Skip to main content

3478. ಡಾ.ಟಿ. ಎಂ.ಕೇಶವ

#ಡಾಕ್ಟರ್_ಟಿ_ಎಂ_ಕೇಶವ

#ತಾಳಗುಂದ_ಕನ್ನಡ_ಶಾಸನ

#ಕನ್ನಡದ_ಮೊದಲ_ಶಾಸನ_ಸಂಶೋಧಿಸಿದವರು

#ಹಲ್ಮಿಡಿ_ಶಾಸನಕ್ಕಿಂತ_80_ವರ್ಷ_ಮೊದಲಿನದ್ದು.


#Kannada #Sculpture #Halmidi #Talagunda #TMKeshava #Pranaveshwara #Shikaripura #kadamba #Mayurasharma 

   ಸಾಮಾಜಿಕ ಜಾಲತಾಣದಿಂದ ವಿಶ್ವವೇ ಒಂದು ಹಳ್ಳಿ ಆಗಿದೆ ಏಕೆಂದರೆ ನನ್ನ ತಾಳಗುಂದ ಲೇಖನ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಬೆಂಗಳೂರು ವಲಯದ ನಿವೃತ್ತ ಅದೀಕ್ಷಕ ಪುರಾತತ್ವ ಶಾಸ್ತ್ರಜ್ಞರಾದ ಡಾ.ಟಿ.ಎಂ. ಕೇಶವರ ಸಂಪರ್ಕ ಆಯಿತು.

   ಇವರೇ 2013ರಲ್ಲಿ ಕನ್ನಡದ ಮೊದಲ ಶಾಸನ #ತಾಳಗುಂದ_ಕನ್ನಡ_ಶಾಸನ ಉತ್ಪನದ ಮೂಲಕ ಸಂಶೋಧಿಸಿದವರು.

    2017ರಲ್ಲಿ ಕೇಂದ್ರ ಪುರಾತತ್ವ ಇಲಾಖೆ #Early_Kannada_Inscription_found ಎಂದು ಘೋಷಿಸಿದೆ ಇದು ಒಂದು ಮಹತ್ವದ ಆರ್ಕಾಲಾಜಿಕ್ ಎವಿಡೆನ್ಸ್ ಆಗಿದೆ.

  ಡಾ.ಟಿ.ಎಂ. ಕೇಶವರ ಪೂರ್ಣ ಹೆಸರು ತಿರುಮಲೈ ಮದುರಾನಾಥ ಕೇಶವ ಇವರ ತಂದೆ ಮದುರನಾಥರು ಪೋಲಿಸ್ ಅಧಿಕಾರಿ ಆದವರು.

   ಈ ಶಾಸನವನ್ನು ( ತಾಳಗುಂದ ) ಕಂಡು ಹಿಡಿದಿದ್ದು ಕೇಂದ್ರ ಪುರಾತತ್ವ ಇಲಾಖೆಯ ಪರವಾಗಿ ಡಾ. ಟಿ.ಎಂ. ಕೇಶವರವರು.
   
    ಚಿತ್ರದಲ್ಲಿರುವುದು ತಾಳಗುಂದದ ದಕ್ಷಿಣ kataanja ನಾಡ ಶಾಸನ, ಉತ್ತರ ಕಟಾಂಜನ ದ ಶಾಸನದಲ್ಲಿ ಹಲಿಮಿ, ನಾಲ್ಕು, ಮಾಸೆ, ಕೊಟ್ಟರ್, ಇತ್ಯಾದಿ ಕನ್ನಡ ಪದಗಳಿವೆ.

   ಇದನ್ನು ಇತಿಹಾಸ ದರ್ಪಣ  ಪುಸ್ತಕ 31-32 (ಸಂಯುಕ್ತ ವಿಶೇಷ ಸಂಚಿಕೆ), ಮಾರ್ಚ್ -2017,ಪರಿಶೋಧ ಆವೃತಿಯಲ್ಲಿ ಟಿ. ಎಂ. ಕೇಶವ, ಎಸ್. ಕಾರ್ತಿಕ್ ಹೆಸರಿನಲ್ಲಿ 135-156 ಪುಟಗಳಲ್ಲಿ ಪ್ರಕಟಿಸಲಾಗಿದೆ.

