Blog article 960. ಆನಂದಪುರಂನಲ್ಲಿ ನಮ್ಮ ಹೊಂಬುಜ ಲಾಡ್ಜ್ ನಲ್ಲಿ ನೂತನವಾಗಿ ಪ್ರಾರಂಭವಾಗಿರುವ ಆಯುರ್ವೇದ ಶಿರೋದಾರ ಕೇಂದ್ರ ವೈದ್ಯೋ ನಾರಾಯಣೋ ಹರಿಃ ಆಯುರ್ವೇದ ಕ್ಲೀನಿಕ್
#ಶಿರೋದಾರ_ಕೇಂದ್ರದ_ಶುಭಾರಂಭದಲ್ಲಿ_ವಿಶೇಷ_ಅತಿಥಿಗಳು. #ಹೊಸ_ರೀತಿಯ_ಸಭಾ_ಕಾರ್ಯಕ್ರಮ_ಆಗಮಿಸಿದವರ_ಮೆಚ್ಚುಗೆ_ಪಡೆಯಿತು. #ಶಿರೋದಾರ_ಮಾಡಿದ_ವೈದ್ಯರು_ಚಿಕಿತ್ಸೆ_ಪಡೆದವರಿಗೆ_ಆಗಮಿಸಿ_ಶುಭಹಾರೈಸಿದವರಿಗೆ_ಅನಂತಾನಂತ_ವಂದನೆಗಳು. #ಸಾಮಾಜಿಕ_ಜಾಲತಾಣದಿಂದ_ಸುದ್ದಿ_ತಿಳಿದು_ಬಂದು_ಶುಭಹಾರೈಸಿದ_ಮುಖ್ಯಮಂತ್ರಿಗಳ_ಕಾನೂನು_ಸಲಹೆಗಾರರಾಗಿದ್ದ_ದೀವಾಕರ್_ವಕೀಲರು. ಪ್ರವಾಸೋದ್ಯಮ ಉದ್ಯಮದಲ್ಲಿ ಲಾಡ್ಜ್ - ಕಾಟೇಜ್-ವೆಜ್ ರೆಸ್ಟೋರಾಂಟ - ನಾನ್ ವೆಜ್ ರೆಸ್ಟೋರಾಂಟ್-ವೆಡ್ಡಿಂಗ್ ಹಾಲ್ ಗಳ ನಡೆಸಿದ ನಮ್ಮ ಅನುಭವ ವಿಸ್ತಾರವಾಗುತ್ತಾ ನಿನ್ನೆ #ವ್ಯೆದ್ಯೋ_ನಾರಾಯಣೊ_ಹರಿಃ_ಆಯುರ್ವೇದ_ಚಿಕಿತ್ಸಾ_ಕೇಂದ್ರದ ಪ್ರಾರಂಭದೊಂದಿಗೆ ಪ್ರವಾಸೋದ್ಯಮದ ಉದ್ಯಮ ಸೇರಿಕೊಂಡಿತು. ಧನ್ವಂತರಿ ಹೋಮದೊಂದಿಗೆ ಸಿದ್ದಾಪುರದಲ್ಲಿನ ರಾಮಕೃಷ್ಣ ಹೆಗ್ಗಡೆಯವರ ಕುಟುಂಬದ ಆಯುವೇ೯ದ ವೈದ್ಯ ಕಾಲೇಜಿನಲ್ಲಿ ಪ್ರಾ೦ಶುಪಾಲರಾಗಿ ಸೇವೆ ಸಲ್ಲಿಸಿದ್ದ ಪ್ರಸಿದ್ದ ಡಾಕ್ಟರ್ ಪ್ರಸಾದ್ ಜನ್ನೆಯವರು ಆಯುರ್ವೇದ -ಶಿರೋದಾರಗಳ ಬಗ್ಗೆ ಮಾಹಿತಿ ನೀಡಿದರು. ಖ್ಯಾತ ಸಾಹಿತಿಗಳು ಸಂಶೋದಕರು ಆದ ಶ್ರೀಕಂಠ ಕುಡಿಗೆ ಮತ್ತು ಶಿವಮೊಗ್ಗದ ಪ್ರತಿಷ್ಠಿತ ಕನಾ೯ಟಕ ಸಂಘದ ಅಧ್ಯಕ್ಷರಾದ ಎಂ.ಎನ್. ಸುಂದರಾಜ್ ಇವತ್ತಿನ ದಿನಗಳಲ್ಲಿ ಆಯುರ್ವೇದದ ಅವಶ್ಯಕತೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನನ್ನ ಎಲ್ಲಾ ಕಾರ್ಯಕ್ರಮಗಳು ...