Skip to main content

Posts

Showing posts with the label 1992-93 I was Shimoga district Gramanthara sarige bus owner association president

Blog number number 874. ಶರಾವತಿ ಮುಳುಗಡೆ ಸಂತ್ರಸ್ಥರ ಊರಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮಕ್ಕೆ ನನ್ನ ಬಸ್ ಪರ್ಮಿಟ್. ಆಗಿನ ಜಿಲ್ಲಾದಿಕಾರಿ ವಿಜಯ ಕುಮಾರರ ಕನಸಿನ ಗ್ರಾಮಾಂತರ ಸಾರಿಗೆ ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ವಿರೇಂದ್ರ ಪಾಟೀಲರು, ಪ್ರಸ್ತಾವಿಕ ಭಾಷಣ ಮಾಡಿದ ನಾನು.

#ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ_ಬೆಳ್ಳೂರಿನಲ್ಲಿ_ಜಿಲ್ಲಾದಿಕಾರಿ_ವಾಸ್ತವ್ಯ_ಇವತ್ತು  #ರಿಪ್ಪನ್ಪೇಟೆಯಿಂದ_14_ಕಿಮಿ_ದೂರ #ಅಭಯಾರಣ್ಯದ_ಮಧ್ಯೆ_ಶರಾವತಿ_ಮುಳುಗಡೆ_ಸಂತ್ರಸ್ಥರ_ಬೀಡು. #ಈ_ಹಳ್ಳಿಗೆ_ಬಸ್_ಸೌಕರ್ಯ_ನೀಡಿದ_ನನ್ನ_ಅನುಭವ. #ಆಗಿನ_ಉತ್ಸಾಹಿ_ಜಿಲ್ಲಾಧಿಕಾರಿ_ವಿಜಯಕುಮಾರರ_ಗ್ರಾಮಾಂತರ_ಸಾರಿಗೆ_ಯೋಜನೆ. #ಅದನ್ನು_ಶಿವಮೊಗ್ಗ_ನೆಹರೂ_ಸ್ಟೇಡಿಯಂನಲ್ಲಿ_ಉದ್ಘಾಟಿಸಿದ_ಆಗಿನ_ಮುಖ್ಯಮಂತ್ರಿ_ವೀರೆಂದ್ರಪಾಟೀಲರು. #ಪ್ರಸ್ತಾವಿಕ_ಭಾಷಣ_ಮಾಡಿದ_ನಾನು_ಜಿಲ್ಲಾ_ಗ್ರಾಮಾಂತರ_ಸಾರಿಗೆ_ಬಸ್_ಮಾಲಿಕರ_ಸಂಘದ_ಅಧ್ಯಕ್ಷನಾಗಿದ್ದೆ.   ಇವತ್ತು ಶಿವಮೊಗ್ಗ ಜಿಲ್ಲಾದಿಕಾರಿಗಳು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಿಂದ 14 ಕಿಮಿ ದೂರದ ಬೆಳ್ಳೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದಾರೆ.   ಈ ಸಂದರ್ಭದಲ್ಲಿ 1992-93ರ ಒಂದು ಘಟನೆ ನೆನಪಾಯಿತು ಹಾಗಾಗಿ ಅದನ್ನು ಬರೆಯಲು ಅವಕಾಶ.   ಸುಮಾರು 30 ವರ್ಷದ ಹಿಂದೆ ನನಗೆ 26 ರ ಪ್ರಾಯ, ಹೊಸದು ಮತ್ತು ಹೊಸತನದ ಬಗ್ಗೆ ತೆರೆದುಕೊಳ್ಳುವ ಬಿಸಿ ರಕ್ತದ ಹುಮ್ಮಸ್ಸು, ಆಗ ಶಿವಮೊಗ್ಗ ಜಿಲ್ಲಾಧಿಕಾರಿಗಳಾಗಿ ಬಂದವರು ವಿಜಯ ಕುಮಾರ್.   ತಮಿಳುನಾಡಿನ ಮೂಲದ ಐ.ಎ.ಎಸ್ ಅಧಿಕಾರಿ ತುಂಬಾ ಜನಪರ ಕಾಳಜಿಯ ಜಿಲ್ಲಾಧಿಕಾರಿಗಳು ಅವರು ಶಿವಮೊಗ್ಗ ಜಿಲ್ಲೆಗೆ ಬಂದಾಗ ಇಲ್ಲಿನ ಅನೇಕ ಕುಗ್ರಾಮಗಳಿಗೆ ರಸ್ತೆ ಇದ್ದರೂ ಬಸ್ ಸೌಕರ್ಯ ಇರಲಿಲ್ಲ.    ಆ ಭಾಗದ ವಿದ್ಯಾರ್ಥಿಗ...