ಗುಣಗಾ_ಸಮಾಜದ_ನನ್ನ_ಲೇಖನನಕ್ಕೆ
ಪ್ರತಿಕ್ರಿಯಿಸಿ_ಗೆಳೆಯರಾದ_ವಿಷ್ಣುದಾಸಗುಣಿಗಾ.
ಈವರೆಗಿನ ಯಾವ ಮಾಧ್ಯಮದಿಂದಲೂ ಆಗದ ಮ್ಯಾಜಿಕ್ ಸಾಮಾಜಿಕ ಜಾಲತಾಣದಿಂದ ಸಾಧ್ಯವಾಗುವುದು ನೋಡಿದರೆ ವಿಚಿತ್ರ ಅನ್ನಿಸುತ್ತೆ ಇದಕ್ಕೆ ಉದಾಹರಣೆ ನನ್ನ ಗುಣಗಾ ಸಮಾಜದ ಲೇಖನ ಆ ಸಮಾಜದ ಬರಹಗಾರರ ಜೊತೆ ಸಂಪರ್ಕ ಕಲ್ಪಿಸಿದೆ.
ಗೇರುಸೊಪ್ಪೆಯ ರಾಣಿ ಚೆನ್ನ ಬೈರಾದೇವಿ ಬಗ್ಗೆ ನಾನು ಬರೆದಿರುವ ಪುಸ್ತಕ ಇನ್ನೂ ಮುದ್ರಣಕ್ಕೆ ಕೊಟ್ಟಿಲ್ಲ ಆದರೆ ಆಗಾಗ್ಗೆ ಒಂದೊಂದು ಲೇಖನ ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತೇನೆ.
ಈ ರೀತಿ ನನ್ನ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸಿ ಗೆಳೆಯರಾದವರು ಕುಮಟಾದ #ವಿಷ್ಣು_ದಾಸ್_ಗುಣಗಾ ಇವರು ನಿವೃತ್ತ ಸರ್ಕಾರಿ ನೌಕರರು ಇವರು ತಮ್ಮದೇ ಗುಣಗಾ ಸಮಾಜದ ಬಗ್ಗೆ ಪುಸ್ತಕ ಒಂದನ್ನ ಬರೆದಿದ್ದಾರೆ ಅದನ್ನು ಸದ್ಯದಲ್ಲೇ ಪ್ರಕಟಿಸಲಿದ್ದಾರೆ ಬಹುಶಃ ಇದು ಗುಣಗಾ ಸಮಾಜದ ಮೊದಲ ಪುಸ್ತಕ ಆಗಲಿದೆ.
ಗೇರುಸೊಪ್ಪೆಯ ಜೈನ ಸಾಳ್ವ ರಾಜರ ಆಪ್ತವಲಯದ ಒಂದು ಸಣ್ಣ ಸಂಖ್ಯೆಯ ಸಮುದಾಯ ಜೈನ ಸಮಾಜದ ಅರ್ಚಕ ವೃತ್ತಿಯಲ್ಲಿ ಸಹಾಯಕರಾಗಿ ತೊಡಗಿ ನಂತರ ಜೈನರ ಆಚಾರ ವಿಚಾರಗಳನ್ನೆ ಪರಿಪಾಲಿಸಿಕೊಂಡು ಜೈನರೇ ಆದರೂ ಅವರಿಗೆ ಆಗಿನ ಕಾಲದ ಜೈನ ಸಮಾಜ ತನ್ನ ಧರ್ಮದಲ್ಲಿ ಯಾಕೆ ಸೇರಿಸಿಕೊಂಡಿಲ್ಲ ಎಂಬುದು ಸೋಜಿಗದ ವಿಷಯ ಆಗಿದೆ.
ರಾಜ್ಯವೇ ಸೋತು ಅಲ್ಲಿನ ರಾಣಿ ಚೆನ್ನ ಬೈರಾದೇವಿ ಕೆಳದಿ ರಾಜ ವೆಂಕಟಪ್ಪ ನಾಯಕರ ಸೆರೆ ಮನೆ ಸೇರಿ ನಂತರ ಸಲ್ಲೇಖನ ವೃತದಿಂದ ಮರಣ ಹೊಂದಿ ಇಕ್ಕೇರಿ ಸಮೀಪದ ಗೆಣಸಿನಕುಣಿಯಲ್ಲಿ ಸಮಾದಿ ಆಗಿದ್ದಾರೆ ಈಗ ಆ ಸಮಾದಿ ಸಿದ್ದೇಶ್ವರ ಗುಡಿ ಆಗಿದೆ.
