ವಿ ಆದರೂ ಕಾಡಾನೆ ಬದುಕುಳಿಯಲಿಲ್ಲ.
ಈಗೆಲ್ಲ ಈ ರೀತಿ ಜನರಿಗೆ ಉಪಟಳ ನೀಡುವ ಕಾಡಾನೆ ಹಿಡಿಯಲು ವ್ಯೆಜ್ಞಾನಿಕವಾದ ದಾರಿಗಳಿದೆ.
ಗಿಣಿವಾರದ ನರಹಂತಕ ಮಾತ್ರ ಸರ್ಕಾರದ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ವೀರಪ್ಪನಂತೆ ಒಂಟಿಯಾಗಿ ಮಲೆನಾಡಿನಲ್ಲಿ ಆತಂಕ ಸೃಷ್ಟಿಸುತ್ತಿದೆ.
ಕೊಡಚಾದ್ರಿಯ ಮೂಲ ಮೂಕಾಂಬಿಕ ದೇವಾಲಯದ ಅವರಣಕ್ಕೂ ಒಮ್ಮೆ ದಿಡೀರನೆ ನುಗ್ಗಿತ್ತು ಈ ಕಾಡಾನೆ.
ಮೊದಲೆಲ್ಲ ಜನರ ಕಣ್ಣಿಗೆ ಅಪರೂಪವಾಗಿ ಕಾಣಿಸುತ್ತಿದ್ದ ಈ ಗಿಣಿವಾರದ ನರ ಹಂತಕ ಈಗ ಪ್ರತಿ ವರ್ಷ ಆಗುಂಬೆಯ ಸಮೀಪದಲ್ಲಿ ರಸ್ತೆಗಳಲ್ಲಿ ಸಂಚರಿಸಿ ಆಭಾಗದ ಜನರಲ್ಲಿ ಆತಂಕ ಉಂಟು ಮಾಡುತ್ತಿದೆ
ಅದನ್ನು ಸರ್ಕಾರಗಳು ಸೆರೆ ಹಿಡಿಯಲಾಗದಿದ್ದರು ಅದು ಜನರ ಸೆಲ್ ಫೋನ್ ನಲ್ಲಿ ಸೆರೆ ಆಗಿದ್ದಾನೆ.
ದಶಕಗಳಿಂದ ಈ ಕಾಡಾನೆ ಯಾಕೆ ಒಂಟಿ ಆಗಿ ಸಂಚರಿಸುತ್ತಿದೆ? ಈ ನಿಗೂಡ ಆನೆಯ ಮೂಲ ಎಲ್ಲಿ? ಈ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ.
ಕಳೆದ 15 ದಿನದ ಹಿಂದೆ ಜೋಡಿ ಕಾಡಾನೆಗಳು ಕೊಪ್ಪ ಮತ್ತು ಶೃಂಗೇರಿ ಭಾಗದಲ್ಲಿ ಸಂಚರಿಸುತ್ತಿದೆ.
ಪ್ರತಿ ವರ್ಷ ಡಿಸೆಂಬರ್ ಜನವರಿ ತಿಂಗಳಲ್ಲಿ ಐದಾರು ಕಾಡಾನೆಗಳಿರುವ ಆನೆ ತಂಡ ಸಾಗರ ತಾಲೂಕಿನ ಆನಂದಪುರ0 ಭಾಗದಲ್ಲಿ ಸಂಚರಿಸುತ್ತದೆ.
14ನೇ ಶತಮಾನದಲ್ಲಿ ಈ ಪ್ರದೇಶ ದಟ್ಟಾರಣ್ಯವಾಗಿದ್ದು ಇಲ್ಲಿ ಕಾಡಾನೆಗಳು ಹೇರಳವಾಗಿತ್ತು ಎನ್ನುವುದಕ್ಕೆ ಶಾಸನ ಒಂದು ಇಲ್ಲಿ ಉದಾಹರಿಸ ಬಹುದಾಗಿದೆ.
ವಿಜಯನಗರದ ಅರಸ ಪ್ರೌಡ ಪ್ರತಾಪರಾಯ ಆರಗದ ದಟ್ಟಾರಣ್ಯದಲ್ಲಿ ಕಾಡಾನೆಗಳನ್ನು ಹಿಡಿದು ಪಳಗಿಸಿ ತನ್ನ ಸೇನೆಗೆ ಸೇರಿಸುತ್ತಿದ್ದರಿಂದ ಅವನಿಗೆ #ಗಜಬೇಂಟೆಗಾರ ಎಂಬ ಬಿರುದು ಬಂದಿತ್ತು.
ವಿಜಯನಗರ ಸಾಮ್ರಾಜ್ಯದ ಅರಸು ಪ್ರೌಡ ಪ್ರತಾಪರಾಯ ಆಡಳಿತ ಅವಧಿ 1422-1446.
ಬಹುಶಃ ಆನೆಗಳು ಆ ಕಾರಣದಿಂದ ಈಗ ಈ ಪ್ರದೇಶಗಳಿಗೆ ಬರುತ್ತಿದೆಯಾ?
Comments
Post a Comment