Skip to main content

Posts

Showing posts from June, 2020

NO-49 ಕೊರಾನಾ ಲಾಕ್ ಡೌನ್ ಡೈರಿ,ನಿಯ೦ತ್ರಣಕ್ಕೆ ಬರದ ರೋಗ ಪ್ರಸರಣ, ಕೈ ಚೆಲ್ಲಿದ ಸಕಾ೯ರ, ಎಲ್ಲಾ ಮುಂಜಾಗೃತೆ ಗಾಳಿಗೆ ತೂರಿದ ಮಹಾಜನತೆ.

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 49.    ದಿನಾ೦ಕ: 30-ಜೂನ್ -2020. #ನಿಯ೦ತ್ರಣ_ಸಾಧ್ಯವಾಗದೆ_ಕೈಚೆಲ್ಲಿದ_ದೇಶ     ಪ್ರಾರ೦ಭದಲ್ಲಿ ಭಾರತ ದೇಶವಾಸಿಗಳಿಗೆ ಇದ್ದ ಕೊರಾನಾ ವೈರಸ್ ಆತಂಕ 100 ದಿನದಲ್ಲಿ ಇಲ್ಲವಾಗಿದೆ.     ಮಾಸ್ಕ್ ಇಲ್ಲ, ಸ್ಯಾನಿಟೈಸರ್ ಬೇಡ, ಸಾವ೯ಜನಿಕ ಅಂತರವೂ ಇಲ್ಲ ಇದರ ಜೊತೆ ಸಕಾ೯ರಗಳು ಲಾಕ್ ಡೌನ್ ಹಂತ ಹಂತವಾಗಿ ತೆರವು ಮಾಡುತ್ತಾ ಬಂದದ್ದೂ ಸೇರಿ ಭಾರತದಲ್ಲಿ ಕೊರಾನಾ ವಿಪರೀತವಾಗಿ ಹರಡಿದೆ.    ಪ್ರಾರಂಭದಲ್ಲಿ 108 ದಿನ ಬೇಕಾಗಿತ್ತು 1 ಲಕ್ಷ ಜನರಿಗೆ ಹರಡಲು ಈಗ ಕೇವಲ 7 ದಿನಕ್ಕೆ ಲಕ್ಷ ದಾಟುತ್ತಿದೆ ಮುಂದಿನ ದಿನದಲ್ಲಿ 3 - 4 ದಿನಕ್ಕೆ ಲಕ್ಷ ಜನರಿಗೆ ತಲುಪುವ ಸಾಧ್ಯತೆ ಇದೆ.     ಈಗಾಗಲೇ ಭಾರತ ಕೊರಾನಾ ನಾಗಾಲೋಟದಲ್ಲಿ ವಿಶ್ವದಲ್ಲಿ 4ನೇ ಸ್ಥಾನ ಪಡೆದಿದೆ.     ನೂರಾರು ಆದೇಶ ಸಕಾ೯ರ ಮಾಡುವುದು ಬದಲಿಸುವುದು ಮಾಡುತ್ತಲೇ ಇದೆ ಆದರೆ ಸಾವ೯ಜನಿಕರಲ್ಲಿ ಈ ಕಾಯಿಲೆ ಬಗ್ಗೆ ಜನ ಜಾಗೃತಿ ಮೂಡಿಸಲು ವಿಫಲವಾಗಿದೆ.   ಮಾಸ್ಕ್ ಕಡ್ಡಾಯ ಅಂದರೂ ಸಕಾ೯ರದ ಮಂತ್ರಿ ಮಹೋದಯರೇ ಉಲ್ಲ೦ಘಿಸಿದ ಮೇಲೆ ಸಾವ೯ಜನಿಕರು ಇನ್ನೇನು.   ಸಾವ೯ಜನಿಕವಾಗಿ ಅಂತರ ಗಿಂತರ ಪಾಲಿಸಲಿಲ್ಲ, ಗುಟ್ಕಾ ಕಂಡ ಕಂಡಲ್ಲಿ ಉಗಿದರೆ ದಂಡ ಎಂಬ ಕಾನೂನು ಮೀರಿ ಉಗಿಯುವವರೂ ಹೆಚ್ಚಾದರು.    ಇದೆಲ್ಲ ಒಂದು ತರ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವವರಿಗೆ ದಂಡ ಎಂಬಂತೆ.   SSLC ಪರೀಕ್ಷೆ 8.5 ಲಕ್ಷ ವಿದ್ಯಾಥಿ೯ಗಳಿಗೆ ನಡೆ

#ಬೀಡಿಗೆ ಪಿಲ್ಟರ್ ಆದುನೀಕರಣ ಆಗುತ್ತಿರುವ ಬೀಡಿ ಉದ್ಯಮ#

#ಬೀಡಿಗೂ ಪಿಲ್ಟರ್ ಬಂತು #         ಬೀಡಿಗೂ ಪಿಲ್ಟರ್ ಬಂತು ಅಂದಾಗ ನಂಬಲಾಗಲಿಲ್ಲ ಅದನ್ನ ಮಾರಾಟ ಮಾಡುವ ಅಂಗಡಿಯಿ೦ದ ತರಿಸಿ ನೋಡಿದೆ ಏನಾಶ್ಚಯ೯ ಸಿಗರೇಟಿಗೆ ಪಿಲ್ಟರ್ ಅಳವಡಿಸಿದಂತೆ ಬೀಡಿಗೂ ಅಳವಡಿಸಿದ್ದಾರೆ.    25 ಬೀಡಿಯ 20 ಕಟ್ಟಿನ ಒಂದು ಬಂಡಲ್ ಗೆ 400 ರೂಪಾಯಿ ! ಒಂದು ಬೀಡಿಗೆ 1 ರೂಪಾಯಿ ಹಾಗOತ ಇದೇನು ದುಭಾರಿ ಅಲ್ಲ ಪಿಲ್ಟರ್ ಸಿಗರೇಟಿಗೆ ಒಂದಕ್ಕೆ 10 ರಿಂದ 15 ಇದೆ.    ಬೀಡಿ ಸೇದುವವರಿಗೆ ಇದು ಒಂದು ರೀತಿ ರಕ್ಷಣೆ ಕೊಡುತ್ತೆ ಅಂತ ನಾನು ಹೇಳಿದರೆ ಇದನ್ನ ತಂದು ತೋರಿಸಿದ ಬೀಡಿ ಪ್ರಿಯರು ಮಾತ್ರ ಅವರಿಗೆ ಈ ಬೀಡಿ ಇಷ್ಟ ಇಲ್ಲವ೦ತೆ ಪಿಲ್ಟರ್ ಇಲ್ಲದ ಬೀಡಿಯೇ ರುಚಿ ಅಂತ ಅಂದರು.   ಆದುನಿಕ ಜಗತ್ತಿನ ಆದುನೀಕರಣದ ಕಾಲದಲ್ಲಿ ಬೀಡಿ ಪಿಲ್ಟರ್ ದರಿಸಿ ಬಂದಿದೆ ಬೀಡಿ ಪ್ರಿಯರು ಹೇಗೆ ಸ್ವೀಕರಿಸುತ್ತಾರೆ ನೋಡ ಬೇಕು.

