Skip to main content

Posts

Showing posts with the label KALLADKA special tea KT

ಕಲ್ ಡಕ ಕೆ.ಟಿ. ಚಹಾ

* ಕಲ್ಲ್ ಡಕದ ಕೆಟಿ ಚಹಾ ಎಂಬ ಮ್ಯಾಜಿಕ್ ಚಹಾ* ಮಂಗಳೂರಿಂದ ಪುತ್ತೂರು, ಸುಳಯ,  ಮೈಸೂರು ಮಾಗ೯ದಲ್ಲಿ ಪ್ರಯಾಣಿಸುವಾಗ ಕಲ್ಲ್ ಡಕ ಎಂಬ ಊರು ಸಿಗುತ್ತದೆ ಇಲ್ಲಿನ ಪೇಟೆಯ ಎಡ ಭಾಗದಲ್ಲಿ ಒಂದು ಪ್ರಸಿದ್ದವಾದ ಪುರಾತನವಾದ ಒಂದು ಹೋಟೆಲ್ ಇದೆ, ಮಾಲಿಕರ ಮೂರನೇ ತಲೆಮಾರಿನವರು ತಮ್ಮ ಹಿರಿಯರ ಮಾಗ೯ದಶ೯ನದಲ್ಲಿಯೇ ಯಶಸ್ವಿಯಾಗಿ ನಡೆಸುತ್ತಿದ್ದಾರೆ.   ಇದರ ಹೆಸರು ಲಕ್ಷ್ಮಿ ನಿವಾಸ ಕೆಟಿ ಹೋಟೆಲ್, ಇಲ್ಲಿನ ಚಹಾವೇ ವಿಶೇಷ ಗ್ಲಾಸ್ ನ ಕೆಳಭಾಗದ ಹಾಲು ಮತ್ತು ಮೇಲ್ಬಾಗದ ಚಹಾ ಡಿಕಾoಕ್ಷನ್ ಒಂದೇ ಗ್ಲಾಸಿನಲ್ಲಿದ್ದರೂ ಬೇರೆ ಬೇರೆ ಆಗಿ ಇರುತ್ತದೆ, ಚಮಚದಲ್ಲಿ ಮಿಶ್ರ ಮಾಡಿ ಕುಡಿಯಬೇಕು.   ಈ ಚಹಾ ತಯಾರಿಸುವುದು ನಿಪುಣ ಕೆಲಸಗಾರರಿಗೆ ಮಾತ್ರ ಸಾಧ್ಯ!, ಮೊದಲೆಲ್ಲ ಪೋಟೋ ತೆಗೆಯಲು ಬಿಡುತ್ತಿರಲಿಲ್ಲ ನಿನ್ನೆ ಪುತ್ತೂರಿನಿ೦ದ ಬರುವಾಗ ಇಲ್ಲಿನ ವಿಶೇಷ  ಕೆಟಿ ಚಹ ಸೇವಿಸಲು ಇಲ್ಲಿಗೆ ಹೋಗಿದ್ದಾಗ ಪೋಟೋ ವಿಡಿಯೋ ತೆಗೆಯಲು ಅನುಮತಿ ನೀಡಿದರು.   ಒಮ್ಮೆ ಇಲ್ಲಿನ ಕೆಟಿ ವಿಶೇಷ ಚಹಾ ಸಾಧ್ಯವಾದರೆ ರುಚಿ ನೋಡಿ.