#ಗ್ರಾಮ_ಪಂಚಾಯತ್_ಸದಸ್ಯರ_ನಾಮಕರಣ_ಶಾಸಕರ_ಅಂಗಳದಲ್ಲಿ.
ಮುಂದಿನ ಆರು ತಿಂಗಳು ಗ್ರಾಮ ಪಂಚಾಯತ್ ಚುನಾವಣೆ ಸಾಧ್ಯವಿಲ್ಲ, ಮುಂದಿನ ವರ್ಷ ಮಾಚ್೯ ನಂತರವೆ ಗ್ರಾಮ ಪಂಚಾಯಿತಿಗೆ ಚುನಾವಣೆ ಆದರೆ ಕನಿಷ್ಟ ಒಂದು ವರ್ಷ ಅವದಿ ಆಡಳಿತ ನಾಮ ನಿದೇ೯ಶನ ಸದಸ್ಯರೇ ಆಡಳಿತ ಮಾಡಲಿದ್ದಾರೆ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಗಳ ಆಡಳಿತ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷದ ನಿಯ೦ತ್ರಣಕ್ಕೆ ಬರಲಿದೆ.
ಇದರಿಂದ ಆ ಪಕ್ಷದ ಗ್ರಾಮ ಮಟ್ಟದ ಸಂಘಟನೆ ಬಲಗೊಳ್ಳುವ ಸಾಧ್ಯತೆಯೂ ಇದೆ ಜೊತೆಗೆ ಮುಂದಿನ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿಗೆ ಆ ಪಕ್ಷದವರೇ ಹೆಚ್ಚು ಆಯ್ಕೆಯೂ ಆಗಬಹುದು.
ಜೂನ್ ಕೊನೆಯಲ್ಲಿ 5000 ಗ್ರಾಮ ಪಂಚಾಯತ್ ಅವದಿ ಮುಕ್ತಾಯಗೊಳ್ಳಲಿದ್ದು ಆಯಾ ವ್ಯಾಪ್ತಿಯ ಶಾಸಕರು ಈಗಾಗಲೇ ಗ್ರಾಮ ಮಟ್ಟದ ಕಾಯ೯ಕತ೯ರ ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಅನುಮೋದನೆಗೆ ಕಳಿಸುತ್ತಿದ್ದಾರೆ.
ಗ್ರಾಮ ಮಟ್ಟದಲ್ಲಿ ಶಾಸಕರಿಗೆ ಯಾರು ಆಪ್ತರು ಅವರಿಗೆ ಸ್ಥಾನ ಭದ್ರ ಹಾಗಂತ ಅವಕಾಶ ತಪ್ಪಿದವರ ನಡೆ ಮುಂದಿನ ಚುನಾವಣೆಯಲ್ಲಿ ಏನಾಗಬಹುದೆಂಬ ಕುತೂಹಲವೂ ಇದೆ.
ನಾಮಕರಣ ಮಾಡಿದವರು ಮುಂದಿನ ಚುನಾವಣೆಯಲ್ಲಿ ಸ್ಪದಿ೯ಸಬಾರದೆಂಬ ಒಳ ಒಪ್ಪಂದ ಇರುತ್ತದೆ ಎನ್ನಲಾಗಿದೆ ಆದರೆ ಗ್ರಾಮ ಪಂಚಾಯತ್ ಚುನಾವಣೆ ಪಕ್ಷಾತೀತವಾಗಿ ನಡೆಯುವುದರಿಂದ ಬಿ ಪಾರಂ ಬೇಕಾಗಿಲ್ಲ ಆದ್ದರಿಂದ ನಾಮಕರಣ ಆದವರೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಕಾಯ೯ಕರ್ತರಿಗೇ ಸ್ಪದೆ೯ ನೀಡುತ್ತಾರೆ ಎನ್ನುವುದು ತಳ್ಳಿ ಹಾಕಲಾರದು.
ಹಾಗಾಗಿ ಸ್ಥಳಿಯ ಶಾಸಕರಿಗೆ ಬಿಸಿ ತುಪ್ಪ ಆಗಲಿದೆ ಈ ಗ್ರಾಮ ಪಂಚಾಯತ್ ನಾಮ ನಿರ್ದೇಶನ ಮಾಡುವ ಕೆಲಸ.
Comments
Post a Comment