#ಪಿಳ್ಳೆ_ಯಾನೆ_ಆಚಾಪುರದ_ಮ೦ಜಪ್ಪ #ಒಂದು_ಕಾಲದ_ಭೂಮಾಲಿಕರಾದ_ಬಸವನಕೊಪ್ಪದ_ಚನ್ನವೀರಪ್ಪಗೌಡರ_ಶಿಷ್ಯ #ಕಡಿದಾಳು_ಶಾಮಣ್ಣರ_ಪ್ರೇರಣೆಯ_ಶೌಚಾಲಯದ_ಮೊದಲ_ಪಲಾನುಭವಿ. ಪಿಳ್ಳೆ ಅಂದರೆ ಮಾತ್ರ ಜನ ಗುರುತಿಸುವ ಆಚಾಪುರದದ ಮಂಜಪ್ಪ ಕಾಡಿನ ಎಲ್ಲಾ ಮಾಹಿತಿ ಇರುವ ನಮ್ಮ ಹಳ್ಳಿ ವಿಜ್ಞಾನಿ, ಒಂದು ಕಾಲದಲ್ಲಿ ಅಂದರೆ 1970 ರ ದಶಕದಲ್ಲಿ ನಮ್ಮ ಭಾಗದ ಪ್ರಸಿದ್ಧ ಭೂಮಾಲಿಕರಾಗಿದ್ದ ಅನ್ನದಾನಿ ಬಸವನಕೊಪ್ಪದ ಚನ್ನವೀರಪ್ಪ ಗೌಡರ ಪಟ್ಟದ ಶಿಷ್ಯ ಆಗಿದ್ದಾತ. ಅವರ ಕೊಟ್ಟಿಗೆಯಲ್ಲಿನ ನೂರಾರು ದನ, ಎಮ್ಮೆಗಳು ಕಾಯುವ ಗೋಪಾಲ ವೃತ್ತಿ ಪಿಳ್ಳೆಯದು. ಕಾಡಿನ ನ್ಯಾಯ ಮತ್ತು ಪರಿಸರ ವಿಜ್ಞಾನ ರಕ್ತಗತವಾಗಿ ಸಂಪೂಣ೯ವಾಗಿ ಪಿಳ್ಳೆಗೆ ಬಾಲ್ಯದಲ್ಲೇ ಕರತಲಾಮಲಕ ಆಗಿದೆ, ಗಿಡಗಂಟಿ ಯಿಂದ ದೊಡ್ಡ ಅರಣ್ಯದ ಮರ ಮಟ್ಟುಗಳ ಅಪಾರ ಜ್ಞಾನ ಪಿಳ್ಳೆಗೆ ಇದೆ ಆದರೆ ಅದು ಅವರಿಗೆ ವಿಶೇಷ ಅನ್ನಿಸಿಲ್ಲ. ಮೊನ್ನೆ ಪಿಳ್ಳೆ ಸಿಕ್ಕಿದಾಗ ವಯಸ್ಸು ಎಷ್ಟಾಯಿತೆಂದರೆ 50 ಅಂದರು, ದೊಡ್ಡ ಮಗಳು ಮದುವೆ ಆಗಿದೆ, ಮಗ ಬಸ್ ಡ್ರೈವರ್ ಆಗಿದ್ದಾನೆ, ಸಣ್ಣ ಮಗಳು ನಸ್೯ ಆಗಿದ್ದ ಬಗ್ಗೆ ತಿಳಿಸಿದರು ಆದರೆ ನನಗಿ೦ತ ಪಿಳ್ಳೆ ದೊಡ್ಡವರು ಈಗ ನನಗೇ 56 ವರ್ಷ. 1995 ರಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದಾಗ ಕಡಿದಾಳು ಶಾಮಣ್ಣರಿಂದ ಪ್ರೇರೇಪಿತನಾಗಿ ಅವರ ಘೋಷಣೆ "ಮೊದಲು ಶೌಚಾಲಯ ಅಮೇಲೆ ದೇವಾಲಯ" ದಂತೆ (ಆಗ ಶೌಚಾಲಯಕ್ಕೆ ಅನುದಾನ ಇರಲ...