ಕೊರಾನಾ ಲಾಕ್ ಡೌನ್ ಸಂದಭ೯ದಲ್ಲಿ ರಕ್ತದಾನದಲ್ಲಿ ಶತಕ ಬಾರಿಸಿ ದಾಖಲೆ ನಿಮಿ೯ಸಿರುವ ಶಿವಮೊಗ್ಗದ ಚಿರಪರಿಚಿತ ಜನಾನುರಾಗಿ ದರಣೇOದ್ರ ದಿನಕರ್
ಕೊರಾನಾ ಲಾಕ್ ಡೌನ್ ಡೈರಿ -2020
ಲೆಟರ್ ನಂಬರ್- 47.
ದಿನಾ೦ಕ: 16-ಜೂನ್ -2020.
ರಕ್ತದಾನಕ್ಕೆ ಜನರನ್ನ ಸಂಘ ಸಂಸ್ಥೆಯನ್ನ ಪ್ರೇರೇಪಿಸಿ ರಕ್ತ ಸಂಗ್ರಹಿಸಿ ದಿನದ 24 ಗಂಟೆ ರಕ್ತ ಬೇಕಾದವರಿಗೆ ಆಪತ್ಕಾಲಕ್ಕೆ ಜೀವ ಉಳಿಸುವ ಸಾಥ೯ಕ ಸೇವೆ ಸುಮಾರು 35 ವಷ೯ದಿಂದ ನಡೆಸಿಕೊಂಡು ಬಂದಿರುವ ಸ್ಟತಃ ರಕ್ತದಾನಿ ಆಗಿರುವ ಜೈನ ಸಮುದಾಯದ ಶ್ರೀ ದರಣೇOದ್ರ ದಿನಕರ್ ಜಿಲ್ಲೆಯಲ್ಲಿ ಒಂದು ದಾಖಲೆ ಮಾಡಿದ್ದಾರೆ.
ಅದು ದಿನಾಂಕ 14 ಜೂನ್ 2020 ರ ರಕ್ತದಾನಿಗಳ ದಿನಾಚಾರಣೆಯ೦ದು ಮತ್ತು ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವದ ದಿನ ಇವರು ಮಾಡಿದ ರಕ್ತದಾನ 100 ನೇ ರಕ್ತದಾನ.
ಶಿವಮೊಗ್ಗ ಜಿಲ್ಲೆಯ ರೆಡ್ ಕ್ರಾಸ್ ಸಂಸ್ಥೆ ನಿದೇ೯ಶಕರಾಗಿರುವ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಂಜೀವಿನಿ ಬ್ಲಡ್ ಬ್ಯಾಂಕ್ ನ ಉಸ್ತುವಾರಿ ಹೊಂದಿರುವ ದಿನಕರ್ ಪರಿಚಯ ಇಲ್ಲದವರೆ ಇಲ್ಲ.
ಮಧ್ಯರಾತ್ರಿಗೂ ಆಸ್ಪತ್ರೆಯಲ್ಲಿರುವವರ ರಕ್ತ ಬೇಕಾದವರ ಅಂದು ಬಂದುಗಳು ಇವರಿಗೆ ಪೋನಾಯಿಸಿ ಬೇಕಾದ ಗ್ರೂಪಿನ ರಕ್ತ ಪಡೆಯುತ್ತಾರೆ.
ಸಂಜೀವಿನಿ ಬ್ಲಡ್ ಬ್ಯಾಂಕ್ ಗೋಪಿ ಸಕ೯ಲ್ ನಿಂದ ಜ್ಯೂವೆಲ್ ರಾಕ್ ಹೋಟೆಲ್ ರಸ್ತೆಯಲ್ಲಿರುವ ಆಭರಣ ಜ್ಯೂವೆಲ್ಸ್ ನ ಕೆಳ ಅಂತಸ್ತಿನಲ್ಲಿದೆ ಅಲ್ಲಿ ದಿನದ ಹೆಚ್ಚು ಹೊತ್ತು ದಿನಕರ್ ಇರುತ್ತಾರೆ.
ದಿನಕರ್ ರಕ್ತದ ಗುಂಪು AB+ , ಇವರ ಸೆಲ್ ನಂಬರ್9844101866.
Comments
Post a Comment