ಈಗ ನಾಲ್ಕು ಶತಮಾನಗಳಲ್ಲಿ ಈ ಗುಣಿಗ ಸಮಾಜ ಏನಾಯಿತು, ಸಮಾಜದಲ್ಲಿ ಏನೆಲ್ಲ ರೂಪಾಂತರ ಆಯಿತು ಇತ್ಯಾದಿ ತುಂಬಾ ಕುತೂಹಲಕಾರಿ ಸಾಮಾಜಿಕ ಅಧ್ಯಯನದ ವಿಚಾರ ಆಗಿದೆ.
ಆಸಕ್ತರು ಗುಣಗ ಸಮಾಜದ ಬಗ್ಗೆ ಸಂಶೋಧನೆ ಮಾಡಬಹುದಾಗಿದೆ, ಪಿ ಹೆಚ್ ಡಿ ಮಾಡುವವರಿಗೆ ಇದು ಅತ್ಯುತ್ತಮ ವಿಷಯ ಆಗಲಿದೆ.
ನನ್ನ ಪುಸ್ತಕ ಅಚ್ಚಿಗೆ ಹೋಗುವ ಮೊದಲು ವಿಷ್ಣು ದಾಸ ಗುಣಗಾರನ್ನ ಒಮ್ಮೆ ಬೇಟಿ ಮಾಡಿ ಚರ್ಚಿಸಿ ನನ್ನ ಪುಸ್ತಕದ ಗುಣಗಾ ಸಮಾಜದ ಪುಟಗಳಲ್ಲಿ ಕೆಲವು ತಿದ್ದು ಪಡಿ ಮಾಡಲಿದ್ದೇನೆ.
ವಿಷ್ಣು ದಾಸ ಗುಣಗಾರ ಪುಸ್ತಕದಲ್ಲಿ ಅವರು ಬರೆದ ಒಂದು ಅದ್ಯಾಯ ಓದಿ...
#ಕುಂಠಿ #ಕಂತಿ_ಮಹಾಮಾಯಿ
ಬೆಂದಕಾಳೂರು ಬೆಂಗಳೂರಾದುದ್ದು, ನಮ್ಮ ಪವಿತ್ರ ಗಂಗಾ ನದಿ ಗ್ಯಾಂಜಸ್ ಅದುದ್ದು, ಹೋಗಲಿ ನಮ್ಮ ಭಾರತವೇ ಇಂಡಿಯಾ ಅದುದ್ದು ಎಲ್ಲರಿಗೂ ಗೊತ್ತಿದ್ದುದ್ದೇ ಆದರೆ ದೇವರೂ ಹೀಗೆ ಅದರೆ!
ಕಾರವಾರದ ಹೃದಯ ಭಾಗದಲ್ಲಿರುವ ಮಾಲಾದೇವಿ ಕ್ರೀಡಾಂಗಣದಲ್ಲಿ ಆದಿ ವಂದಿತ #ಜೈನ_ಮಾಲಾದೇವಿ_ದೇವಸ್ಥಾನ ಇರುವದು ಎಲ್ಲರಿಗೂ ಗೊತ್ತಿದ್ದುದೇ.
ಈ ಶಕ್ತಿ ದೇವಿಯ ದೇವಸ್ತಾನದ ಎಡಗಡೆ ರಸ್ತೆಯಿಂದ ಸುಮಾರು ಮುನ್ನೂರು ಮೀಟರ್ ಪೂರ್ವಕ್ಕೆ ನಡೆದರೆ ಮತ್ತೊಂದು ಶಕ್ತಿ ದೇವಿ ದೇವಸ್ತಾನ ಎದುರಾಗುತ್ತದೆ.
ಅದೇ #ಕುಂಠಿ_ದೇವಸ್ತಾನ ಈ ಮಹಾಮಾಯಿ ದೇವಿಯ ಅರ್ಚಕರೂ ಗುಣಗರೇ ಈ ದೇವಿಯ ದೇವಸ್ತಾನಕ್ಕೆ ಹೋದಾಗಲೆಲ್ಲ ಅನೇಕರಿಗೆ ಕಾಡುವ ಪ್ರಶ್ನೆ ಈ ದೇವಿಯನ್ನು ಕುಂಠಿ ಎಂದು ಯಾಕೆ ಕರೆಯುತ್ತಾರೆ?..
ಅಲ್ಲಿ ಇಲ್ಲಿ ವಿಚಾರಿಸಿದಾಗ ತಿಳಿದಿದ್ದು ಇಲ್ಲಿ ಮಾತ್ರ ಅಲ್ಲ ಅಮದಳ್ಳಿ, ಅಲಗೇರಿ ಹಾಗು ಇನ್ನು ಕೆಲವಡೆ ಈ ದೇವಿಯ ದೇವಸ್ತಾನ ಇದೆ ಮತ್ತು ಅಲ್ಲಿಯೂ ಅರ್ಚಕರು ಗುಣಗಾ ಜಾತಿಗೆ ಸೇರಿದವರು ಎಂದು .
