#50_ವಷ೯ದ_ಹಿಂದಿನ_ದಸರಾ_ನೆನಪು ಈಗೆಲ್ಲ ಹಳ್ಳಿಯ ಪ್ರತಿ ಮನೆಯಲ್ಲೂ ಎರೆಡೆರೆಡು ಬೈಕ್, ಕಾರ್, ಟ್ರಾಕ್ಟರ್ ಇತ್ಯಾದಿ ಇದ್ದೇ ಇದೆ ಅದರದ್ದೇ ಆಯುದ ಪೂಜೆಯ ಸಡಗರ ಆದರೆ ಭಾಗವಹಿಸುವ ಸಾವ೯ಜನಿಕರು ತುಂಬಾ ಕಡಿಮೆ. ಸುಮಾರು 50 ವರ್ಷದ ಹಿಂದೆ ದಸರಾ ಆಯುದ ಪೂಜೆ ಬೇರೆ ರೀತಿ ಇತ್ತು. ರೈಲುಗಳು ನಮ್ಮ ಊರಿನಲ್ಲಿ ಇದ್ದಿದ್ದರಿ೦ದ ರೈಲ್ವೆ ಗೇಟ್ ಮನ್ ಗಳು ಗೇಟ್ ಗೆ ಹೂವು ಮಾವಿನ ತಳಿರು ತೋರಣದಿಂದ ಸಿಂಗರಿಸಿ ಕುರಿ ತಂದು ಇರಿಸಿ ಪ್ರತಿ ದಿನಕ್ಕಿಂತ ತಡವಾಗಿ ಬರುವ ರೈಲಿಗೆ ಕಾಯುತ್ತಿದ್ದರು ಉಗಿ ಬಂಡಿ ಗೇಟ್ ಸ್ಥಳಕ್ಕೆ ಬಂದು ನಿಂತಾಗ ರೈಲಿಗೆ ಪೂಜೆ ಮಾಡಿ ಕುರಿ ಬಲಿ ನೀಡುತ್ತಿದ್ದರು ರೈಲ್ವೆ ಸಿಬ್ಬಂದಿಗೆ ಅವತ್ತು ಬೋನಸ್ ಬೇರೆ ಸಿಗುತ್ತದೆ ಅಂತ ಸುದ್ದಿ ಇತ್ತು. ನಮ್ಮ ಊರು ಆನಂದಪುರಂ ಹೋಬಳಿ ಕೇಂದ್ರವಾದ್ದರಿಂದ ವಿದ್ಯುತ್ ಇಲಾಖೆಯಲ್ಲಿ ಮತ್ತು ಪೋಲಿಸ್ ಹೊರ ಠಾಣೆಯಲ್ಲೂ ಸಡಗರ ಇರುತ್ತಿತ್ತು. ಇದನ್ನು ಬಿಟ್ಟರೆ ನಮಗೆಲ್ಲ ಹೆಚ್ಚು ನಂಟಿದ್ದ ನಮ್ಮ ಊರ ಅಕ್ಕಿ ಗಿರಣಿ ಆಯುದ ಪೂಜೆನೆ ವಿಶೇಷ, ಯಾಕೆಂದರೆ ಆಗೆಲ್ಲ ಭತ್ತದ ಹೊಟ್ಟಿಗೆ ಬೆಲೆ ಇರಲಿಲ್ಲ ಅಕ್ಕಿ ಗಿರಣಿ ಹಿಂದೆ ಅಕ್ಕಿ ಗಿರಣಿ ಕಟ್ಟಡಕ್ಕಿಂತ ದೊಡ್ಡದಾದ ಹೊಟ್ಟಿನ (ಉಮ್ಮಿ) ರಾಶಿ ಬಿದ್ದಿರುತ್ತಿತ್ತು ಅದು ಊರಿನ ಆ ಕಾಲದ ಎಳೆಯರಿಗೆ ದೊಡ್ಡ ಆಕಷ೯ಣೀಯ ಕೇಂದ್ರ, ಹೇಗೆ ಬಿದ್ದರೂ ಉರುಳಿದರೂ ದೊಡ್ಡ ಸ್ಪಾ೦ಜ್ ಬೆಡ್ ಅ...