ಸಾಗರ ತಾಲ್ಲೂಕಿನ ಒಂದು ನೇಗಿಲ ಕಥೆ, ಸಾವಿರಾರು ಕೋಟಿ ಹಗರಣ ಬಯಲಾಗಿ 7 ಜನ ಕೃಷಿ ಅಧಿಕಾರಿಗಳನ್ನು ಆಗಿನ ಕೃಷಿ ಸಚಿವ ಬೈರೇಗೌಡರು ಜೈಲು ಸೇರಿಸಿದ ಪ್ರಕರಣ.
ಆಗಿನ ಸರ್ಕಾರದ ಭೂ ಸಾರ ಸಂರಕ್ಷಣ ಇಲಾಖೆಯನ್ನೇ ರದ್ದು ಮಾಡುವಂತ ಭ್ರಷ್ಟಾಚಾರ ಬಯಲು ಮಾಡಿದ ಸಾಗರದ ನೇಗಿಲಿನ ಕಥೆ. ಮೊನ್ನೆ ಮಿತ್ರರಾದ ನಾಗೇ೦ದ್ರ ಸಾಗರ್ ಈ ಹೋರಾಟ ಉಲ್ಲೇಖಿಸಿ ಆವನಿಹಳ್ಳಿ ನೇಗಿಲು ಬಗ್ಗೆ ಬರೆದಿದ್ದರು ಆಗ ನೆನಪಾಗಿ ಈ ದೀಘ೯ ಲೇಖನ ಬರೆಯಬೇಕಾಯಿತು. ಸಕಾ೯ರದ ಕೃಷಿ ಇಲಾಖೆಯ ಸಾವಿರಾರು ಕೋಟಿ ಹಣದ ಲೂಟಿ ಬಯಲಾದ ನನ್ನ ಹೋರಾಟ. ಹೊಸದಾಗಿ ಜಿಲ್ಲಾ ಪಂಚಾಯತ ಸದಸ್ಯನಾದ ಹುಮ್ಮಸ್ಸು, ಗ್ರಾಮ ಪಂಚಾಯತನಲ್ಲಿ ಉಪಾಧ್ಯಕ್ಷನಾಗಿದ್ದಾಗ ರಾಜ್ಯದ ಮೊದಲ ಬಗರ ಹುಕುಂ ಹಕ್ಕು ಪತ್ರ ವಿತರಣೆಗೆ ಕಾರಣ ಕತ೯ನಾಗಿ ಕಾಗೋಡು ತಿಮ್ಮಪ್ಪರಿಂದ ಸದಾ ಹೊಗಳಿಕೆಗಳಿಂದ ನನ್ನ ಕಾಲು ನೆಲದ ಮೇಲೆ ಇರಲಿಲ್ಲ. ಇದೇ ಸಂದಭ೯ದಲ್ಲಿ ಕಾಗೋಡು ಜೊತೆ ಹಳ್ಳಿ ಬೇಟೆಗಳಲ್ಲಿ ಎಲ್ಲಿ ಹೋದರೂ ಕೃಷಿ ಇಲಾಖೆ, ಭೂ ಸಾರ ಸಂರಕ್ಷಣಾ ಇಲಾಖೆಯ ಮೇಲೆ ರೈತರ ದೂರು ಆದರೆ ಸ್ಥಳಿಯ ಪಕ್ಷದ ಮುಖಂಡರು ಮಾತ್ರ ಕಾಗೋಡು ಹತ್ತಿರ ದೂರು ನೀಡಿದವರ ಮೇಲೆಯೇ ಆಪಾದನೆ ಮಾಡಿ ಇದು ಸುಳ್ಳು ಎನ್ನುತ್ತಿದ್ದರು. ಒಂದು ದಿನಾ ಆಚಾಪುರ ಗ್ರಾಮ ಪಂಚಾಯತ ಭೇಟಿಯಲ್ಲಿ ಪುನಃ ಇದೇ ವಿಚಾರ ಮರುಕಳಿಸಿದಾಗ ಕಾಗೋಡು ನನಗೆ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಬೇಗ್ ಗೆ ಈ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ನೀಡಲು ಹೇಳಿದ್ದರು. ಈ ಬಗ್ಗೆ ಕಾಯ೯ ನಿರತರಾದ ನಾವು ಇಲಾಖೆಯಿಂದ ನಿಮಿ೯ಸಲ್ಪಟ್ಟ ಪಿಕ್ ಅಪ್ ಗಳು ಎಷ್ಟು...