#ಖಾಲಿ ಚೆಕ್ ಉಪಯೋಗಿಸಿ ಆಸ್ತಿ ಹೊಡೆಯುವ ಬಡ್ಡಿ ವ್ಯಾಪಾರಸ್ಥರು#

#ಖಾಲಿಚೆಕ್ ನಿಂದ ಬಡ್ಡಿ ವ್ಯವಹಾರದವರ ಅಪರಾ ತಪರಾ ವಸೂಲಿ ಸಾಲಗಾರರ ಆತ್ಮಹತ್ಯಗೆ ಪ್ರೇರಣೆ#   ಇವತ್ತಿನ ವಿಜಯ ಕನಾ೯ಟಕದ ನಮ್ಮ ಶಿವಮೊಗ್ಗ ಪುರವಣಿಯಲ್ಲಿ ತೀಥ೯ಹಳ್ಳಿಯ ರಾಘವೇoದ್ರ ಮೇಗರವಳ್ಳಿ "ಖಾಲಿ ಚೆಕ್ ನೀಡಿ ಕಂಗಾಲಾದ ಸಾಲಗಾರ" ಎಂಬ ಅತ್ಯುತ್ತಮ ಲೇಖನ ಪ್ರಕಟಿಸಿದ್ದಾರೆ ಜೊತೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ಅಭಿಪ್ರಾಯ ಬಡ್ಡಿ ವ್ಯವಹಾರಸ್ಥರು ಕಿರುಕುಳ ನೀಡಿದರೆ ಸಮೀಪ ಠಾಣೆಗೆ ದೂರು ನೀಡಿದರೆ ತಕ್ಷಣ ಕಾನೂನು ಕ್ರಮ ಜರುಗಿಸುವ ಅಭಯ ಬಾಕ್ಸ್ ವರದಿ ಆಗಿದೆ.    ದಿನ ಬಡ್ಡಿ, ಮೀಟರ್ ಬಡ್ಡಿ ಮಾಫಿಯಾ ಎಲ್ಲಾ ಊರಲ್ಲೂ ಇದೆ ಮೊನ್ನೆ ಮೊನ್ನೆ ಗೆಳೆಯನೊಬ್ಬ ತಾನು ವಿಷ ಕುಡಿಯುವ ಸಂದಭ೯ ಬಂದಿದೆ ಅಂದಾಗ ಅವನ ಕಷ್ಟ ಪರಿಹಾರಕ್ಕೆ ಮಾಗ೯ ತೋರಿಸಿದೆವು ಆದರೆ ಅವನ ರಬ್ಬರ್ ತೋಟ ಖರೀದಿ ಅಗ್ರೀಮೆ೦ಟ್ ಮಾಡಿದ ರೀತಿ ಸಾಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಜಮೀನು ಪಹಣಿಯಲ್ಲಿ ಸಾಲ ಕೊಟ್ಟವನ ಹೆಸರು ನಮೂದಾಗಿತ್ತು ನಾಕಾರು ಖಾಲಿ ಚೆಕ್ ಬೇರೆ ಬೇರೆಯವರ ಹೆಸರಲ್ಲಿ ಹತ್ತಾರು ಲಕ್ಷಕ್ಕೆ ಕೇಸ್ ಬೇರೆ ಇದಕ್ಕೆ ಬುದ್ಧಿವಂತ ಪ್ರಗತಿ ಪರ ಎನ್ನುವ ವಕೀಲರ ವಕಾಲತ್ತು.   ನಂತರ ಅವನ ಅದ೯ ಜಮೀನು ಬೇರೆಯವರಿಗೆ ಕ್ರಯ ನೀಡಿ ಈ ಸಾಲಗಾರನ ಪಾಶದಿಂದ ಪರಿಹರಿಸಲಾಯಿತು ಸರಿಯಾದ ಸಮಯದಲ್ಲಿ ಈತನಿಗೆ ಸಲಹೆ ಸಹಾಯ ಸಿಕ್ಕಿದ್ದರಿಂದ ಜೀವ ಉಳಿಯಿತು, ಕೈತಪ್ಪಿದ್ದ ಆಸ್ತಿ ಆದ೯ ಉಳಿಯಿತು.   1992ರಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿ ಆಗಿದ್ದ ವ

ಕೊರಾನಾ ಆಪತ್ಕಾಲದಲ್ಲಿ ದಮ೯ಸ್ಥಳ ಸ್ವಸಹಾಯ ಸಂಘ ಸಾಲದ ಮರುಪಾವತಿ ಪ್ರಾರಂಭ ಮಾಡಿರುವುದು ಕೇಂದ್ರ ಮತ್ತು ರಾಜ್ಯ ಸಕಾ೯ರದ ಆದೇಶವನ್ನ ನಿಲ೯ಕ್ಷ ಮಾಡಿದಂತೆ

