ಮಾರ್ಚ್ 14 - ಶಾಂತವೇರಿ ಗೋಪಾಲಗೌಡರ ಜನ್ಮ ದಿನಾಚರಣೆ, ಸಾಗರ - ಹೊಸನಗರ- ತೀಥ೯ಹಳ್ಳಿ ವಿದಾನ ಸಭಾ ಕ್ಷೇತ್ರದಿಂದ ಮೊದಲ ವಿದಾನ ಸಭಾ ಸದಸ್ಯರು.
#ನಾಳೆ_ದಿನಾಂಕ_14_ಮಾರ್ಚ್_ಶಾಂತವೇರಿಗೋಪಾಲಗೌಡರ_99ನೇ_ಹುಟ್ಟುಹಬ್ಬ. #ಸಾಗರ_ಹೊಸನಗರ_ತೀರ್ಥಹಳ್ಳಿ_ವಿದಾನಸಭಾ_ಕ್ಷೇತ್ರದ_ಮೊದಲ_ಶಾಸಕರು #ಸಾಗರ_ಹೊಸನಗರದಲ್ಲಿ_ಶಾಂತವೇರಿ_ಗೋಪಾಲಗೌಡರ_ಪ್ರತಿಮೆ_ಸ್ಥಾಪನೆ_ಮಾಡಲಾದ್ದು_ದುರಂತ #ಜಿಲ್ಲೆಯ_ಜನತೆಗೆ_ಈ_ಸಂದರ್ಭದಲ್ಲಿ_ಹಿ_ಮ_ನಾಗಯ್ಯರು_ಬರೆದ_ಶಾಂತವೇರಿಗೋಪಾಲಗೌಡರ_ಸಂಕ್ಷಿಪ್ತ_ಸಮಗ್ರ_ಮಾಹಿತಿ #ಇದನ್ನು_ಓದುವ_ಮತ್ತು_ಹಂಚುವ_ಮೂಲಕ_ಅವರ_ಹುಟ್ಟು_ಹಬ್ಬ_ಅರ್ಥಪೂರ್ಣ_ಮಾಡೋಣ. ಶಾಂತವೇರಿ ಗೋಪಾಲಗೌಡರನ್ನು ನಾನು ನೋಡಿಲ್ಲ ಆದರೆ ಅವರ ಒಡನಾಟದ ಮತ್ತು ಹೋರಾಟದ ಜೊತೆಗಾರರಾಗಿದ್ದ ಗಣಪತಿಯಪ್ಪ, ಅವರ ಆತ್ಮಚರಿತ್ರೆ #ಜೀವಂತ_ಜ್ಜಾಲೆ ಬರೆದ ಕೊಣಂದೂರು ವೆಂಕಪ್ಪ ಗೌಡರ ಒಡನಾಟದಿಂದ ಅನೇಕ ವಿಚಾರ ತಿಳಿಯಲು ಸಾಧ್ಯವಾಯಿತು. ಗೋಪಾಲಗೌಡರು ವಿದಾನ ಸಭೆಗೆ ಆಯ್ಕೆ ಆದ ಕ್ಷೇತ್ರದವನು ನಾನು, ಗೋಪಾಲಗೌಡರು ಸೋಲಿಸಿದ್ದು ನಮ್ಮ ಊರ ಬದರಿನಾರಾಯಣ ಅಯ್ಯಂಗಾರರನ್ನು. ಸಾಗರ ಮತ್ತು ಹೊಸನಗರದಲ್ಲಿ ಶಾಂತವೇರಿ ಗೋಪಾಲಗೌಡರ ಪ್ರತಿಮೆ ಸ್ಥಾಪಿಸಲು ಈ ವರೆಗೆ ಸಾಧ್ಯವಾಗಲಿಲ್ಲ. ____ ___ _____ #ಶಾಂತವೇರಿ_ಗೋಪಾಲಗೌಡರು ಶಾಂತವೇರಿ ಗೋಪಾಲಗೌಡ ಎತ್ತರದ ನಿಲುವು; ದುಂಡು ಮುಖ; ಉದ್ದವಲ್ಲದ ಮುದ್ದಾದ ಮೂಗು; ಅಗಲವಾದ...