ಆದರೆ ಇಲ್ಲಿ ವಿಷಯ ಅದಲ್ಲ ಕಾರವಾರದಿಂದ ಅಮದಳ್ಳಿ ದಾಟಿ, ಅಂಕೋಲಾ ಸೀಮೆ ಬಂದಂತೆ ಈ ಕುಂಠಿ ದೇವಿ ಕುಂಬಾರ ಕುಂಠಿಯಾಗುತ್ತಾಳೆ.
ಹಾಗಾದರೆ ಕುಂಠಿ ಮಹಾಮಾಯಿಗೆ ಕುಂಬಾರ ವಿಶೇಷಣ ಎಲ್ಲಿಂದ ಬಂದು ಸೇರಿತು? ಗುಣಗನಿಗೇ ಕೇಳೋಣವೆಂದು ಗುಣಗನಿಗೆ ಕೇಳಿದರೆ ಅವನಿಗೆ ಏನೂ ಗೊತ್ತಿರಲಿಲ್ಲ.
ಗುಣಗನ ಹತ್ತಿರ ಉತ್ತರವಿಲ್ಲವೆಂದು ತಿಳಿದು ನಾನೇ ಜಾಲಾಡಿ ತಿಳಿದವರನ್ನು ಕೇಳಿ, ಕೂಲಂಕಶ ವಿಮರ್ಶೆ ಮಾಡಿದಾಗ ಸಿಕ್ಕ ಉತ್ತರ ಕೇಳಿ ನಾನು ಕಂಗಾಲಾಗುವುದೊಂದೇ ಬಾಕಿ.
ಕೇಳಿ ಉತ್ತರ ಅದರ ಪ್ರಕಾರ ಕಂತಿಯ ಅಪಬ್ರಂಶ ಕುಂಠಿ, ಕುಂಬಾರ ಕುಂಠಿ ಹಾಗಾದರೆ ಕಂತಿ ಎಂದರೇನು? #ಕಂತಿ ಎಂದರೆ A female Jaina Ascetic . ಅಂದರೆ ಜೈನ್ ಸಾದ್ವಿ.
ಜೈನರಲ್ಲಿ ಮಹಿಳೆಯರು ಸಾದ್ವಿಗಳಾಗಿ ನಂತರ ಅಮರತ್ವವನ್ನು ಪಡೆದಾಗ ಅವರನ್ನು ಕಂತಿ ಎನ್ನಲಾಗುತ್ತದೆ ಮತ್ತು ಅವರಿಗೆ ದೇವಿಯ ಸ್ಥಾನವನ್ನು ಕೊಡಲಾಗುತ್ತದೆ.
ಇದೇ ಕಂತಿ ಹೆಸರು ಕಾಲಕ್ರಮೇಣ ಅಪಬ್ರಂಶಗೊಂಡು ಕುಂಠಿಯಾಗಿರಬಹುದಾದ ಸಾಧ್ಯತೆ ಇದೆ? ಹಾಗಾದರೆ ಕುಂಠಿ ಕುಂಬಾರ ಕುಂಠಿ ಹೇಗಾದಳು?...
ಕೆಲವು ಕಿಡಿಗೇಡಿಗಳು ಇಲ್ಲಿ ಮಜಾ ತೆಗೆದುಕೊಂಡಿರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.
ಗುಣಗ ಇಲ್ಲಿ ಕುಂಠಿ ದೇವಿಯ ಅರ್ಚಕ,ದೇವಿ ಮಡಕೆ ಮಾಡದಿದ್ದರೂ ಅರ್ಚಕನು ಹೊಟ್ಟೆಪಾಡಿಗಾಗಿ ಕೈಕೊಂಡ ಅರೆಕಾಲಿಕ ಕುಂಬಾರಿಕಾ ವೃತ್ತಿಯ ಕಾರಣ ದೇವಿಯನ್ನೇ ಕುಂಬಾರ ಕುಂಠಿಯನ್ನಾಗಿ ಮಾಡಿರಲೂಬಹುದು?.
ಕೆಲವು ಕಡೆ ಕುಂಬಾರ ಜಟಕಾ (ಯಕ್ಷ)ಗಳೂ ಇವೆಯಂತೆ.
ಇನ್ನೊಂದು ವಿಷಯ ಏನೆಂದರೆ ಕಾರವಾರದ ಕುಂಠಿ ಮಹಾಮಾಯಿಯ ಆವಾರದಲ್ಲಿ ಬೊಮ್ಮಯ್ಯ ದೇವರಿದೆ.
