#ಸ್ವರ್ಗದ_ಬಾಗಿಲು_ಎಲ್ಲಿದೆ? #ನಾವಿದ್ದಲ್ಲೇ_ಸ್ವರ್ಗ_ಸೃಷ್ಟಿ_ಮಾಡಿಕೊಳ್ಳ_ಬಹುದು #ಹಾಗೇ_ನರಕ_ಸೃಷ್ಟಿಯೂ_ಕೂಡ #ನಿತ್ಯ_ಏಳು_ಸಾವಿರ_ಹೆಜ್ಜೆಯ_ವಾಕಿಂಗ್ #ಮೂರು_ವರ್ಷದ_ನಿರಂತರ_ಸ್ವಪ್ರಯೋಗ #ಮನೆ_ಎದುರಿನ_ಹತ್ತು_ಹೆಜ್ಜೆಯ_ಜಾಗವೇ_ಸಾಕು. ನನ್ನ ವಾಕಿಂಗ್ ನೋಡಿದ ನಮ್ಮ ಲಾಡ್ಜ್ ಲ್ಲಿ ತಂಗಿದ್ದ ಸಿನಿಮಾ ನಿರ್ದೇಶಕ ಗೆಳೆಯರು " ನೀವಿದ್ದಲ್ಲೇ ಸ್ಪರ್ಗ ಸೃಷ್ಟಿಸಿಕೊಂಡಿದ್ದೀರಿ" ಅಂದರು ನನಗೆ ಅರ್ಥವಾಗಲಿಲ್ಲ ಅವಾಗ ಅವರೇ ನೆನಪಿಸಿದ್ದು ನನ್ನದೇ ಡೈಲಾಗ್ "ನಾವಿದ್ದಲ್ಲೇ ಸ್ವರ್ಗ ಸೃಷ್ಟಿಸಿ ಕೊಳ್ಳಬೇಕು" ಅವರು ನನ್ನ ನಿತ್ಯದ ಲೇಖನ ಓದುವವರು. ಬೆಳಿಗ್ಗೆ ಒಂದು ಗಂಟೆಯ 5000 ಹೆಜ್ಜೆಗಳಿಗೆ ಸಾಥ್ ನೀಡುವವ ನನ್ನ ಪ್ರೀತಿಯ ಶಂಭೂರಾಮ ಎಂಬ ರಾಟ್ ವೀಲರ್ ಸಂಜೆಯ 2500 ರಿಂದ 3000 ಹೆಜ್ಜೆಗೆ ಮಗಳು ಬೀದಿಯಿಂದ ತಂದು ಸಾಕಿ ನಮಗೆ ಬಿಟ್ಟು ಹೋದ ಜಾನ್ಸಿ ಮತ್ತು ಅವಳ ಮಗಳು ಕಾಳು. ಅವರು ಹೇಳಿದ್ದು ಸತ್ಯ ನಾನು ನನ್ನ ಜೀವನದ ಪರಿಸ್ಥಿತಿ ಮತ್ತು ಪರಿದಿಯಲ್ಲಿ ಸಂತೃಪ್ತ ಧನಾತ್ಮಕವಾಗಿ ಜೀವನ ಸಾಗಿಸಲು ನನ್ನ ಖಾಸಾಗಿ ಜೀವನದಲ್ಲಿ ಚೌಕಟ್ಟು ಹಾಕಿ ಕೊಂಡಿದ್ದೇನೆ. ನಿತ್ಯ ವಾಕಿಂಗ್ ಮಾಡಲು ಟ್ರೆಡ್ ಮಿಲ್ ಖರೀದಿಸುವ ಆಸೆ ಇತ್ತು, ಪಂಜಾಬ್ ನ ಜಲಂದರ್ ಗೆ ಹೋಗಿದ್ದಾಗ ಅಲ್ಲಿನ ಟ್ರೆಡ್ ಮಿಲ್ ಉತ್ಪಾದಕರಿಂದ ಹಿರಿಯ ಗೆಳೆಯರಾದ ಅಬಕಾರಿ ಗುತ್ತಿಗೆದಾರರಾದ ನಾರಾಯಣ ರಾವ್ ಅವರಿಗೆ ಟ್ರೆಡ್ ಮಿಲ್ ಖರೀದ...