ಸಾಗರ ತಾಲ್ಲೂಕಿನ ದಮ೯ಸ್ಥಳ ಸ್ವಸಹಾಯ ಸಂಘ ಸಾಲದ ಕಂತು ಕಟ್ಟಲು ಒತ್ತಾಯಿಸಿ ಮರುಪಾವತಿ ಪ್ರಾರಂಬಿಸಿರುವುದು ಎಷ್ಟು ಸರಿ ?   ಕೇಂದ್ರ ಸಕಾ೯ರ ಎಲ್ಲಾ ರಾಷ್ಟ್ರಿಕೃತ ಬ್ಯಾಂಕ್ ಗಳ ಸಾಲ ಮಾಚ೯ ತಿಂಗಳಿಂದ ಮೇ ತಿಂಗಳ ತನಕ ಮರುಪಾವತಿಗೆ ವಿನಾಯಿತಿ ನೀಡಿತ್ತು ನಂತರ ಇದನ್ನು ಆಗಸ್ಟ್ 2020 ರ ತನಕ ಮುಂದೂಡಿದೆ ಕಾರಣ ಕೊರಾನಾ ಸಾಂಕ್ರಮಿಕ ರೋಗದಿಂದ ಇಡೀ ದೇಶ ಲಾಕ್ ಡೌನ್ ನಿಂದ ಅಥಿ೯ಕ ಸಂಕಷ್ಟದಿಂದ ಹೊರಬರಲು.    ಇದೇ ರೀತಿ ರಾಜ್ಯ ಸಕಾ೯ರ ಎಲ್ಲಾ ಸಹಕಾರಿ ಸಂಘ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಗಳ ಸಾಲ ಮರುಪಾವತಿಗೆ ಕಾಲಾವಕಾಶ ನೀಡಿದೆ.    ಸ್ವ ಸಹಾಯ ಸಂಘಗಳು ಪ್ರತಿ ವಾರ ಕಟ್ಟಿಸಿಕೊಳ್ಳುತ್ತಿದ್ದ ಸಾಲದ ಮರುಪಾವತಿ ಮುಂದೂಡಲಾಗಿದೆ ಎಂಬ ಸುದ್ದಿ ಇತ್ತು ಇವತ್ತಿನ ಪತ್ರಿಕೆಯಲ್ಲಿ ಪಕ್ಕದ ಜಿಲ್ಲೆಯ ಜಿಲ್ಲಾಧಿಕಾರಿಗಳು ಸ್ವ ಸಹಾಯ ಸಂಘಗಳು ಸಾಲ ಮರುಪಾವತಿಗೆ ಕಾಲವಕಾಶ ನೀಡದೆ ಮರು ಪಾವತಿಗೆ ಒತ್ತಾಯಿಸಿದರೆ ಕಾನೂನು ಕ್ರಮ ಎದುರಿಸುವುದಾಗಿ ಎಚ್ಚರಿಸಿದ್ದಾರೆ.    ಆದರೆ ಶಿವಮೊಗ್ಗ ಜಿಲ್ಲೆಯ ಆನಂದಪುರಂ ಭಾಗದ ದಮ೯ಸ್ಥಳ ಸಂಘದ ಅಭಿವೃದ್ದಿ ಅಧಿಕಾರಿ ಕಳೆದ ತಿಂಗಳಿಂದ ಸಾಲದ ಕಂತು ಕಟ್ಟಲೇಬೇಕೆಂದು ಸಾಲಗಾರರಿಂದ ಪ್ರತಿವಾರ ಸಾಲ ವಸೂಲಿ ಮಾಡುತ್ತಿದ್ದಾರೆ.   ಈ ಭಾಗದಲ್ಲಿ ಇಷ್ಟು ದಿನ ಕೂಲಿ ಕೆಲಸ ಇಲ್ಲವಾಗಿತ್ತು, ಈಗಷ್ಟೆ ಕೃಷಿ ಕೆಲಸ ಪ್ರಾರಂಭ ಆಗಿದೆ ಅಷ್ಟರಲ್ಲಿ ಸಾಲದ ಕಂತು ಮರುಪಾವತಿ ಪ್ರಾರ೦ಬಿಸಿರುವುದು ಅನೇಕರಿಗೆ ಕಷ್ಟಸಾ

ಭಾರತೀಯ ಆಯುವೇ೯ದ ಚಿಕಿತ್ಸಾ ಕ್ರಮದಿಂದ ವಿಶ್ವ ವಿಖ್ಯಾತರಾಗಿದ್ದ ವೈದ್ಯ ನಾರಾಯಣ ಮೂತಿ೯ ನರಸೀಪುರ ಇನ್ನಿಲ್ಲ ( 24- ಜೂನ್ -2020)

*ವೈದ್ಯ ನಾರಾಯಣ ಮೂತಿ೯ ನರಸೀಪುರ ಎನ್ನುವ ಹೆಸರು ಎಷ್ಟು ಪ್ರಸಿದ್ದಿ ಅಂದರೆ ಅದು ನಮ್ಮ ದೇಶದ ಗಡಿ ದಾಟಿ ಪಸರಿತ್ತು*   ಸರಳ ಜೀವನದ, ಅಹಂಕಾರದ ಲವಲೇಶವೇ ಇಲ್ಲದ ಬಂದವರಿಗೆಲ್ಲ ತಮ್ಮ ವಂಶ ಪಾರಂಪರ್ಯವಾಗಿ ಬಂದ ನಾಟಿ ವೈದ್ಯ ಚಿಕಿತ್ಸೆ ನೀಡುತ್ತಿದ್ದ ವೈದ್ಯನಾರಾಯಣ ಮೂತಿ೯ಯವರಿಗೆ ಇತ್ತೀಚಿನ ವರ್ಷದಲ್ಲಿ ವಿಪರೀತ ಸಂಖ್ಯೆಯಲ್ಲಿ ಬರುವ ರೋಗಿಗಳಿಂದ ಅನೇಕ ಕಷ್ಟಗಳೂ ಎದುರಿಸುವಂತಾಯಿತು.   *ಅವರ ಔಷದಕ್ಕೆ ಬೇಕಾಗುತ್ತಿದ್ದದ್ದು ದೊಡ್ಡ ಮರಗಳಲ್ಲ ಸಣ್ಣ ಕುರುಚಲು ಔಷದ ಅಂಶದ ಸಸ್ಯಗಳು ಮಾತ್ರ, ಅವರು ಹೇಳುತ್ತಿದ್ದಂತೆ ಇಡೀ ವಿಶ್ವದ ಜನರಿಗೂ ಕೊಟ್ಟರೂ ಖಾಲಿ ಆಗದಷ್ಟು ನಮ್ಮ ಪಶ್ಚಿಮ ಘಟ್ಟದ ಅಂಚಿನಲ್ಲಿದೆ ಎನ್ನುತ್ತಿದ್ದರು.*    ಆದರೆ ಇವರಿಂದ ಅರಣ್ಯ ನಾಶ, ಪರಿಸರ ನಾಶ ಎಂದೆಲ್ಲ ಹಸಿರು ನ್ಯಾಯಾಲಯದಲ್ಲಿ ಇವರ ವಿರುದ್ದ ಹಾಕಿದ್ದ ಕೇಸ್ ನ್ಯಾಯಾದೀಶರು ಸತ್ಯಾಂಶ ಪರಾಮರಿಸಿ ವಜಾ ಮಾಡಿದ್ದರು.   ಅನೇಕ ಸುಳ್ಳು ಕೇಸುಗಳು ಇವರ ಮೇಲೆ ಇವರನ್ನ ದ್ವೇಷಿಸುವವರು ದಾಖಲಿಸಿದ್ದು ಕೂಡ ಇವರನ್ನ ಅನಾವಶ್ಯಕ ತೊಂದರೆಗೆ ಕಾರಣ ಆಗಿತ್ತು.   ಇವರ ಚಿಕಿತ್ಸೆಯಿಂದ ಯಾರಿಗೂ ಗುಣ ಆಗಿಲ್ಲ ಅಂತೆಲ್ಲ ಹೇಳುವವರೇ ಇದ್ದಾರೆ ಆದರೆ *ಅಲೋಪತಿಯಲ್ಲಿಯೂ ಗುಣ ಆಗದೆ ಅಂತಿಮ ಹಂತದಲ್ಲಿ ಇವರಲ್ಲಿಗೆ ಬಂದು ಗುಣ ಆದ ಸಾವಿರಾರು ದಾಖಲೆ ನಾನೇ ಸಂಗ್ರಹಿಸಿದ್ದೇನೆ.*    ಇವರು ಮತ್ತು ನನ್ನ ತಂದೆ ಗಳಸ್ಯ ಕಂಠಸ್ಯದ ಗೆಳೆಯರು, ಇವರ ಚಿಕಿತ್ಸಾ ಕ

