Blog number 876, ಹಿಂಸೆಗೆ ತಿರುಗಿದ ಕೆರೆ ಬೇಟೆ, ಜಿಲ್ಲಾಡಳಿತ ಇದಕ್ಕೊಂದು ನಿಯಮ ಗೊತ್ತುಪಡಿಸಬೇಕು, ಆಯೋಜಕರೂ ಕೆರೆ ವಿಸ್ತಿರ್ಣ ಮತ್ತು ಕೆರೆಯಲ್ಲಿ ಸಿಗಬಹುದಾದ ಮೀನಿನ ಪ್ರಾಮಾಣ ನೋಡಿ ಪ್ರವೇಶ ಮಿತಿಗೊಳಿಸಬೇಕು.
#ಹಿಂಸಾಚಾರಕ್ಕೆ_ತಿರುಗಿದ_ಕೆರೆಬೇಟೆ #ಜಿಲ್ಲಾಡಳಿತ_ಇದಕ್ಕೊಂದು_ನಿಯಮ_ಗೊತ್ತು_ಮಾಡಬೇಕು. #ಪೋಲಿಸರ_ಅನುಮತಿ_ಜೊತೆಗೆ_ಕೆರೆಬೇಟೆಗೆ_ನಿರ್ದಿಷ್ಟ_ಜನರಿಗೆ_ಮಾತ್ರ_ಅವಕಾಶ_ನೀಡಬೇಕು. ನನ್ನ ಮನೆ ಕೆರೆ ಅಂಚಿನಲ್ಲಿದೆ ಆದ್ದರಿಂದ ಕೆರೆಯ ಮೀನು ಶಿಕಾರಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವಂತಾಯಿತು. ಮೀನು ಶಿಕಾರಿಗೆ ಬೇಕಾದ ಏಕಾಗ್ರತೆ ಮತ್ತು ತಾಳ್ಮೆ ಇಲ್ಲದಿದ್ದರೆ ಮೀನು ಸಿಗುವುದು ದೂರದ ಮಾತು. ಮೀನುಗಾರಿಕಾ ಇಲಾಖೆ/ ಗ್ರಾಮ ಪಂಚಾಯತ್ ಗಳು ಕೆರೆಗಳನ್ನು ಹರಾಜು ಮಾಡಿ ಆದಾಯ ಪಡೆಯಲು ಶುರು ಮಾಡಿದ ಮೇಲೆ ಹರಾಜು ಹಿಡಿದವ ತಾನು ವಿನಿಯೋಗಿಸಿದ ಬಂಡವಾಳದ ಮೇಲೆ ಲಾಭ ಪಡೆಯಲು ಈ ಕೆರೆ ಬೇಟೆ ಎಂಬ ಕ್ರೀಡೆಯಂತಹ ಮೀನು ಶಿಕಾರಿಗೆ ಖದರು ಬಂತು. 40-50 ವರ್ಷದ ಹಿಂದೆ 50 ರಿಂದ 100 ಕೂಣಿ (ಮೀನು ಹಿಡಿಯುವ ಬಿದಿರಿನ ಸಾದನ ) ಬಂದರೆ ಹೆಚ್ಚು, 40 ಎಕರೆ ವಿಸ್ತಿರ್ಣದ ಕೆರೆಯಲ್ಲಿ ನೂರು ಜನರಿಗೆ ಯಥೇಚ್ಚ ಮೀನು ಸಿಗುತ್ತಿತ್ತು ಆಗೆಲ್ಲ ಕೆರೆ ಬೇಟೆಗೆ ಕೂಣಿಗೆ 1ರೂಪಾಯಿ ಅಥವ 2 ರೂಪಾಯಿ ಇರುತ್ತಿತ್ತು ಆದರೆ ಆ ಕಾಲದಲ್ಲಿ ಇದು ದುಬಾರಿ ಅಂತ ಬೇಟೆಗಾರರು ತಗಾದೆ ತೆಗೆಯುತ್ತಿದ್ದರು. ಆ ಕಾಲದಲ್ಲಿ ಕೆರೆಯಲ್ಲಿ ಸಿಗುತ್ತಿದ್ದ ಕುಚ್ಚು, ಮುರುಗೋಡು ಮತ್ತು ಚೇಳಿ ಮೀನಿನ ತಳಿಗಳು ಈಗ ಇಲ್ಲವೇ ಇಲ್ಲ. ನಿನ್ನೆ ಪಕ್ಕದ ಸಿದ್ದಾಪುರ ತಾಲ್ಲೂಕಿನ ಕಾನಗೋಡಿನ ಕೆರೆ ಬೇಟೆ ಸದರಿ ಕೆ...