Skip to main content

Posts

Showing posts with the label Handigodu syndrome dieseas.

# HANDIGODU SYNDROME DIESEAS# ಹಂದಿ ಗೋಡು ನಿಗೂಡ ಕಾಯಿಲೆ#

ಹಂ ದಿ ಗೋ ಡು ನಿ ಗೂಡ ಕಾಯಿ ಲೆ   ಇವತ್ತು ಔಷದಿ ಕಂಡು ಹಿಡಿಯದ ಕಾಯಿಲೆ ಯಾವುದು ಎಂದರೆ ಏಡ್ಸ್ ಅನ್ನುತ್ತಾರೆ ಆದರೆ ನಮ್ಮ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಂದಿಗೋಡು ಎಂಬಲ್ಲಿ ಮೊದಲಿಗೆ ಕಂಡು ಬಂದ ಈ ಕಾಯಿಲೆಗೆ ಈವರೆಗೆ ಔಷದಿ ಕಂಡು ಹಿಡಿದಿಲ್ಲ, ಯಾವ ಕಾರಣದಿಂದ ಬರುತ್ತೆ ಎನ್ನುವ ಸಂಶೋದನೆಯು ಆಗಿಲ್ಲ. ವೈದ್ಯಲೋಕದಲ್ಲಿ ಹಂದಿ ಗೋಡು ನಿಗೂಡ ಕಾಯಿಲೆ ಎಂಬ ಹೆಸರು ಇಟ್ಟಿದ್ದಾರೆ.    ದೇಹದ ಸಂದುಗಳ ಮೂಳೆ ಅಡ್ಡಾ ದಿಡ್ಡಿ ಬೆಳೆಯುವುದರಿಂದ ರೋಗಿಯಾದವರು ವಕ್ರವಾಗಿ ನಡೆದಾಡಲು ಪ್ರಾರಂಭಿಸುತ್ತಾರೆ, ಕ್ರಮೇಣ ವಿಪರೀತ ನೋವಿನಿಂದ ನರಳುತ್ತಾರೆ, ನಿಲ್ಲಲು ಸಾಧ್ಯವಿಲ್ಲ, ಕುಳಿತುಕೊಳ್ಳಲು ಸಾಧ್ಯವಿಲ್ಲ, ಮಲಗಲು ಸಾಧ್ಯವಿಲ್ಲದಂತ ನರಕಯಾತನೆ.   ಇದರಿಂದ ಕುಬ್ಜರಾಗುತ್ತಾರೆ ಇಂತಹ 300ಕ್ಕೂ ಹೆಚ್ಚು ರೋಗ ಪೀಡಿತರು ಸಾಗರ ತಾಲ್ಲೂಕಿನಲ್ಲಿದ್ದಾರೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಮತ್ತು ಎನ್ ಆರ್ ಪುರದಲ್ಲೂ ಈ ಕಾಯಿಲೆ ಪೀಡಿತರಿದ್ದಾರೆ.    ಸಾಗರ ಪಟ್ಟಣದಿಂದ ಕೆಳದಿಗೆ ಹೋದರೆ ಅಲ್ಲಿ೦ದ ಒಂದೆರೆಡು ಕಿ.ಮಿ. ದೂರದಲ್ಲಿ ಹಂದಿಗೋಡು ಹಳ್ಳಿ ಇದೆ, ಈ ಹಳ್ಳಿಯ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಈ ಕಾಯಿಲೆ ಪೀಡಿತರಿದ್ದಾರೆ ಆದರೆ ಇವರ ಪಕ್ಕದಲ್ಲೇ ಹವ್ಯಕ ಬ್ರಾಹ್ಮಣರ ಕಾಲೋನಿ ಇದೆ ಅಲ್ಲಿ ಈ ಕಾಯಿಲೆ ಯಾರಿಗೂ ಬಂದಿಲ್ಲ.   ಜಿನೆಟಿಕ್ ಕಾರಣದಿಂದ ಈ ಕಾಯಿಲೆ ವಂಶಪಾರಂಪರ್ಯವಾಗಿ ಬರುತ್ತೆ...