VAIDYA NARAYANAMURTHY NARASIPURA A MEMORABLE AYURVEDA PANDITH NOW NOT WITH US.

*The name Vaidya Narayana Murthy Narasipura was famous across and outside of India for Cancer Treatment.* A humble, simple living native doctor who used to give herbal medicines which was passed on to him by his ancestors. He had to face many issues due to the visiting of thousands of patients. *He used to say that the components needed for his medicine were derived from medicinal plants not huge trees in the forest. It was his vast knowledge of plants and forests, that he used to say even if we distribute medicines to the whole world, these forests are not going to be emptied.* But out of sheer  jealousy, many people filed false cases like destruction of forest, harming the environment etc against the Vaidya ji, in National Green tribunal. These allegations held no valid ground and were dismissed. Also, many filed false complaints against him for no reason.  *Vaidya ji thrived to save the traditional knowledge  along with conserving the forests. It's sad th

ಶಿವಮೊಗ್ಗಾ ಜಿಲ್ಲಾ ಮಲೆನಾಡ ರಬ್ಬರ್ ಬೆಳೆಗಾರರೇ ಎಚ್ಚರ! ಹೆಚ್ಚು ರಬ್ಬರ್ ಬರಲು ಎಥಿನೋ ಎಂಬ ಮಾರಕ ರಾಸಾಯನಿಕ ರಬ್ಬರ್ ಪಸಲು ಗುತ್ತಿಗೆದಾರರು ಬಳಸುತ್ತಿದ್ದಾರೆ ಇದರಿಂದ 40 ವರ್ಷ ಪಸಲು ಬರುವ ಮರ 4 ವಷ೯ದಲ್ಲಿ ನಿನಾ೯ಮವಾಗಲಿದೆ.

ಶಿವಮೊಗ್ಗ ಜಿಲ್ಲಾ ರಬ್ಬರ್ ಬೆಳೆಗಾರರ ಗಮನಕ್ಕಾಗಿ     ಕೇಂದ್ರ ಸಕಾ೯ರದ ರಬ್ಬರ್ ಬೋಡ್೯ ಮಲೆನಾಡು ಪ್ರದೇಶದಲ್ಲಿ ರಬ್ಬರ್ ಇಳುವರಿ ಹೆಚ್ಚು ಬರುತ್ತದೆ ಎಂದು ಸಾಗರ ತಾಲ್ಲುಕಿನ  ಆನಂದಪುರ೦,ಇಡುವಳ್ಳಿ ಮತ್ತು ನಾಗವಳ್ಳಿಯಲ್ಲಿ ಮುಂಬಾಳಿನ ಗೋಕುಲ್ ಪಾರಂ ಪಾದರ್ ಜೋಸ್ ರಬ್ಬರ್ ಬೋಡ್೯ ಜೊತೆ ಬೆಳೆಸಿದ ಪ್ರಾತ್ಯಕ್ಷಿಕಾ ರಬ್ಬರ್ ತೋಟದ ಸಂಶೋದನೆಯಿಂದ ಪುರಸ್ಕರಿಸಿ ಈ ಪ್ರದೇಶದಲ್ಲಿ ರೈತರು ರಬ್ಬರ್ ಬೆಳೆಸಲು ಪ್ರೋತ್ಸಾಹಿಸಿ, ರಬ್ಬರ್ ಬೋಡ್೯ನ ಪ್ರಾದೇಶಿಕ ಕಛೇರಿ ಸಾಗರದಲ್ಲಿ ಪ್ರಾರ೦ಬಿಸಿತ್ತು.    ರೈತರಿಗೆ ಬೇಕಾದ ಮಾಹಿತಿ,ಸಹಾಯಧನಗಳನ್ನ ಕೊಡಿಸಲು ಸಹಾಯ ಪ್ರಾರ೦ಬಿಸಿದ್ದರಿಂದ ಮತ್ತು ಈ ಬೆಳೆಗೆ ನೀರಾವರಿ ಅವಶ್ಯವಿಲ್ಲ ಮಳೆ ನೀರಿನ ಆಶ್ರಯದಲ್ಲಿ ರಬ್ಬರ್ ಬೆಳೆ ಬರುವುದರಿಂದ ಮತ್ತು ರಬ್ಬರ್ ದಾರಣೆ ಹೆಚ್ಚು ಆ ಸಂದಭ೯ದಲ್ಲಿ ಇದ್ದಿದ್ದರಿಂದ ಮಲೆನಾಡಿನ ರೈತರು ಹೆಚ್ಚು ಹೆಚ್ಚು ತಮ್ಮ ಖುಷ್ಕಿ ಜಮೀನಿನಲ್ಲಿ  ರಬ್ಬರ್ ಬೆಳೆಸಿದ್ದಾರೆ.     ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಟನ್ ರಬ್ಬರ್ ಗೆ ಬೇಡಿಕೆ ಇದೆ ಆದರೆ 7 ಲಕ್ಷ ಟನ್ ಮಾತ್ರ ರೈತರು ಬೆಳೆಯುತ್ತಾರೆ೦ಬ ಮಾಹಿತಿ ಇದ್ದರೂ ಕಳೆದ 10 ವರ್ಷದಿಂದ ರಬ್ಬರ್ ಖರೀದಿ ಬೆಲೆ 100 ರಿಂದ 150 ರ ಒಳಗೆ ಉಳಿದು ಬಿಟ್ಟಿದ್ದು ಮಾತ್ರ ಸೋಜಿಗ ಇದರಿ೦ದ ಮಲೆನಾಡಿನ ರಬ್ಬರ್ ಬೆಳೆಗಾರರು ರಬ್ಬರ್ ಬೆಳೆಯ ಮೇಲೆ ವಿಶ್ವಾಸ ಕಳೆದು ಕೊಂಡು ರಬ್ಬರ್ ಬೆಳೆ ತೆಗೆದು ಅಡಿಕೆ ತೋಟ

