#ಜೋಗ್_ಫಾಲ್ಸ್_ಪರಿಸರದ_ನಿವಾಸಿಗಳು_ಗಮನಿಸಿ
#ಭಾಗ_1.
#ಈ_ಭಾಗದಲ್ಲಿ_200ಕ್ಕೂ_ಹೆಚ್ಚು_ಹೊಂ_ಸ್ಟೇ_ಲಾಭದಾಯಕವಾಗಿ_ನಡೆಸಲು_ಸಾಧ್ಯವಿದೆ.
#ಸ್ಥಳೀಯರಿಗೆ_ಆದಾಯ_ಮೂಲ_ಸ್ವಯಂ_ಉದ್ಯೋಗ_ಲಭಿಸಲಿದೆ
#ವಿಶ್ವವಿಖ್ಯಾತ_ಜೋಗ್_ಜಲಪಾತ_ವೀಕ್ಷಣೆಗೆ_ಹೆಚ್ಚು_ಪ್ರವಾಸಿಗರು_ಬರಲು_ಪ್ರೋತ್ಸಾಹ_ಆಗಲಿದೆ.
#Jogfalls #tourism #homestay #entreprenure
#selfemployment
ಜೋಗ್ ಫಾಲ್ಸ್ ಪರಿಸರದಲ್ಲಿ 200 ಕ್ಕೂ ಹೆಚ್ಚು ಹೊಂ ಸ್ಟೇ ಮಾಡಲು ಅವಕಾಶ ಇದೆ, ಪರಿಸರ ಮತ್ತು ಪ್ರವಾಸೋದ್ಯಮದ ಬಗ್ಗೆ ಕಾಳಜಿ ಇರುವ ಸ್ಥಳೀಯರು ಮುಂದೆ ಬರಬೇಕು.
ಇದರಿಂದ ಸ್ಥಳೀಯರಿಗೆ ಉದ್ಯೋಗ ಲಭಿಸುತ್ತದೆ, ಮಲೆನಾಡಿನ ಪರಿಸರದ ಊಟ ಉಪಹಾರ ಮತ್ತು ವಿವಿಧ ಖಾಧ್ಯಗಳನ್ನ ಪ್ರವಾಸಿಗಳಿಗೆ ಪರಿಚಯಿಸ ಬಹುದು.
ಇದಕ್ಕೆ ಹೆಚ್ಚು ಹಣ ಬೇಡ ಕನಿಷ್ಟ ಎರಡು ಲಕ್ಷದಿಂದ ಪ್ರಾರಂಬಿಸ ಬಹುದು.
ನಿಮ್ಮ ವಾಸದ ಮನೆಯನ್ನೇ ಅತಿಥಿಗಳಿಗೆ ತಂಗಲು ಅವಕಾಶ ನೀಡಿ ಅವರಿಗೆ ನಿಮ್ಮ ಪರಿಸರದ ಸಸ್ಯಹಾರಿ ಅಥವ ಮಾಂಸಹಾರಿ ಊಟೋಪಚಾರ ನೀಡಲು ಸಂಬಂಧ ಪಟ್ಟ ಇಲಾಖಾ ಅನುಮತಿ ಪಡೆದು ಪ್ರಾರಂಬಿಸ ಬಹುದಾಗಿರುವ ಪ್ರವಾಸೋದ್ಯಮವೇ #ಹೊಂ_ಸ್ಟೇ.
ಜೋಗ್ ಜಲಪಾತ ಅಭಿವೃದ್ದಿ ಪ್ರಾಧಿಕಾರದ ಮೂಲಕ ಸರ್ಕಾರಗಳು ನೂರಾರು ಕೋಟಿ ವಿನಿಯೋಗಿಸುತ್ತಿದೆ.
ಸ್ಥಳೀಯರು ಹೊಂ ಸ್ಟೇ ಮೂಲಕ ಇಲ್ಲಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೊಂ ಸ್ಟೇ ಮಾಡಿ ಆದಾಯಗಳಿಸಲು ಸಾಧ್ಯವಿದೆ.
ಹಾಗಂತ ನಾನು ಹೇಳಿದ್ದಲ್ಲ ಖಾಸಾಗಿ ಸಂಸ್ಥೆಯೊಂದು ಈ ಭಾಗದಲ್ಲಿ ಸಮೀಕ್ಷೆ ನಡೆಸಿದೆ ಅದರ ಪಲಿತಾಂಶ ಇದು ಹೆಚ್ಚಿನ ಮಾಹಿತಿ ಮುಂದಿನ ಲೇಖನದಲ್ಲಿ ನೀಡುತ್ತೇನೆ.
ಈ ಬಗ್ಗೆ ಆಸಕ್ತರು ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಕಾಮೆಂಟ್ ನಲ್ಲಿರುವ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ನಿಮ್ಮ ಫೋನ್ ನಂಬರ್ ನಮೂದಿಸಿ
Comments
Post a Comment