Skip to main content

Posts

Showing posts with the label Grand inauguration ceremony of St Judas Church of Yadehalli ANANDAPURAM

Blog number 2053 ನಮ್ಮೂರ ಕ್ರೈಸ್ತರ ನೂತನ ಸಂತ ಜೂದರ ದೇವಾಲಯ ಲೋಕಾರ್ಪಣೆ

#ನಮ್ಮ_ಊರಿನ_ಸಂತ_ಜೂದರ_ದೇವಾಲಯ_ನಾಳೆ_ಲೋಕಾರ್ಪಣೆ. #ನನ್ನ_ಬಾಲ್ಯದಿಂದ_ನೋಡಿದ್ದ_ಈಗ_ಅಗಲಿರುವ_ನಮ್ಮ_ಊರಿನ_ಕ್ರೈಸ್ತರ_ನೆನಪುಗಳು. #ಯುಗಾದಿ_ರಂಜಾನ್_ಚರ್ಚ್_ಲೋಕಾರ್ಪಣೆ_ಒಂದೇ_ದಿನ_ಆಚರಣೆಯಲ್ಲಿದೆ #ಇದೇ_ಮೊದಲು_ಮುಂದೆ_ಇನ್ಯಾವಗಲೊ_ಗೊತ್ತಿಲ್ಲ   1970ರಲ್ಲಿ ನಮ್ಮ ಯಡೇಹಳ್ಳಿ (ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಒಂದು ಗ್ರಾಮ) ಯಲ್ಲಿ ಯಾವುದೇ ಮಸೀದಿ ಅಥವ ದೇವಸ್ಥಾನ ಇರಲಿಲ್ಲ ಆಗ ಇದ್ದ ಪ್ರಾರ್ಥನಾಲಯ ಕ್ರೈಸ್ತರ ಚರ್ಚ್ ಮಾತ್ರ.   ಈಗ ಎರೆಡು ಚರ್ಚ್, ಒಂದು ಮಸೀದಿ ಮತ್ತು ಒಂದು ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯ ನಮ್ಮ ಊರಲ್ಲಿದೆ.   ಆಗ ನಮ್ಮ ಊರಲ್ಲಿನ ಜನ ಸಂಖ್ಯೆ ಮತ್ತು ಮನೆಗಳು ಕ್ರೈಸ್ತ ಧರ್ಮದವರದ್ದೇ ಜಾಸ್ತಿ ಅವರ ನಂತರ ಮುಸ್ಲಿಂ ಸಮುದಾಯ ಕೊನೆಯದಾಗಿ ಹಿಂದೂ ಧರ್ಮಿಯರು ಇದ್ದರು.   ಈಗ ಅತಿ ಹೆಚ್ಚು ಜನ ಸಂಖ್ಯೆ ಹಿಂದುಗಳದ್ದು ನಂತರದ್ದು ಮುಸ್ಲಿಂ ಸಮುದಾಯ ಮತ್ತು ಕೊನೆಯವರು ಕ್ರೈಸ್ತರಾಗಿದ್ದಾರೆ.   ಅತ್ಯಂತ ಕಡಿಮೆ ಜನ ಸಂಖ್ಯೆಯ ಕ್ರೈಸ್ತ ಸಮುದಾಯ ನಿರ್ಮಿಸಿರುವ ಸುಂದರವಾದ ಬೃಹತ್ ಚರ್ಚ್ ಸಂತ ಜೂದರ ದೇವಾಲಯ ಇಡೀ ಆನಂದಪುರಂಗೆ ಭೂಷಣವಾಗಿದೆ.   ಈ ಸಂದರ್ಭದಲ್ಲಿ ನಮ್ಮನ್ನು ಅಗಲಿ ಕ್ರಿಸ್ತ ಪಾದ ಸೇರಿರುವ ನಮ್ಮ ಊರಿನವರನ್ನ ಸ್ಮರಿಸೋಣ.   ಕ್ರೈಸ್ತ ಸಮುದಾಯದ ಆ ಕಾಲದ ಶ್ರೀಮಂತರಾಗಿದ್ದ ಗಾರ್ಡರಜ್ಜಿ, ಇವರ ಸಾಕು ಮಗ ಜಾನ್ ಡಿಸೋಜ, ಇವರ ಮನೆ ಎದುರಿನ ಕ...