ಅನೇಕರು ಇವತ್ತಿನ ತಂದೆಯ ದಿನದಲ್ಲಿ ಅನೇಕ ಸ್ವಯ೦ ಅನುಭವದ ಲೇಖನ ಬರೆದಿದ್ದಾರೆ ಅದರಲ್ಲಿ ಪ್ರಜಾವಾಣಿ ಪತ್ರಿಕೆಯ ದಾವಣಗೆರೆ ಬ್ಯೂರೋ ಪ್ರಸರಣ ವಿಭಾಗದ ವ್ಯವಸ್ಥಾಪಕರಾದ ಹರವೆ ಸಂಗಣ್ಣ ಪ್ರಕಾಶ್ ಅನುಭವ ಇವತ್ತಿನ ಯುವ ಜನಾಂಗಕ್ಕೆ ಮಾದರಿ ಮತ್ತು ಪ್ರೇರಣೆ ನೀಡುವಂತಾದ್ದು.

ಹರವೆ ಸಂಗಣ್ಣ ಪ್ರಕಾಶ್ ಈಗ ಪ್ರಜಾವಾಣಿ ದಾವಣಗೆರೆ ಬ್ಯೂರೋದ ಪ್ರಸರಣ ವಿಭಾಗದ ವ್ಯವಸ್ಥಾಪಕರು         ಇವರು ಚಾಮರಾಜ ನಗರ ಜಿಲ್ಲೆಯವರು, ತಮ್ಮ ತಂದೆಯ ಪ್ರೋತ್ಸಾಹ ಪತ್ರಿಕೆ ಹಂಚುವ ಮೂಲಕ ತೋರಿಸಿ ಕೊಟ್ಟಿದ್ದು ಅವರಿಗೆ ಇವತ್ತು ನಾಡಿನ ಪ್ರಖ್ಯಾತ ಪತ್ರಿಕೆಯಲ್ಲಿ ಪ್ರತಿಷ್ಟಿತ ಹುದ್ದೆಯಲ್ಲಿರುವ೦ತೆ ಮಾಡಿದ್ದನ್ನ ಪಾದರ್ಸ್‌ ಡೇನಲ್ಲಿ ನೆನಪು ಮಾಡಿ ಬರೆದಿದ್ದಾರೆ.     ಮನಸ್ಸಿದ್ದರೆ ಮಾಗ೯ ಉ೦ಟು, ವೃತ್ತಿಯಲ್ಲಿ ಮೇಲು ಕೇಳು ಇಲ್ಲ ಎನ್ನುವ ಸಂದೇಶ ಇವತ್ತಿನ ಎಲ್ಲಾ ಯುವ ಜನಾ೦ಗಕ್ಕೆ ಸ್ಪೂತಿ೯ ಉಂಟು ಮಾಡುತ್ತದೆ   ಓದಿ.   ಅಂದು ನನ್ನ ಡಿಗ್ರಿ ಓದಿದ ನಂತರ ಹಳ್ಳಿಯಲ್ಲಿ ಏನು ಮಾಡಲಾಗದೆ ಮೈಸೂರಿಗೆ ಇಡೀ ನಮ್ಮ ಕುಟುಂಬ ಬಂದೆವು. ಅಣ್ಣ ಅಲ್ಲೆ ಇದ್ದ ಕಾರಣ ಒಂದು ಚಿಕ್ಕ ಮನೆಯಲ್ಲಿ ನಾನು,ಅವ್ವ, ಅಪ್ಪ ಅಣ್ಣನ ಸಂಸಾರ ಚಿಕ್ಕ ಜಾಗದಲ್ಲೇ ಇದ್ದೆವು. ನನ್ನ ಕೆಲಸ ಕೆಲಸ ಹುಡುಕುವುದು ಊಟ ಮಾಡುವುದು.ಕೆಲ ದಿನಗಳವರೆಗೆ ಇಷ್ಟೇ ಆಗಿತ್ತು ನನ್ನ ದಿನಚರಿ. ಸುಮಾರು ದಿನಗಳ ನಂತರ ಅಪ್ಪ ನನ್ನನ್ನು ಕರೆದು ನೋಡು ಮಗ, ನಾವೀಗ ಇರುವುದು ನಿನ್ನ ಅಣ್ಣನ ಮನೆಯಲ್ಲಿ ಇರುವುದು, ಯಾರೇ ಆಗಿರಲಿ ಎಷ್ಟು ದಿನ ಅಂತ ಸುಮ್ಮನೆ ಕುಳಿತು ಊಟ ಮಾಡುವುದು..ಬೇಡ ಇದು ಸರಿಯಲ್ಲ, ಕೆಲಸ ಸಿಕ್ಕಿಲ್ಲ ಅಂತಾ ಸುಮ್ಮನೆ ಕುಳಿತುಕೊಂಡಿರುವುದು ಸರಿಯಲ್ಲ. ಏನಾದರೂ ಮಾಡು ನಾನು ಕೂಡ ನಿನಗೆ ಬೆಂಬಲ ಕೊಡುತ್ತಿನಿ ಅಂತ ಹೇಳಿದರು. ನನ್ನ ಬಳಿ ಒಂದ

