#ಒ೦ದು_ಮರದ_ಕಥೆ #ಹೊಸಗುಂದದ_ಕಲ್ಲೇಶ್ವರ_ದೇವಾಲಯ #ಈಗಿನ_ಹೆಸರು_ಉಮಾಮಹೇಶ್ವರ. #ಹೊಸಗುಂದದ_ಹೆಡತ್ರಿ_ನಾಗರಾಜ್_ಗೌಡರು #ಸಾಗರದ_ಪುರುಶೋತ್ತಮ_ಪಾರೆಸ್ಟರ್ #ಸೊರಬದ_ಹುಸೇನ್_ಸಾಬ್_ಮತ್ತು_ತಂಡ #ಈ_ಮರ_ತೆಗೆಸಲು_ನಮ್ಮನ್ನೆಲ್ಲ_ಸದಾ_ಜ್ಞಾಪಿಸುತ್ತಿದ್ದ_ಇತಿಹಾಸಕಾರ_ಜಯದೇವಪ್ಪ_ಜಿನಕೇರಿ. #ಈ_ಸಾಹಸದ_ಕೆಲಸ_ರಿಪ್ಪನಪೇಟೆಯ_ಕಮಲವಾಣಿ_ವಾರಪತ್ರಿಕೆ_ಅದರ_ಸಂಪಾದಕ_ತ_ಮ_ನರಸಿಂಹ. https://arunprasadhombuja.blogspot.com/2022/01/blog-post_26.html (ಹೊಸಗು೦ದದ ಕಲ್ಲೇಶ್ವರ ಈಗಿನ ಉಮಾ ಮಹೇಶ್ವರ ದೇವಸ್ಥಾನದ ಮರದ ಕಥೆ) ಶಿವಮೊಗ್ಗ ಜಿಲ್ಲೆಯ ಆನಂದಪುರಂ ಹೋಬಳಿಯ ಹೊಸಗುಂದ ಎಂದರೆ ತುಂಬಾ ಪ್ರಸಿದ್ದಿಯ ಹಳ್ಳಿ ಈ ಗ್ರಾಮಕ್ಕೆ ಪ್ರಸಿದ್ದಿಬರಲು ಕಾರಣ ಶರಾವತಿ ನದಿಗೆ ಜೋಗ ಜಲಪಾತದ ಲಿಂಗನಮಕ್ಕಿ ಎಂಬಲ್ಲಿ ಆಣೆಕಟ್ಟು ಕಟ್ಟಿ ಜಲ ವಿದ್ಯುತ್ ಯೋಜನೆ ಪ್ರಾರಂಬಿಸಿದ್ದರಿಂದ ಹೆಡತ್ರಿ ಎಂಬ ಊರು ಕೂಡ ಮುಳುಗಡೆ ಆಯಿತು, ಆ ಊರಿನ ಶ್ರೀಮಂತ ದೊಡ್ಡ ರೈತ ಕುಟು೦ಬವಾದ ಹೆಡತ್ರಿ ದ್ಯಾವಪ್ಪ ಗೌಡರ ಕುಟುಂಬ ಇಲ್ಲಿಗೆ ವಲಸೆ ಬಂತು. ಆ ಕಾಲದಲ್ಲೇ ಜೀಪು, ಟ್ರಾಕ್ಟರ್ ಮತ್ತು ಬುಲೆಟ್ ಬೈಕ್ ಇದ್ದ ಈ ಕುಟು೦ಬಕ್ಕೆ ಸಕಾ೯ರ ನೀಡಿದ ಪರಿಹಾರ ಇಡೀ ಜೀಪಲ್ಲಿ ತುಂಬಿಸಿದರೂ ಮತ್ತೂ ಉಳಿದಿತ್ತು ಅಂತ ಅವರ ಶ್ರೀಮಂತಿಗೆ ವಣ೯ನೆ ಮಾಡುತ್ತಿದ್ದರು ಜನ. ದ್ಯಾವಪ್ಪ ಗೌಡರು ...