   ಈ ಲೇಖನದಲ್ಲಿ ತಾಳಗುಂದ ಪ್ರಣವೇಶ್ವರ ದೇಗುಲದ ಆವರಣದಲ್ಲಿ ( ಶಾಸನ ಪ್ರಕಾರ ಮಹಾದೇವ ) ನಡೆಸಿದ  excavation ಬಗ್ಗೆಯೂ ಮಾಹಿತಿ ನೀಡಿದ್ದಾರೆ.

  ನಾಡಿನ ಭಾಷೆಯ ಶಾಸನೋಕ್ತ ಪ್ರಾಚೀನತೆಯ ಸಂಶೋಧಕರು ಶ್ರೀಯುತ ಕೇಶವ ತಿರುಮಲೈ ಅವರು.
 
   ಶ್ರೀಯುತರ ಅನನ್ಯವಾದ ಸಂಶೋಧನಾ ಅನುಭವ, ಅವಿರತ ಶ್ರಮ, ಭಾಷಾ ಪ್ರೇಮ, ಸೇವಾ ನಿಷ್ಠೆಯ ಪ್ರತಿಫಲವೇ ಹಲ್ಮಿಡಿ ಶಾಸನಕ್ಕಿಂತಲೂ ಪೂರ್ವದ ಕನ್ನಡದ  ಮೊದಲ ಶಿಲಾಶಾಸನ ದೊರಕಲು ಸಾಧ್ಯವಾಗಿದ್ದು.

  2013-14ನೇ ಸಾಲಿನಲ್ಲಿ ASI ನ ಬೆಂಗಳೂರು ವಲಯದ ಅಧೀಕ್ಷಕರಾಗಿದ್ದ ಶ್ರೀಯುತರು 
ತಾಳಗುಂದದಲ್ಲಿ ಪ್ರಾಯೋಗಿಕ ಉತ್ಖನನದ ಪ್ರತಿ ಹಂತವನ್ನು ಸೂಕ್ಷ್ಮವಾಗಿ ಅವಲೋಕಿಸಿ , ದೊರೆತ ಶಾಸನವನ್ನು ನಿರಂತರ ಎರಡು ವರುಷ ಅಧ್ಯಯನ ನಡೆಸಿ ASIಗೆ ತಮ್ಮ ಕಾರ್ಯ ವರದಿಯನ್ನು ಸಲ್ಲಿಸುತ್ತಾರೆ. 

    2016 ರಲ್ಲಿ ASI ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ವಾರ್ಷಿಕ ವರದಿಯಲ್ಲಿ ಅದನ್ನು ಪ್ರಕಟಿಸುತ್ತದೆ. 

   ನಂತರ ASI ನಿಂದ ನಿವೃತ್ತಿ ಹೊಂದಿದ ಶ್ರೀಯುತರು ಬನವಾಸಿಯ ಕದಂಬೋತ್ಸವ ಸೇರಿದಂತೆ ಹಲವಾರು ಕಡೆ "ಕನ್ನಡದ ಮೊದಲ ಶಾಸನ -ತಾಳಗುಂದದ ಸಿಂಹ ಕಟಾಂಜನ ಶಾಸನ'' ಎಂದು ತಲೆಬರಹದಡಿ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡನೆ ಮಾಡಿದ್ದಾರೆ. 

    ಆ ಮೂಲಕ ನಾಡಿನ ಭಾಷೆಯ ಶಾಸನೋಕ್ತ ಪ್ರಾಚೀನತೆಯನ್ನು ಹಲ್ಮಿಡಿ ಶಾಸನಕ್ಕಿಂತಲೂ ಸಮಾರು 70 ವರುಷ ಹಿಂದಿರುವುದನ್ನು ಅಧಿಕೃತವಾಗಿ ದೃಡೀಕರಿಸಿದ್ದಾರೆ. 

   ಶ್ರೀಯುತರ ಈ ಅನನ್ಯ ಕಾರ್ಯಕ್ಕೆ ಕನ್ನಡಿಗರೆಲ್ಲರ ಪರವಾಗಿ ಅನಂತ ಅನಂತ ಪ್ರಣಾಮಗಳು...

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...