ಗುಜ್ ಹಲಸು ಎಂಬ ಖಾದ್ಯದ ರಾಣಿ

      ಗುಜ್ ಹಲಸು ಮತ್ತು ಅದರ ತವಾ ಫ್ರೈ    ಗುಜ್ ಹಲಸು, ಜೀವ್ ಹಲಸು, ಜೀ ಗುಜ್, ಬೇರ್ ಹಲಸು, ನೀರ್ ಹಲಸು ಮತ್ತು ದೀವ್ ಹಲಸು ಅಂತ ವಿವಿದ ನಾಮಾವಳಿಯ ಈ ಹಲಸಿನಿಂದ ವಿವಿದ ಖಾದ್ಯ ಮಾಡುತ್ತಾರೆ.     ನನಗೆ ಇದು ತುಂಬಾ ಇಷ್ಟ ಪ್ರತಿ ವರ್ಷ ಶಿವಮೊಗ್ಗದಿಂದ ಪ್ರಕೃತಿ ಮುದ್ರಣದ ಪಿ.ಪುಟ್ಟಯ್ಯ ಅವರ ಮನೆಯ ಮರದಿಂದ ತೆಗೆದದ್ದು ಕಳಿಸಿ ಕೊಡುತ್ತಾರೆ.    ಹಾಗೆ ನಮ್ಮ ಊರಿನ ಮಾರುತಿ ಇಂಡಸ್ಟ್ರೀಸ್ ಮಾಲಿಕರಾದ ಪೂವಪ್ಪನವರು ಪ್ರತಿ ವಷ೯ ಅವರು ಬೆಳೆಸಿದ ಮರದಿಂದ ಕಿತ್ತು ಕಳಿಸುತ್ತಾರೆ.      ಈ ಬಾರಿ ಲಾಕ್ ಡೌನ್ ನಲ್ಲಿ ಇದರಿಂದ ಅನೇಕ ರೀತಿ ಖಾದ್ಯ ತಯಾರಿಸಿ ತಿಂದರೂ ಹೆಚ್ಚು ನೆನಪಲ್ಲಿ ಉಳಿಯುವುದು ಇದರ ಸ್ಲೈಸ್ ಕಟ್ ಮಾಡಿ ಮೆಣಸಿನ ಪುಡಿ, ಹುಣಿಸೇ ಹುಳಿ ಮತ್ತು ಉಪ್ಪಿನ ಮಸಾಲೆಯಲ್ಲಿ ಹಚ್ಚಿಟ್ಟು ನಂತರ ತವಾದಲ್ಲಿ ಹುರಿದರೆ ಅಂಜಲ್ ಮೀನಿನ ಫ್ರೈ ಮೀರಿಸುವಂತ ಖಾದ್ಯ ತಯಾರಾಗುತ್ತದೆ  ಇದು ಈ ಜೀ ಹಲಸಿನ ವಿಶೇಷತೆ.   

ಸಾಗರದ ಗುರುಮೂತಿ೯ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಅವರಿಗೆ ಅಭಿನಂದನೆ

     ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಅಧ್ಯಕ್ಷರಾಗಿ ಸಾಗರದ ಗುರುಮೂತಿ೯ ಆಯ್ಕೆ ಅಭಿನಂದನೀಯ.   ಸಾಗರದ ಗುರು ಮೂತಿ೯ ಅಂತ ಸಾಗರದವರು ಕರೆದರೆ ಶಿಕಾರಿಪುರದವರು ಶಿಕಾರಿಪುರ ಗುರುಮೂತಿ೯ ಅಂತನೇ ಕರೆಯುತ್ತಾರೆ.     1979 - 80 ರಲ್ಲಿ ಸಾಗರ ತಾಲ್ಲೂಕಿನಲ್ಲಿ ಆರ್.ಎಸ್.ಎಸ್ ನ ಮು೦ಚೂಣಿಯಲ್ಲಿದ್ದವರು U H ರಾಮಪ್ಪ ಮತ್ತು ಅವರ ಶಿಷ್ಯರ೦ತೆ ಈ ಗುರುಮೂತಿ೯ .   ಬಿ.ಹೆಚ್ ರಸ್ತೆಯ ಲಕ್ಷ್ಮಿ ಸ್ವೀಟ್ಸ್ ಎದುರಿನ ಪುತ್ತೂರಾಯರ ಕಟ್ಟಡದ ಮೊದಲ ಅಂತಸ್ತಿನಲ್ಲಿ ಸುಮಾರು 16 ರೂಂ ಗಳನ್ನ ಸೇವಾ ಸಾಗರ ಸಂಸ್ಥೆಯಿ೦ದ ವಿದ್ಯಾಥಿ೯ಗಳಿಗೆ ಖಾಸಾಗಿ ವಿದ್ಯಾಥಿ೯ನಿಲಯವಾಗಿ ಪರಿವರ್ತಿಸಿದ್ದರು, ಪ್ರತಿ ರೂಮಿನಲ್ಲಿ ಇಬ್ಬರು ಇರಬಹುದಾಗಿತ್ತು ಇದಕ್ಕೆ ನಿಗದಿತ ಬಾಡಿಗೆ ನಿಗದಿ ಮಾಡಿದ್ದರು.    ಅದು ರಾಮಪ್ಪ ಮತ್ತು ಗುರುಮೂತಿ೯ಯವರ ಆಡಳಿತ ಕಛೇರಿಯೂ ಆಗಿತ್ತು, ನಾನು SSLC ಪರೀಕ್ಷೆ ತಯಾರಿಗೆ ಅಲ್ಲಿ ಸೇರಿದ್ದೆ ಅದು ಆರ್ ಎಸ್ ಎಸ್ ಪ್ರಮುಖರಾಗಿದ್ದ ಪ್ರಾಣೇಶರ ಶಿಪಾರಸ್ಸಿನಿಂದ.   ಅಲ್ಲಿ ಬೆಳಿಗ್ಗೆ 5ಕ್ಕೆ ನಮ್ಮನ್ನೆಲ್ಲ ಎಬ್ಬಿಸಿ ಸುಪ್ರಬಾತ ಒ೦ದು ಕಡೆ ಸೇರಿಸಿ ಕರಾಗ್ರೆ ವಸತೆ ಲಕ್ಷ್ಮಿ..... ಸಾಮೂಹಿಕವಾಗಿ ಹೇಳಿಸುತ್ತಿದ್ದರು ಈ ಗುರುಮೂತಿ೯.     ಬಿಜೆಪಿ ಪಕ್ಷ ಪ್ರಬುದ್ಧಮಾನಕ್ಕೆ ಬ೦ದಾಗ ಸಾಗರದಿಂದ ಒ0ದಲ್ಲ ಒ೦ದು ದಿನ UH ರಾಮಪ್ಪ ಅಥವ ಗುರುಮೂತಿ೯ ಶಾಸಕರಾಗುತ್ತಾರೆಂಬ ಸುದ್ದಿ ಇತ್ತು.     ನಂತರ ಗುರುಮೂತಿ೯ಯನ್ನ ಯಡೂರಪ್ಪನವರು RSS ಜೊತೆ

