Skip to main content

Posts

Showing posts with the label Gerbees villagers weighing not more than 40 kilo they were not eligible for blood donation

Blog number 2089. ಆ ದಿನಗಳಲ್ಲಿ ಗೇರುಬೀಸಿನ ಕೃಷ್ಣಣ್ಣನ ಪತ್ನಿ ಹೊನ್ನಮ್ಮನಿಗೆ ರಕ್ತ ದಾನ ಮಾಡಲು ಆ ಊರಿನ ಯಾರಿಗೂ ಸಾಧ್ಯವೇ ಆಗಲಿಲ್ಲ ಕಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಆ ಊರಿನಲ್ಲಿ ಯಾರೂ 40 ಕೇಜಿಗಿಂತ ಜಾಸ್ತಿ ತೂಗುತ್ತಿರಲಿಲ್ಲ.

#ಆ_ಊರಿನಲ್ಲಿ_ಯಾರು_ರಕ್ತದಾನಕ್ಕೆ_ಅರ್ಹತೆ_ಪಡೆದಿರಲಿಲ್ಲ  . #ನಮ್ಮ_ಊರಿನ_ಸಮೀಪದ_ಗೇರುಬೀಸಿನಲ್ಲಿ_40_ಕಿಲೋಗಿಂತ_ಜಾಸ್ತಿ_ಯಾರು_ತೂಗುತ್ತಿರಲಿಲ್ಲ. #ಆದ್ದರಿಂದ_ನಾನೇ_ರಕ್ತದಾನ_ಮಾಡಬೇಕಾಯಿತು #ಗೇರುಬೀಸು_ಕೃಷ್ಟಣ್ಣರ_ಪತ್ನಿ_ಹೊನ್ನಮ್ಮರಿಗೆ #ಅನೇಕ_ವರ್ಷ_ಹೊನ್ನಮ್ಮ_ಅರುಣ್ಣನ_ರಕ್ತ_ನನ್ನ_ಮೈಯಲ್ಲಿ_ಹರೀತಾ_ಇದೆ_ಎಂಬ_ಮುಗ್ಧತೆಯ_ಮಾತು_ಹೇಳುತ್ತಿದ್ದರು #ನನ್ನ_ಜೀವಮಾನದ_ಮೊದಲ_ರಕ್ತದಾನ_ಬೆಂಗಳೂರಿನ_ವಿಕ್ಟೋರಿಯ_ಆಸ್ಪತ್ರೆಯಲ್ಲಿ.   ಶಿವಮೊಗ್ಗದ ರಕ್ತದಾನದಲ್ಲಿ ಶತಕ ದಾಖಲಿಸಿ ಈಗ 116 ಬಾರಿ ರಕ್ತದಾನ ಮಾಡಿ ಜಿಲ್ಲೆಯ ಅಗ್ರಶ್ರೇಯಾಂಕದಲ್ಲಿರುವ ಧರಣೇಂದ್ರ ದಿನಕರ್ ಸಂದರ್ಶನ ಮಾಡಿದಾಗ ಈ ಘಟನೆ ನನಗೆ ನೆನಪಾಯಿತು.    ಆಗ ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ, 1996ರಲ್ಲಿ ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಗೇರುಬೀಸು ಊರಿನ ನನ್ನ ಆಪ್ತಮಿತ್ರ ಗೇರುಬೀಸು ಕೃಷ್ಣಣ್ಣ ತಮ್ಮ ಪತ್ನಿ ಶ್ರೀಮತಿ ಹೊನ್ನಮ್ಮನವರಿಗೆ ತಕ್ಷಣ ರಕ್ತ ಬೇಕಾಗಿದೆ ಅಂದಾಗ ಅವರಿಗೆ ರಕ್ತ ಪಡೆಯುವ ಮಾಹಿತಿ ನೀಡಿದ್ದೆ.    ಆಗ ಶಿವಮೊಗ್ಗದಲ್ಲಿ ವೆಲ್ ಡನ್ ಲ್ಯಾಬೊರೇಟರಿಗೆ  ಹೋಗಿ ರೋಗಿಗೆ ಬೇಕಾದ ರಕ್ತದ ಗುಂಪಿನವರೇ ರಕ್ತ ನೀಡಿ ಅದನ್ನು ಆಸ್ಪತ್ರೆಗೆ ಕೊಂಡೊಯ್ದು ಕೊಡಬೇಕಾದ ಕಾಲ.    ಅವತ್ತು ಆ ಗೇರುಬೀಸೆಂಬ ಹಳ್ಳಿಯ ಎಲ್ಲ ಮನೆಯ ಯಜಮಾನರು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಾಗಿದ...