Skip to main content

Posts

Showing posts with the label Connection between Anandapuram of Shivamogga District and Kerala Ananthapur of Kasaragod district

Blog number 1011. ಆನಂದಪುರಂ ಇತಿಹಾಸ ಭಾಗ : 83. ಆನಂದಪುರಂಗೂ ಕೇರಳದ ಕುಂಬಳೆಯ ಅನಂತಪುರಕ್ಕೂ ಸಂಬಂದ ಮತ್ತು ಸಾಮ್ಯತೆ ಇದೆ.

#ಆನಂದಪುರಂ_ಇತಿಹಾಸ_ಸಂಖ್ಯೆ_84 #ಕೆಳದಿ_ಅರಸರ_ನಿದಿ_ಕಾಯುತ್ತಿದ್ದ_ಬಬಿಯಾ_ಆತ್ಮಕ್ಕೆ_ಸದ್ಗತಿ_ದೊರೆಯಲಿ. #ಶಿವಮೊಗ್ಗ_ಜಿಲ್ಲೆಯ_ಆನಂದಪುರಂ_ಚಂಪಕ_ಸರಸ್ಸು_ಕೇರಳದ_ಕುಂಬಳೆ_ಸಮೀಪದ_ಅನಂತಪುರಕ್ಕೂ_ಇರುವ_ಸಂಬಂದ. #ಪುರಾತತ್ವ_ಇಲಾಖೆ_1993ರಲ್ಲಿ_ಕೆಳದಿ_ಅರಸರ_ನಿದಿಗಾಗಿ_ಸಂಶೋದನೆಗೆ_ಹಣ_ಬಿಡುಗಡೆ_ಮಾಡಿತ್ತು #ಈ_ಎರೆಡೂ_ಪ್ರದೇಶದಲ್ಲಿನ_ಹೆಸರು_ಆನಂದಪುರ, #ಕೆಂಪು_ಜಂಬಿಟ್ಟಿಗೆಯಲ್ಲಿ_ಕೊಳ_ನಿಮಾ೯ಣ_ಕೊಳದ_ಮಧ್ಯ_ದೇವಾಲಯದ_ಸಾಮ್ಯತೆ. #ಕುಂಬಳೆಯ_ಅನಂತಪುರದ_ಅನಂತಪದ್ಮನಾಭ_ದೇವಾಲಯದ_ಕೊಳದಲ್ಲಿನ_ಬಬಿಯಾ_ಎಂಬ_ಮೊಸಳೆ_ನಿನ್ನೆ_ಮರಣ_ಹೊಂದಿದೆ. #ಕೆಳದಿ_ಅರಸರ_ನಿದಿ_ಕಾಯುತ್ತಿದೆ_ಎಂಬ_ಪ್ರತೀತಿ_ಇದೆ.    ನಮ್ಮ ಜಿಲ್ಲೆಯ ಸಾಗರ ತಾಲ್ಲುಕಿನ ಕೆಳದಿ ಅರಸರು ಕೇರಳ ಕಾಸರಗೋಡು ತನಕ ಆಳ್ವಿಕೆ ಮಾಡಿದ್ದಾರೆ ಇವರ ಆಳ್ವಿಕೆಯ ಮತ್ತು ಅನೇಕ ವಿಚಾರಗಳ ಬಗ್ಗೆ ಸಂಶೋದನೆಗಳು ಆಗದೇ ಇರುವುದು ವಿಪಯಾ೯ಸ.  ಆನಂದಪುರಂನಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯ ಸ್ಮಾರಕವಾದ #ಚಂಪಕ_ಸರಸ್ಸು ನಿರ್ಮಾಣವಾಗಿ 400 ವರ್ಷಗಳಾಗುತ್ತಿದೆ ಆದರೆ ಈ ಸುಂದರ ಸ್ಮಾರಕ ಇನ್ನೂ ಪುರಾತತ್ವ ಇಲಾಖೆ ತನ್ನ ವಶಕ್ಕೆ ಪಡೆದಿಲ್ಲ ಮತ್ತು ಅದರ ಮಾಹಿತಿ ಕೂಡ ಸಂಗ್ರಹಿಸಿಲ್ಲ.   ರಾಜ ವೆಂಕಟಪ್ಪ ನಾಯಕ ಈಗಿನ ಸಾಗರ ಪಟ್ಟಣದ ನಿರ್ಮಾತೃ, ತನ್ನ ಅಜ್ಜ ಸದಾಶಿವ ನಾಯಕರ ಸ್ಮರಣೆಗಾಗಿ ಈ ಪಟ್ಟಣ, ಗಣಪತಿ ದೇವಾಲ...