Skip to main content

Posts

Showing posts with the label Doctorate of Vijayanagara Sri Krishna devaraya University honoured to Shimoga Hirehal Imrahim saheb

Blog number 1665. ವಿಜಯನಗರದ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಿಂದ ಮರಣೋತ್ತರ ಗೌರವ ಡಾಕ್ಟರೇಟ್ ಪುರಸ್ಕಾರ ಸಾಹಿತ್ಯ ಪೋಷಕರಾಗಿದ್ದ ಶಿವಮೊಗ್ಗದ ಹಿರೇಹಾಳ ಇಬ್ರಾಹಿಂ ಸಾಹೇಬರಿಗೆ.

#ಶಿವಮೊಗ್ಗದ_ದಿವಂಗತ_ಹಿರೇಹಾಳ_ಇಬ್ರಾಹಿಂ_ಸಾಹೇಬರಿಗೆ_ಡಾಕ್ಟರೇಟ್. #ವಿಜಯನಗರ_ಕೃಷ್ಣದೇವರಾಯ_ವಿಶ್ವವಿದ್ಯಾಲಯದಿಂದ_ಮರಣೋತ್ತರ_ಡಾಕ್ಟರೇಟ್ #ಕನ್ನಡ_ಸಾಹಿತ್ಯ_ಲೋಕದ_ಮಹಾನ್_ಪೋಷಕರು #ಇಸ್ಲಾಂನ_ಪ್ರವಚನ_ಕನ್ನಡಕ್ಕೆ_ಅನುವಾದಿಸಿದವರು #ಶಿವಮೊಗ್ಗದ_ಪ್ರತಿಷ್ಟಿತ_ಕರ್ನಾಟಕ_ಸಂಘದ_ಉಪಾಧ್ಯಕ್ಷರಾಗಿದ್ದರು. #ಆ_ಕಾಲದಲ್ಲಿ_ಬಿವಿ_ಕಾರಂತರ_ಹಯವದನ_ನಾಟಕಕ್ಕೆ_ಪ್ರಾಯೋಜಕತ್ವ_ನೀಡಿದವರು.    ನಾಡಿನ ಪ್ರಖ್ಯಾತ ಕವಿಗಳಾದ "ಮುನಿಸು ತರವೇ ಮುಗುದೇ.. ಹಿತವಾಗಿ ನಗಲೂ ಬಾರದೇ " ಪ್ರಸಿದ್ಧ ಹಾಡು ಬರೆದ ಸುಬ್ರಾಯ ಚೊಕ್ಕಾಡಿ ಅವರು ಕೆಲ ದಿನದ ಹಿಂದೆ ಶಿವಮೊಗ್ಗದ ಹಿರೇಹಾಳ ಇಬ್ರಾಹಿಂ ಸಾಹೇಬರ ನೆನಪಿಸಿಕೊಂಡಿದ್ದರು, ಇಬ್ರಾಹಿಂ ಸಾಹೇಬರ ಆಹ್ವಾನದ ಮೇಲೆ ಶಿವಮೊಗ್ಗಕ್ಕೆ ಬಂದಿದ್ದಾಗಿ ಅವರ ಅತಿಥ್ಯ ಸ್ವೀಕರಿಸಿದ ಬಗ್ಗೆ ತಿಳಿಸಿದ್ದರು.    ಇವತ್ತು ಅವರೇ ಹಿರೇಹಾಳ ಇಬ್ರಾಹಿಂ ಸಾಹೇಬರಿಗೆ ಮರಣೋತ್ತರ ಡಾಕ್ಟರೇಟ್ ವಿಜಯನಗರದ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಇವತ್ತು (13 ಜುಲೈ 2023) ತನ್ನ 11ನೇ ಘಟಿಕೋತ್ಸವದಲ್ಲಿ ಹಿಂದೂಸ್ಥಾನಿ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಮತ್ತು ರಾಯಚೂರಿನ ಪ್ರಗತಿ ಪರ ರೈತ ಮಹಿಳೆ ಕವಿತಾ ಮಿಶ್ರರಿಗೂ ನೀಡಿ ಗೌರವಿಸುವ ಪ್ರಕಟನೆ ಮಾಹಿತಿ ಅವರು ಇವತ್ತಿನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬಗ್ಗೆ ತಿಳಿಸಿದರು.   ಹಿರೇಹಾಳ ಇಬ್ರಾಹಿಂ ಸಾಹೇಬರ ಬಗ್ಗೆ ಕನ್ನಡ ಸಾಹಿತ್ಯ ...