ಮಲೆನಾಡಿನ ಸಜ್ಜನ ವಿಶಿಷ್ಟ ವ್ಯಕ್ತಿತ್ವದ ಸಿದ್ಧಿ ವಿನಾಯಕ ಅಡಿಕೆ ಮ೦ಡಿ ಮಾಲಿಕರಾದ ಶ್ರೀ ಚಿಪ್ಪಳಿ ಗೊಪಾಲಕೃಷ್ಣ ರಾಯರಿಗೆ ಶ್ರದ್ದಾ೦ಜಲಿಗಳು

             ಶ್ರದ್ದಾ೦ಜಲಿಗಳು ಸಜ್ಜನ ಸಂಪನ್ನ ಮರೆಯಲಾರದ ವ್ಯಕ್ತಿತ್ವದ ಚಿಪ್ಪಳಿ ಗೋಪಾಲಕೃಷ್ಣರಾವ್      1991ರಲ್ಲಿ ಆನಂದಪುರಂ ಕನ್ನಡ ಯುವಕ ಸಂಘ ಡಾಕ್ಟರ್ ಮೋದಿಯವರ ಉಚಿತ ಕಣ್ಣಿನ ಚಿಕಿತ್ಸಾ ಶಿಭಿರ ಹಮ್ಮಿಕೊಂಡಿತ್ತು ಅದಕ್ಕಾಗಿ ಪೂರ್ವ ತಯಾರಿ ಸಭೆಯಲ್ಲಿ ಮುಂಬಾಳಿನ ಗೋಕುಲ್ ಪಾರಂನ ಪಾದರ್ ಜೋಸ್ ಅಧ್ಯಕ್ಷರನ್ನಾಗಿ ನನ್ನನ್ನ ಉಪಾಧ್ಯಕ್ಷ ನಾಗಿ ಆಯ್ಕೆ ಮಾಡಿ ಶಿಬಿರದ ಯಶಸ್ವಿಗೆ ಬೇಕಾದ ಸಂಪನ್ಮೂಲ ಕ್ರೂಡಿಕರಿಸುವ ಜವಾಬ್ದಾರಿ ಕೊಟ್ಟಿದ್ದರು.    ಆಗೆಲ್ಲ ಕಣ್ಣಿನ ಪೊರೆ ಬಂದು ಹತ್ತು ಇಪ್ಪತ್ತು ವರ್ಷ ಆದವರು ಇರುತ್ತಿದ್ದರು ಅವರು ಅವರ ಜೊತೆ ಇಬ್ಬರು ಬರುತ್ತಿದ್ದರು ಅವರಿಗೆ ಊಟ ವಸತಿ ವ್ಯವಸ್ಥೆ ಸುಮಾರು 7 ದಿನ ಮಾಡಬೇಕಾಗಿತ್ತು ಮತ್ತು ಮೋದಿಯವರ ಕಣ್ಣಿನ ಆಪರೇಷನ್ ಅಂದರೆ ತಮ್ಮ ಕಣ್ಣು ಸೇಪ್ ಎನ್ನುವಷ್ಟು ನಂಬಿಕೆ ಆದ್ದರಿಂದ ಶಿಬಿರಕ್ಕೆ ಪರೀಕ್ಷಿಸಿಕೊಳ್ಳಲು ಬರುವವರು ಎರೆಡು ಸಾವಿರದ ಹತ್ತಿರ ಇರುತ್ತಿದ್ದರು.    ಇವರಲ್ಲಿ ಪೊರೆ ತೆಗೆಯಬಹುದಾದ ಸುಮಾರು 300 ರಿಂದ 400 ಜನರಿಗೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡುತ್ತಿದ್ದರು ಸುಮಾರು ಸಾವಿರ ಜನರಿಗೆ ಉಟೋಪಚಾರ ಅನಿವಾಯ೯.   ಈ ನೇತ್ರ ಚಿಕಿತ್ಸೆಗಾಗಿ ದಾನಿಗಳನ್ನ ಸಂಪಕಿ೯ಸುವ ಸಂದಭ೯ದಲ್ಲಿ ಪಾದರ್ ಜೋಸ್ ನನ್ನನ್ನ ಅನೇಕ ಶ್ರೀಮಂತರ ಹತ್ತಿರ ಕರೆದೊಯ್ದಿದ್ದರು ನಾನು ರಾಜಕೀಯ ಕ್ಷೇತ್ರಕ್ಕೆ ಬಂದಿರಲಿಲ್ಲ ಹಾಗಾಗಿ ನನಗೆ ಹೆಚ್ಚಿನವರ ಪರಿಚಯ ಇರಲಿಲ್ಲ.    ಅದೇ ಮೊದಲ ಸಾರಿ ನಾ

ಲಾಕ್ ಡೌನ್ ಡೈರಿ - 48. ಭಾರತ ಚೀನ ಯುದ್ದ ಬೇಡವೇ ಬೇಡ.

