#ಅತ್ಯುತ್ತಮ_ಅಂಕಗಳೊಂದಿಗೆ_ಪದವಿ_ಶಿಕ್ಷಣ_ಪೂರೈಸಿದ #ನಮ್ಮೂರ_ಕಿರಿಯ_ಪತ್ರಕರ್ತ_ಸಾಹಿತಿ #ಅಮಿತ್_ದಾಸಕೊಪ್ಪ_ಇವರಿಗೆ_ಅಭಿನಂದನೆಗಳು #Bachulararts #Amithdasakoppa #Writer #Reporter #Anandapuram ಅಮಿತ್ ದಾಸಕೊಪ್ಪ ನಮ್ಮ ಊರಿನ ಕಿರಿಯ ಪತ್ರಕರ್ತ ಮತ್ತು ಸಾಹಿತಿ, ಈಗಾಗಲೇ ಇವರು ನೂರಕ್ಕೂ ಹೆಚ್ಚು ಕವನಗಳನ್ನ ಬರೆದಿದ್ದಾರೆ ಅನೇಕ ವೈಚಾರಿಕ ಲೇಖನ ಪ್ರಕಟಿಸಿದ್ದಾರೆ. ಅನೇಕ ಪತ್ರಿಕೆಗಳಿಗೆ ಪ್ರಿಲ್ಯಾನ್ಸ್ ವರದಿಗಾರರಾಗಿದ್ದಾರೆ, ಇವರದೇ #Amith_Times ಎಂಬ ನ್ಯೂಸ್ ವೆಬ್ ಚಾನಲ್ ಇದೆ, ಜಿಲ್ಲಾ ಪತ್ರಿಕೆ #ಎಚ್ಚರಿಕೆ ದಿನಪತ್ರಿಕೆ ವರದಿಗಾರರಾಗಿದ್ದಾರೆ ಮತ್ತು #ಹಾಯ್_ಬೆಂಗಳೂರು ಪತ್ರಿಕೆ ವಿತರಕರಾಗಿದ್ದಾರೆ. ಆಯ್ದ ಪುಸ್ತಕಗಳನ್ನ ಹುಡುಕಿ ಓದುತ್ತಾರೆ ನನ್ನ ಸಂಗ್ರಹದ ಪುಸ್ತಕ ಒಯ್ದು ಓದಿ ವಾಪಾಸು ಮಾಡಿ ಅದರ ತಿರಳು ಚರ್ಚಿಸುತ್ತಾರೆ ಇವರ ಈ ಹವ್ಯಾಸ ನನಗೆ ಇವರ ಬಗ್ಗೆ ವಿಶೇಷ ಅಭಿಮಾನಕ್ಕೆ ಕಾರಣ. ಚಿಕ್ಕವನಿದ್ದಾಗಲೇ ತಂದೆ ಆತ್ಮಹತ್ಯೆ ನಂತರ ಕುಟುಂಬದ ಆರ್ಥಿಕ ಸಂಕಷ್ಟಗಳು - ಅವಮಾನಗಳು ಈ ಯುವಕನಿಗೆ ಪರಿಸ್ಥಿತಿ ಎದುರಿಸುವ ಛಲಗಾರಿಕೆ ನೀಡಿದೆ. ತಮ್ಮ BA ವ್ಯಾಸಂಗದ ಜೊತೆ ಇದೆಲ್ಲ ಇವರ ಹವ್ಯಾಸ ಆಗಿತ್ತು, ಈ ಹವ್ಯಾಸಗಳು ಇವರ ಓದಿಗೆ ಯಾವುದೇ ಅಡೆ ತಡೆ ಆಗಲಿಲ್ಲ ಅನ್ನುವುದಕ್ಕೆ ಮೊನ್ನೆ ಇವರ ಬಿ.ಎ. ಪದವಿ ಅಂಕ ಪಟ್ಟಿ ಸಾಕ್ಷಿ ಆಗಿದೆ. ಈಗ ಜರ...