Skip to main content

Posts

Showing posts with the label Famouse film acter Mukhyamantri Chandru our guest in Hombujaresidency lodge Anandapuram

Blog number 1741. ಖ್ಯಾತ ಚಲನ ಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರು ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ನಲ್ಲಿ ನಮ್ಮ ಅತಿಥಿಗಳು.

#ಖ್ಯಾತ_ಚಲನಚಿತ್ರ_ನಟರಾದ #ಮುಖ್ಯಮಂತ್ರಿ_ಚಂದ್ರುರವರು #ನಮ್ಮ_ಹೊಂಬುಜ_ರೆಸಿಡೆನ್ಸಿ_ಲಾಡ್ಡ್_ಅತಿಥಿಗಳು.      ಚಲನ ಚಿತ್ರ ನಟರು ಮಾಜಿ ವಿದಾನ ಪರಿಪತ್ ಸದಸ್ಯರು ಈಗ ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಅಧ್ಯಕ್ಷರು ಆಗಿರುವ ಮುಖ್ಯಮಂತ್ರಿ ಚಂದ್ರು ಅವರು ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ನಲ್ಲಿ ನಿನ್ನೆ ರಾತ್ರಿ ತಂಗಿದ್ದರು.   ಈ ಹಿಂದೆ ಹೈಕೋರ್ಟಿನ ಹಿರಿಯ ವಕೀಲರಾದ ದಿವಾಕರ್ ಅವರು ಮುಖ್ಯಮಂತ್ರಿ ಚಂದ್ರು ಮತ್ತು ಪೃಥ್ವಿರೆಡ್ಡಿ ಅವರನ್ನು ನಮ್ಮ ಲಾಡ್ಜ್ ನಲ್ಲಿ ಉಳಿಸಿದ್ದರು ಆಗ ಅವರಿಬ್ಬರೂ "ಸಣ್ಣ ಊರಾದ ಆನಂದಪುರಂನಲ್ಲಿ ಸ್ಟಾರ್ ಕೆಟಗಿರಿಗೆ ಕಡಿಮೆ ಇಲ್ಲದ ಸುಸಜ್ಜಿತವಾದ ಲಾಡ್ಜ್ ನಿರ್ಮಿಸಿದ್ದಕ್ಕಾಗಿ ಅಭಿನಂದನೆ " ಎಂದಿದ್ದರು.   ಈಗ ಎರಡನೆ ಬಾರಿ ಬಂದು ನಮ್ಮ ಲಾಡ್ಜ್ ನಲ್ಲಿ ತಂಗಿದ್ದು ಲಾಡ್ಜ್ ರೆಸ್ಟೋರಾಂಟ್ ಉದ್ಯಮ ನಡೆಸುವ ನಮಗೆ ತುಂಬಾ ಸಂತೋಷದ ಸಂಗತಿ.   ಸಮೀಪದ ಚೆನ್ನಕೊಪ್ಪದ ಆಮ್ ಆದ್ಮಿ ಪಕ್ಷದ ಮುಖಂಡರಾದ ಶಿವಕುಮಾರ್ ಗೌಡರ ತೋಟದ ಮನೆಯಲ್ಲಿ ಮಂಗಳಗೌರಿ ಭಾಗೀನ ಸಮರ್ಪಣ ಕಾರ್ಯದಲ್ಲಿ ಭಾಗಿಯಾಗಲು ಅವರು ಆಗಮಿಸಿದ್ದರು.