#ಮುಪ್ಪಾನೆ
#ಕೈ_ಬೀಸಿ_ಕರೆಯುತ್ತಿದೆ_ಅಭಯಾರಣ್ಯದ_ಮಧ್ಯದ_ಶರಾವತಿ_ಹಿನ್ನೀರ_ಲಾಂಚ್_ಪ್ರಯಾಣಕ್ಕೆ
#ಸಿಗಂದೂರು_ಸೇತುವೆ_ನಂತರ_ನಿಂತ_ಲಾಂಚ್_ಅನುಭವ
#ಆದರೆ_ಶರಾವತಿ_ನದಿಯ_ಇನ್ನೊಂದು_ಭಾಗವಾದ_ಮುಪ್ಪಾನೆಗೆ_ಬನ್ನಿ
#ಅಲ್ಲಿ_ಅಭಯಾರಣ್ಯದ_ಮಧ್ಯ_ಲಾಂಚ್_ಪ್ರಯಾಣ_ಮಾಡಬಹುದು
#ಇಲ್ಲಿ_ಅರಣ್ಯ_ಇಲಾಖೆ_ವಿಶ್ರಾಂತಿಗೃಹ_ಡೇರೆ_ವ್ಯವಸ್ಥೆ_ಇದೆ
#ಸಮೀಪದಲ್ಲೇ_ಗುಬ್ಬಿಕಂಠ_ಹೋಮ್_ಸ್ಟೇ_ಇದೆ.
#Sharavathiriver #Backwater #Boating #Homestay #Ecotourism #Wildlife #Jogfalls #Sagar #Shivamogga.
ಸಿಗಂದೂರು ದೇವಾಲಯಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರಿಗೆ ಈಗ ಅಲ್ಲಿಗೆ ಸೇತುವೆ ನಿರ್ಮಾಣ ಆಗಿ ವಾಹನ ಸಂಚಾರ ಸುಗಮವಾಗಿದೆ.
ಸ್ಥಳೀಯರ ಬಹು ದಶಕದ ಕನಸು ನನಸಾಗಿದೆ ಇದರಿಂದ ಇಲ್ಲಿನ ಲಾಂಚ್ ಸೇವೆ ಸ್ಥಗಿತವಾಗಿದೆ.
ಆದರೆ ಬಹುತೇಕ ಪ್ರವಾಸಿಗರು ಶರಾವತಿ ನದಿ ಲಾಂಚ್ ಮೂಲಕ ದಾಟುವ ನೆನಪುಗಳನ್ನು ಮರೆತಿಲ್ಲ.
ಲಾಂಚ್ ಮೂಲಕ ನದಿ ದಾಟುವ ಅನುಭವ ಪ್ರವಾಸಿಗಳಿಗೆ ಅವರ ಕುಟುಂಬಗಳಿಗೆ ಥ್ರಿಲ್ ನೀಡುತ್ತಿತ್ತು.
ಈಗ ತುಮರಿ ಸೇತುವೆ ನಿರ್ಮಾಣವಾಗಿ ಲಾಂಚ್ ಪ್ರಯಾಣ ನಿಂತಿದೆ ಎಂದು ಚಿಂತಿಸಬೇಕಾಗಿಲ್ಲ ಇದೇ ಶರಾವತಿ ನದಿಯ ಇನ್ನೊಂದು ಭಾಗವಾದ #ಮುಪ್ಪಾನೆ ಎಂಬಲ್ಲಿ ಇದೇ ರೀತಿಯ ಲಾಂಚ್ ಸಂಚರಿಸುತ್ತಿದೆ.
ಜೋಗ್ ಫಾಲ್ಸ್ ನಿಂದ ಕಾರ್ಗಲ್ ಮತ್ತು ಭಟ್ಕಳ ಮಾಗ೯ದಲ್ಲಿ 14 ಕಿಲೋ ಮೀಟರ್ ಸಾಗಿ ಎಡಕ್ಕೆ ತಿರುಗಿ 3 ಕಿಲೋ ಮೀಟರ್ ದೂರದಲ್ಲಿದೆ ಮುಪ್ಪಾನೆ.
ಇಲ್ಲಿಂದ ಲಾಂಚ್ ನಲ್ಲಿ ಶರಾವತಿ ಹಿನ್ನೀರು ದಾಟಿ ಅಲ್ಲಿಂದ ರಸ್ತೆ ಮಾರ್ಗವಾಗಿ ಸಿಗಂದೂರು ದೇವಾಲಯಕ್ಕೆ ತಲುಪಬಹುದು.
ಈ ಪ್ರದೇಶ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಕ್ಕೆ ಸೇರುತ್ತದೆ ಆದ್ದರಿಂದ ಸದರಿ ಇಲಾಖೆಯ ವಿಶ್ರಾಂತಿ ಗೃಹ ಮತ್ತು ಡೇರೆ ವ್ಯವಸ್ಥೆ ಪ್ರವಾಸಿಗಳಿಗಾಗಿ ವ್ಯವಸ್ಥೆ ಮಾಡಿದ್ದಾರೆ.
ಇಲ್ಲಿಗೆ 7 ಕಿಲೋ ಮೀಟರ್ ಸಮೀಪದಲ್ಲೇ ಅತ್ಯುತ್ತಮವಾದ ಊಟ-ವಸತಿಗೆ ಹೆಸರಾದ ಹೊಸ ಹೋಮ್ ಸ್ಟೇ #ಗುಬ್ಬಿಕಂಠ_ಹೋಮ್ ಸ್ಟೇ ಇದೆ ಅಲ್ಲಿ ಜೈನರ ಊಟ ಉಪಹಾರ ವ್ಯವಸ್ಥೆ ಇದೆ ಅಲ್ಲಿನ ಸಂಪರ್ಕದ ಲಿಂಕ್ ಕಾಮೆಂಟಲ್ಲಿದೆ ನೋಡಿ.
ಇಲ್ಲಿಂದ ಭಟ್ಕಳ ಕೇವಲ 66 ಕಿಲೋ ಮೀಟರ್.
ಈ ಪ್ರದೇಶ ವೈಲ್ಡ್ ಲೈಫ್ ಪಾರೆಸ್ಟ್ ವ್ಯಾಪ್ತಿಯಲ್ಲಿದೆ, ಮುಪ್ಪಾನೆ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿ 431 ಚದರ ಕಿಲೋಮೀಟರ್ ಆಗಿದೆ.
ಇಲ್ಲಿನ ಈ ಪರಿಸರದಲ್ಲಿನ ಬೋಟ್ ಪ್ರಯಾಣ ವಿಶೇಷ ಆಗಿದೆ.
ಇಲ್ಲಿಗೆ ಬರುವ ಪ್ರವಾಸಿಗರು ಪರಿಸರ ಕಾಳಜಿವಹಿಸಬೇಕು.
Comments
Post a Comment