Blog number 1913. ಸಾಗರದ ಖ್ಯಾತ ಉದ್ಯಮಿ ಕೊಡುಗೈ ದಾನಿ ದಿವಂಗತ ಪುತ್ತೂರಾಯರ ಕುಟುಂಬದ ಹಾಲು ಮಡ್ಡಿ ಬಳಸಿ ತಯಾರಿಸುವ ಬ್ರಾಂಡೆಡ್ ಅಗರಬತ್ತಿಗೆ ಭರಪೂರ ಬೇಡಿಕೆ ಕಳೆದ 15 ವರ್ಷದಿಂದ ನಮ್ಮ ಸಂಸ್ಥೆಗೆ ಇದನ್ನು ಖರೀದಿಸುತ್ತಿದ್ದೇನೆ.
#ಸಾಗರದ_ಪ್ರಸಿದ್ಧ_ಆಗರಬತ್ತಿ_ಸಂಸ್ಥೆಯ_ಉದ್ಯೋಗಿಗಳು #ನಮ್ಮ_ಕಛೇರಿಯಲ್ಲಿ #ಹಾಲುಮಡ್ಡಿ_ಮೌಲ್ಯವರ್ಧನೆ_ಮಾಡಿದ_ಮಹಿಳಾ_ಉದ್ಯಮಿಯ_ಸಾಹಸ #ಈ_ವಿಶೇಷ_ಆಗರಬತ್ತಿ_ಕಿಲೋಗೆ_ರೂ_3200 #ಸಾಗರದ_ಪ್ರಸಿದ್ದ_ಉದ್ಯಮಿ_ಎನ್_ಜಿ_ಪೈ_ಸೊಸೆಯಿಂದ #ಶ್ರೀಗಜಾನನ_ಪಪ್ಯೂ೯ಮರಿ_ಇಂಡಸ್ಟ್ರೀಸ್ #ಪ್ರಸಿದ್ಧವಾಗಿರುವ_ಸ್ಯಾಂಡಲ್_ಪ್ಲೋರಾ_ಹರಿಲೀಲಾ_ವೈಷ್ಣವಿ_ಪ್ಲೋರಾ. ಕಳೆದ ನವೆಂಬರ್ ಒಂದರಂದು ಸಾಗರದ ಎನ್.ಜಿ. ಪೈ ಸಂಸ್ಥೆಯ ನಿಷ್ಟಾವಂತ ವ್ಯವಸ್ಥಾಪಕರಾದ ಅಶೋಕ್ ನಾಯಕ್ ಬಂದಿದ್ದರು ನಾವೆಲ್ಲ ಪುತ್ತೂ ರಾಯರ ಬೇಟಿಗೆ ಸಾಗರ ಇಕೇರಿ ರಸ್ತೆಯ ಅವರ ಹಳೆಯ ರೈಸ್ ಮಿಲ್ ಕಛೇರಿಗೆ ಹೋದಾಗೆಲ್ಲ ಸಿಗುತ್ತಿದ್ದವರು. ಅವರ ಜೊತೆ ಬಂದವರು ಹಿರೇಬಿಲಗುಂಜಿ ಗ್ರಾ.ಪ. ನ ಕೊಪ್ಪದ ಆದರ್ಶ ಗೌಡರು ಮತ್ತು ಸಾಗರದ ಜೋಗ ರಸ್ತೆಯ ಮಾದಣ್ಣರ ಕ್ಯಾಂಟೀನ್ ಪಕ್ಕದ ಪ್ರಾವಿಜನ್ ಸ್ಟೋರ್ ಮಾಲಿಕ ಕಾರ್ತಿಕ್ ಪೈ . ಇವರೆಲ್ಲ ಬಂದಿದ್ದು ಇವರ ಅಗರಬತ್ತಿ ಸಂಸ್ಥೆಯ ಇನ್ನೊಂದು ಹೊಸ ಉತ್ಪನ್ನ ಕಡಿಮೆ ಬೆಲೆಯ ಅಗರಬತ್ತಿ ಮಾರ್ಕೇಟ್ ಮಾಡಲು. ಕಿರಣ್ ಪೈ ಇದರ ಏಜೆನ್ಸಿ ಪಡೆದಿದ್ದಾರೆ ಅವರಿಗೆ ಇದರ ಮಾರ್ಕೆಟ್ ಪರಿಚಯಿಸಲು ಅಶೋಕ್ ನಾಯಕರು ಬಂದಿದ್ದರು ಅವರ ಜೊತೆ ಬಂದಿದ್ದ ಕೊಪ್ಪ ಆದರ್ಶ ಗೌಡರು ಉದಬತ್ತಿ ತಯಾರಿಕೆಯಲ್ಲಿ ನುರಿತ ತಂತ್ರಜ್ಞರು. ನಮ್ಮ ಸಂಸ್ಥೆಯಲ್ಲಿ 2008ರಿಂದ ಇವರ ಸಂಸ್ಥೆ ತಯಾರಿಸುವ #ಸ್ಯಾಂಡಲ್_ಫ್...