#ಹಾರನಳ್ಳಿ ಕಳ್ಳ ಬುಡನ್ ಎಂಬ ಕುಖ್ಯಾತ ದರೋಡೆಕೋರ ಈ ಭಾಗದಲ್ಲಿ ಒಂದು ದಶಕ ಜನಸಾಮಾನ್ಯರು ಬೀತಿಯಿ೦ದ ಜೀವನ ಮಾಡುವಂತೆ ಮಾಡಿದ್ದ#
#ವೀರಪ್ಪನ್ ಕನಾ೯ಟಕ ತಮಿಳುನಾಡಿಗೆ ತಲೆನೋವಾದಂತೆ 70ರ ದಶಕದಲ್ಲಿ ಶಿಕಾರಿಪುರ, ಕುಂಸಿ ಅಯನೂರು ಬಾಗದಲ್ಲಿ ಬುಡೆನ್ ಸಾಬ್ ಜನರಿಗೆ ಪೋಲಿಸರಿಗೆ ದೊಡ್ಡ ಸಮಸ್ಯೆ ಆಗಿದ್ದ# ಹಾರನಳ್ಳಿಯ ಬುಡನ್ ಸಾಬ್ ಕುಂಸಿ ಅಯನೂರು ಮತ್ತು ಶಿಕಾರಿಪುರದ ಜನ ಸಾಮಾನ್ಯರನ್ನ ಸುಮಾರು 10 ವಷ೯ ಕಾಲ ಬೀತಿಯಿ೦ದ ಇರುವಂತೆ ಮಾಡಿದ್ದ, ಆತ ಕಳ್ಳತನ ಮಾಡುತ್ತೇನೆ ಅಂದ ಮನೆ ಕಳ್ಳತನ ಮಾಡಿನೇ ಸಿದ್ದ ಎಂಬ ಪ್ರತೀತಿ. ಹಗಲಿನಲ್ಲಿ ಬುಡನ್ ಸಾಬ್ ಈ ಕಾಡಿನಲ್ಲಿ ಕ೦ಡಿದ್ದ ಎಂದರೆ ವಾರಗಟ್ಟಲೆ ಆ ಕಾಡಿಗೆ ಕಟ್ಟಿಗೆ ತರಲು ಹೋಗುವ ದೈಯ೯ ಯಾರೂ ಮಾಡುತ್ತಿರಲಿಲ್ಲ. ಕಟ್ಟುಮಸ್ತು ದೇಹದ ಬುಡನ್ ಸಾಬ್ ಕಳ್ಳ ಬುಡನ್ ಅಂತಲೇ ಕುಖ್ಯಾತಿ ಪಡೆದಿದ್ದ ಏನೇ ಮಾಡಿದರು ಪೋಲಿಸರಿಗೆ ಅವನನ್ನ ಬಂದಿಸಲಾಗದಿದ್ದದ್ದು ಮತ್ತು ಅವನ ತಡೆ ರಹಿತ ಕಳ್ಳತನ ದರೋಡೆಗಳಿOದ ಶಿಕಾರಿಪುರ, ಕುಂಸಿ ಮತ್ತು ಅಯನೂರಿನ ಸುತ್ತ ಮುತ್ತ ನೂರಾರು ಹಳ್ಳಿಗಳು ಭಯದಿಂದ ಜೀವನ ಸಾಗಿಸುತ್ತಿದ್ದ೦ತು ಸತ್ಯ. ನಂತರ ಪೋಲಿಸರು ಈತನನ್ನ ಬಂದಿಸಿ ಜೈಲಿಗೆ ಕಳಿಸಿದ ನಂತರ ಇದು ನಿಂತಿತು, ಬುಡನ್ ಸಾಬ್ ನಂತರ ಮನ ಪರಿವತ೯ನೆಗೊಂಡು ರೈತರ ಜಮೀನಿನಲ್ಲಿ ನಾಟಿ ಕೊಯ್ಲು ಗುತ್ತಿಗೆ ಕೆಲಸ ಮಾಡುತ್ತಿದ್ದರು, ಅವರ ನಂತರ ಇವರ ಕುಖ್ಯಾತಿಗೆ ನೊಂದಿದ ಕುಟುಂಬ ಬೇರೆ ಕಡೆ ವಲಸೆ ಹೋದರು ಅಂತ ಸುದ್ದಿ ಇತ್ತು. ಮೊನ್ನೆ ಹಾರನಳ್ಳಿಯ ಗೆಳೆಯರು ಬಂದಿದ್ದರು ಅವರ ಹತ್ತಿರ ಬುಡನ್...