ಬೊಮ್ಮಯ್ಯ ದೇವರು ಯಾರು? ಏನು? ಎಂತೆಲ್ಲಾ ಈ ಮೊದಲು ವಿವರಿಸಲಾಗಿದೆ ಇದು ಜೈನ ದೇವರು ಎನ್ನುವ ಬಗ್ಗೆ ವಿವಾದಗಳಿಲ್ಲ.
ಇದು ಕುಂಠಿ ಮಹಾಮಾಯಿಯೊಟ್ಟಿಗೆ ಇದೆ ಎಂದಮೇಲೆ ಕುಂಠಿದೇವಿ ಜೈನದೇವಿಯೇ ಇರಬೇಕು ಎಂಬುದು ಇನ್ನಷ್ಟು ಖಚಿತವಾಗುತ್ತದೆ.
ಶ್ರೀ ಶ್ಯಾಮಸುಂದರ ಗೌಡ ಅವರು ʼಉತ್ತರ ಕನ್ನಡದ ಜಿಲ್ಲೆಯ ಶಾಸನೋಕ್ತ ಮಹಿಳೆಯರು” (ಲೋಕ ಧ್ವನಿ, ಮಾರ್ಚ ೮, ೨೦೨೩ ಪುಟ: ೪) ಎಂಬ ತಮ್ಮ ಪ್ರಭುದ್ದ ಲೇಖನದಲ್ಲಿ ಕಂತಿಯರ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಗುಂಡಬಾಳದ ಮೂಲ ಸಂಘ ಸೂರಸ್ಥಗಣದ ಹೈವಲದೇವಿ, ಕುಮಟಾದ ಕಾಣುರಗಣದ ಕಂಚಲಾದೇವಿ, ಶಾಂತಲೆ, ಅಂಕೋಲೆಯ ಮೂಲಸಂಘದ ಪದುಮಲಾದೇವಿ , ಓಂಸ್ಸಳ್ಳಿಯ ಕೋಟಿಯಬ್ಬೆ (ಕ್ರಿ.ಶ. ೧೩೨೫), ಗೇರುಸೊಪ್ಪೆಯ ರಾಮಕ್ಕ (ಕ್ರಿ.ಶ ೧೩೯೨), ಶಾಂತಲೆ (ಕ್ರಿ.ಶ. ೧೪೦೫), ಭಟ್ಕಳದ ಬೈರಾದೇವಿ ಮೊದಲಾದ ಸ್ತ್ರೀಯರು ಜೈನ ಕಂತಿಯರು ಅಥವಾ ಆರ್ಯಿಕೆಯರಾಗಿದ್ದರು ಎನ್ನುವ ಅಂಶ ಶಾಸನಗಳಿಂದ ತಿಳಿಯುತ್ತದೆ ಎನ್ನುತ್ತಾರೆ.
ಅವರು ಮುಂದುವರಿದು ಕಂತಿಯರು ಅಥವಾ ಆರ್ಯಿಕೆಯರೆಂದರೆ ಜೈನ ಸಮಾಜದಲ್ಲಿ ಸಂಸಾರದಲ್ಲಿದ್ದು ಅಥವಾ ಸನ್ಯಾಸ ಸ್ವೀಕರಸಿ ಧರ್ಮಶ್ರದ್ಧೆಯ ದೀಕ್ಷೆತೊಟ್ಟ ಅಥವಾ ಧರ್ಮ ಪ್ರಸಾರದ ಹೊಣೆಹೊತ್ತ ಶ್ರಾವಕಿಯರು. ಈ ಕಂತಿಯರ ವಿದ್ವತ್ತಿನ ಕುರಿತು ಸ್ಪಷ್ಟವಾದ ಮಾಹಿತಿಗಳು ದೊರೆಯದಿದ್ದರೂ ಅವರ ಹೆಸರೊಟ್ಟಿಗಿರುವ ವಿಶೇಷಣಗಳು ಅವರು ವಿದ್ವತ್ಮಣಿಗಳಾಗಿದ್ದರು ಎನ್ನುವ ಸೂಚನೆಯನ್ನಂತೂ ನೀಡುತ್ತವೆ ಎನ್ನುತ್ತಾರೆ ಶ್ರೀ ಶ್ಯಾಮಸುಂದರ ಗೌಡ.
ವಿಷ್ಣು ದಾಸ ಗುಣಗರು ಅದ್ಬುತ ಬರಹಗಾರರು ಹೌದು.
ಗುಣಿಗಾ ಸಮುದಾಯದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದವರು ಅವರನ್ನ ಸಂಪರ್ಕಿಸ ಬಹುದಾಗಿದೆ ಅವರ ಸೆಲ್ ನಂಬರ್ ಕಾಮೆಂಟ್ ಬಾಕ್ಸ್ ನಲ್ಲಿದೆ.
#gunuga #jainism #kumata #vishnudasgunaga #ankola #keladi #gerusoppe #chennabyradevi
Comments
Post a Comment