ಕೊರಾನಾ ಲಾಕ್ ಡೌನ್ ಡೈರಿ -48        17-ಜೂನ್ -2020 ಭಾರತ ಚೀನಾ ಯುದ್ದ ಬೇಡವೇ ಬೇಡ ಸ್ಯೆನಿಕರ ಸಾವಿನ ಸಂಖ್ಯೆಯಿ೦ದ ಬೀಗುವುದು ಬೇಡ.     ಬಾರತ ಚೀನ ಗಡಿ ತಗಾದೆ ಈ ಕೊರಾನ ಗಂಡಾಂತಕಾರಿ ಸನ್ನಿವೇಶದಲ್ಲಿ ತಕ್ಷಣ ಮಾತುಕತೆ ಮತ್ತು ಸಂದಾನದಲ್ಲಿ ಮುಕ್ತಾಯವಾಗಲಿ ಎಂದು ಹಾರೈಸೋಣ ಯಾಕೆಂದರೆ 50 ದಿನದ ಲಾಕ್ ಡೌನ್ ಸುದಾರಿಸಿಕೊಳ್ಳುವುದೆಷ್ಟು ಕಷ್ಟ ಅಂತ ಈಗಷ್ಟೆ ಅರಿತಿದಿದ್ದೇವೆ ಇನ್ನು ಭಾರತ ಚೀನಾ ಯುದ್ದ ಆದರೆ ಗೆಲುವು ಸೋಲುಗಳಿಗಿಂತ ದೇಶದ ಆಂತರಿಕ ಆರೋಗ್ಯ ತುತು೯ ಸ್ಥಿತಿ ನಿಭಾಯಿಸಲು ಪಡುತ್ತಿರುವ ಕಷ್ಟದ ಈ ಸಂದಭ೯ ಯುದ್ದೊನ್ಮಾದದ ಸಮಯವಂತೂ ಆಗಿರುವುದಿಲ್ಲ.   ಆಗ ಕೇಂದ್ರ ರಕ್ಷಣಾ ಸಚಿವರಾಗಿದ್ದ ಜಾಜ್೯ ಪನಾ೯೦ಡೀಸ್ ಹೇಳಿಕೆ ನೆನಪಿಸಿಕೊಳ್ಳಿ ನಮಗೆ ಯಾವತ್ತಿದ್ದರೂ ಚೀನಾದಿಂದ ತೊಂದರೆ ಇದೆ ನಮಗೆ ನಿಜವಾದ ಶತೃ ರಾಷ್ಟ್ರ ಚೀನಾ ದೇಶ ಪಾಕಿಸ್ತಾನವಲ್ಲ ಅಂದದ್ದು.    ಚೀನಾ ದಿನ ಒಳಕೆ ವಸ್ತು ಬಹಿಷ್ಕಾರ ಅಷ್ಟು ಸುಲಭ ಸಾಧ್ಯವಿಲ್ಲ, ಒಂದು ಕಡೆ ವ್ಯಾಪಾರ ವ್ಯವಹಾರದ ಬಾಗಿಲು ತೆರೆದು ಕೊಂಡು ಇನ್ನೊಂದು ಕಡೆ ದೇಶದ ಒಳಗೆ ತಂದು ಮಾರಾಟಕ್ಕೆ ಇಟ್ಟ ಮೇಲೆ ಬಹಿಷ್ಕಾರ ಸಾಧ್ಯವಿಲ್ಲ.    ನಮ್ಮ ಸ್ಯೆನಿಕರು 20 ಜನ ವೀರ ಮರಣ ಹೊಂದಿರುವ ನೋವಿನ ಸುದ್ದಿಗಿಂತ ಚೀನಿ ಸೈನಿಕರು 43 ಸೈನಿಕರನ್ನ ಹತ್ಯೆ ಮಾಡಿದ್ದೇವೆ ಎಂಬ ಸುದ್ದಿ ವೈಭವಿಕರಿಸುವುದು ಸರಿ ಅನ್ನಿಸುವುದಿಲ್ಲ.   #ನಮಗೆ_ಈ_ಸಂದಭ೯_ಯುದ್ದ_ಬೇಕಾಗಿಲ್ಲ_ಎನ್ನುವ_ಸಂದೇಶಕ್ಕೆ_ಮಾತ್ರ_

ಕೊರಾನಾ ಲಾಕ್ ಡೌನ್ ಸಂದಭ೯ದಲ್ಲಿ ರಕ್ತದಾನದಲ್ಲಿ ಶತಕ ಬಾರಿಸಿ ದಾಖಲೆ ನಿಮಿ೯ಸಿರುವ ಶಿವಮೊಗ್ಗದ ಚಿರಪರಿಚಿತ ಜನಾನುರಾಗಿ ದರಣೇOದ್ರ ದಿನಕರ್

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 47.    ದಿನಾ೦ಕ: 16-ಜೂನ್ -2020. #ಕೊರಾನಾ_ಲಾಕ್_ಡೌನ್_ಸಂದಭ೯ದಲ್ಲೇ_ರಕ್ತದಾನದ_ಶತಕ_ಬಾರಿಸಿದ_ದರಣೇoದ್ರದಿನಕರ್  ರಕ್ತದಾನಕ್ಕೆ ಜನರನ್ನ ಸಂಘ ಸಂಸ್ಥೆಯನ್ನ ಪ್ರೇರೇಪಿಸಿ ರಕ್ತ ಸಂಗ್ರಹಿಸಿ ದಿನದ 24 ಗಂಟೆ ರಕ್ತ ಬೇಕಾದವರಿಗೆ ಆಪತ್ಕಾಲಕ್ಕೆ ಜೀವ ಉಳಿಸುವ ಸಾಥ೯ಕ ಸೇವೆ ಸುಮಾರು 35 ವಷ೯ದಿಂದ ನಡೆಸಿಕೊಂಡು ಬಂದಿರುವ ಸ್ಟತಃ ರಕ್ತದಾನಿ ಆಗಿರುವ ಜೈನ ಸಮುದಾಯದ ಶ್ರೀ ದರಣೇOದ್ರ ದಿನಕರ್ ಜಿಲ್ಲೆಯಲ್ಲಿ ಒಂದು ದಾಖಲೆ ಮಾಡಿದ್ದಾರೆ.     ಅದು ದಿನಾಂಕ 14 ಜೂನ್ 2020 ರ ರಕ್ತದಾನಿಗಳ ದಿನಾಚಾರಣೆಯ೦ದು ಮತ್ತು ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವದ ದಿನ ಇವರು ಮಾಡಿದ ರಕ್ತದಾನ 100 ನೇ ರಕ್ತದಾನ.    ಶಿವಮೊಗ್ಗ ಜಿಲ್ಲೆಯ ರೆಡ್ ಕ್ರಾಸ್‌ ಸಂಸ್ಥೆ ನಿದೇ೯ಶಕರಾಗಿರುವ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಂಜೀವಿನಿ ಬ್ಲಡ್ ಬ್ಯಾಂಕ್ ನ ಉಸ್ತುವಾರಿ ಹೊಂದಿರುವ ದಿನಕರ್ ಪರಿಚಯ ಇಲ್ಲದವರೆ ಇಲ್ಲ.   ಮಧ್ಯರಾತ್ರಿಗೂ ಆಸ್ಪತ್ರೆಯಲ್ಲಿರುವವರ ರಕ್ತ ಬೇಕಾದವರ ಅಂದು ಬಂದುಗಳು ಇವರಿಗೆ ಪೋನಾಯಿಸಿ ಬೇಕಾದ ಗ್ರೂಪಿನ ರಕ್ತ ಪಡೆಯುತ್ತಾರೆ.   ಸಂಜೀವಿನಿ ಬ್ಲಡ್ ಬ್ಯಾಂಕ್ ಗೋಪಿ ಸಕ೯ಲ್ ನಿಂದ ಜ್ಯೂವೆಲ್ ರಾಕ್ ಹೋಟೆಲ್ ರಸ್ತೆಯಲ್ಲಿರುವ ಆಭರಣ ಜ್ಯೂವೆಲ್ಸ್ ನ ಕೆಳ ಅಂತಸ್ತಿನಲ್ಲಿದೆ ಅಲ್ಲಿ ದಿನದ ಹೆಚ್ಚು ಹೊತ್ತು ದಿನಕರ್ ಇರುತ್ತಾರೆ.