Skip to main content

Posts

Showing posts with the label He was land lord

#ಮಲೆನಾಡಿನ ಸ್ಮರಣಿಯ ಇನಾಂದಾರ್- ದಾನಿ- ಚಿಂತಕ ತ್ಯಾಗತಿ೯ ಗುರುಮೂತಿ೯ ರಾಯರು #

#ತ್ಯಾಗತಿ೯ಯ ಒಂದು ಕಾಲದ ಸಮಾಜ ಸುಧಾರಕ ಕೊಡುಗೈ ದಾನಿ ಇನಾಂದಾರ್ ಗುರುಮೂತಿ೯ ರಾಯರು#    1974-75ರಲ್ಲಿ ನಮ್ಮ ತಂದೆ ವಜಿ೯ನಿಯಾ ತಂಬಾಕು ಬೆಳೆದಿದ್ದರು ಸದರಿ ಕಂಪನಿ ಆನಂದಪುರO ಮತ್ತು ತ್ಯಾಗತಿ೯ ಭಾಗದಲ್ಲಿನ ಅನೇಕ ರೈತರೊಂದಿಗೆ ಬೆಳೆ ಖರೀದಿಸುವ ಒಪ್ಪ೦ದ ಮಾಡಿ ಬ್ಯಾಂಕಿನಿಂದ ಬೆಳೆ ಸಾಲ ಮತ್ತು ತಂಬಾಕು ಹದ ಮಾಡುವ ಮನೆ (ಬ್ಯಾರನ್) ಗೆ ರೈತರ ಜಮೀನು ಅಡಮಾನ ಮಾಡಿ ಸಾಲ ಕೊಡಿಸಿತ್ತು ಒಂದೇ ವಷ೯ದಲ್ಲಿ ಸದರಿ ಸ೦ಸ್ಥೆ ನಾಪತ್ತೆ ಆದ್ದರಿಂದ ಸಾಲ ಮಾಡಿದ ರೈತರು ಹೈರಾಣ ಆದರು ಹಾಗಾಗಿ ಸಕಾ೯ರಕ್ಕೆ ಸಾಲ ಮನ್ನಕ್ಕಾಗಿ ನಷ್ಟ ಮಾಡಿದ ಕಂಪನಿ ವಿರುದ್ಧ ಕ್ರಮಕ್ಕಾಗಿ ಸಂಘಟಿತರಾಗಿ ಹೋರಾಟ ಪ್ರಾರಂಬಿಸಿದ್ದರು ಈ ಸಂಬಂದದ ಸಭೆಗಳು ಆನಂದಪುರದ ನಮ್ಮ ಮನೇಲಿ ನಡೆಯುತ್ತಿತ್ತು.   ಆಗ ತ್ಯಾಗತಿ೯ ಭಾಗದಿಂದ ಗುರುಮೂತಿ೯ ರಾಯರು, ಬರೂರು ಸದಾಶಿವಪ್ಪ ಗೌಡರು, ಬರೂರು ಬಂಗಾರಪ್ಪನವರು ಬರುತ್ತಿದ್ದರು ಆಗ ನಾನು 5ನೇ ತರಗತಿ ಮತ್ತು ತಂಬಾಕಿನ ಗಿಡದ ನಸ೯ರಿ ಕೆಲಸ, ತಂಬಾಕು ಹದ ಮಾಡುವುದು ಗ್ರೇಡ್ ಮಾಡುವುದರಲ್ಲಿ ಎಕ್ಸ್ಪಟ್೯ ಆಗಿದ್ದೆ.    ಮುಂದೆ 2005ರಲ್ಲಿ ಈ ವಜಿ೯ನಿಯ ಕ೦ಪನಿಯ ಮಾಲಿಕರ ಬೇಟಿ ಮಾಡುವ ಸಂದಭ೯ ಹೈದ್ರಾಬಾದ್ ನಲ್ಲಿ ಬಂದಿತ್ತು ಆಗ ಅವರಲ್ಲಿ ನಮ್ಮ ತಂದೆ ನಿಮ್ಮ ಕಂಪನಿ ಕರಾರಿನ ಪ್ರಕಾರ ಒಂದು ವಷ೯ ತಂಬಾಕು ಬೆಳೆದಿದ್ದು ಮರುವಷ೯ ನೀವು ಕರಾರಿನ ಪ್ರಕಾರ ರೈತರಿಗೆ ಸಹಕರಿಸದಿಂದ ನಷ್ಟ ಆದ ಬಗ್ಗೆ ವಿವರಿಸಿದೆ, ಇಂ...